ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರದ ಸೀರೆಗಳೂ ಸಹ ಮಾರ್ಕೆಟ್ ಅಲ್ಲಿ ಜೋರು

ಕಿರಿಕ್ ಪಾರ್ಟಿ ಖ್ಯಾತಿಯ ನಮ್ಮ ಕೊಡಗಿನ ಬೆಡಗಿಯ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದೆ ಇಟ್ಟಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಈ ಬಣ್ಣದ ಲೋಕವೇ ಹಾಗೆ. ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದು ಚಿತ್ರ ಯಶಸ್ಸು ಕಂಡರೆ ಸಾಕು. ಇನ್ನು ಸ್ಟಾರ್ ಪಟ್ಟ ಮೂಡಿಗೆರಿದರಂತೂ ಮುಗಿಯಿತು. ಈಗ ರಶ್ಮಿಕಾ ಅವರು ಕೂಡ ಯಶಸ್ಸಿನ ಶಿಖರ ತಲುಪುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಕ್ರಷ್ ಎಂದೇ ಹೆಸರಾಗಿದ್ದ ರಶ್ಮಿಕಾ ಮಂದಣ್ಣ, ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿಯೂ ನಟಿಯಾಗಿ ನಟಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು. ಕನ್ನಡದ, ತಮಿಳು, ತೆಲುಗು ಭಾಷೆಯ ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ.

ಆದರೆ ರಶ್ಮಿಕಾ ಅವರಿಗೆ ಈ ಅದೃಷ್ಟ ದೊರಕಿದೆ. ಪುಷ್ಪಾ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿದ ರಶ್ಮಿಕಾ, ಪುಷ್ಪ ಟು ಚಿತ್ರದಲ್ಲೂ ಮಿಂಚಲಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲೂ ರಶ್ಮಿಕ ಅವರದೇ ಹವಾ. ಇನ್ನೊಂದು ಮೈಲಿಗಲ್ಲು ಅನ್ನುವಂತೆ ಇವರು ಬಾಲಿವುಡ್ ನಲ್ಲೂ ಸಿನಿಮಾ ಮಾಡುತ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಏಕೆಂದರೆ ಇವರು ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿವೆ. ಇದೀಗ ರಶ್ಮಿಕಾ ಮಂದಣ್ಣ ಅವರ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಯಶಸ್ಸಿನ ನಂತರ, ಪುಷ್ಪ ಸಿನಿಮಾದ ಶ್ರೀವಲ್ಲಿ ಸೀರೆಗಳು ಮಾರ್ಕೆಟ್ ಗೆ ಎಂಟ್ರಿ ಕೊಟ್ಟಿವೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯದ ಪುಷ್ಪಾ ಸಿನಿಮಾ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಸಿನಿಮಾದ ಹಾಡುಗಳಂತೂ ಭರ್ಜರಿ ಹಿಟ್ ಆಗಿವೆ. ಈ ಸಿನಿಮಾದ ಸಾಮಿ ಸಾಮಿ ದೃಶ್ಯಗಳನ್ನು ಬಳಸಿಕೊಂಡು ಸೂರತ್ನ ವಸ್ತ್ರ ವಿನ್ಯಾಸಕರೊಬ್ಬರು ಸೀರೆಯನ್ನು ರೆಡಿ ಮಾಡಿದ್ದಾರೆ. ವಿಶೇಷವೆಂದರೆ ಈ ಸೀರೆಗಳ ಮೇಲೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಸೀರೆಗಳ ಮೇಲಿವೆ. ಈ ಸೀರೆಗಳಿಗೆ ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್ ಘಡ್ ನಲ್ಲಿ ಸಖತ್ ಡಿಮ್ಯಾಂಡ್ ಬಂದಿದೆ. ಅದೇನೇ ಇರಲಿ ನಮ್ಮ ಕನ್ನಡದ ಹುಡುಗಿಯೊಬ್ಬಳು ಇಷ್ಟರಮಟ್ಟಿಗೆ ಫೇಮಸ್ ಆಗುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ಸಂಗತಿ.

%d bloggers like this: