ರಶ್ಮಿಕಾ ಮಂದಣ್ಣ ಅವರ ಜೊತೆ ಮದುವೆಯ ಬಗ್ಗೆ ಖಡಕ್ ಆಗಿ ಉತ್ತರಿಸಿದ ವಿಜಯ್ ದೇವರಕೊಂಡ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟರು. ಮೊದಲ ಚಿತ್ರದಲ್ಲಿಯೇ ಭರ್ಜರಿ ಯಶಸ್ಸನ್ನು ಕಂಡು ಎಲ್ಲೆಡೆ ಸುದ್ದಿಯಾದವರು. ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ಟಾಲಿವುಡ್ ಗೆ ಎಂಟ್ರಿ ಪಡೆದುಕೊಂಡರು ರಶ್ಮಿಕಾ. ಕರ್ನಾಟಕದ ಕ್ರಶ್ ಎಂದು ಹೆಸರಾಗಿದ್ದ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗಳಲ್ಲಿ ಸಾಲುಸಾಲು ಅವಕಾಶಗಳನ್ನು ಪಡೆದುಕೊಂಡರು. ಇದರ ಮಧ್ಯೆಯೇ ರಕ್ಷಿತ್ ಶೆಟ್ಟಿ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ಕೆಲವು ತಿಂಗಳುಗಳ ನಂತರ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡರು. ಮುಟ್ಟಿದ್ದೆಲ್ಲಾ ಚಿನ್ನವೆಂಬಂತೆ ಸಾಲುಸಾಲು ರಶ್ಮಿಕಾ ಅವರ ಚಿತ್ರಗಳು ಭರ್ಜರಿ ಯಶಸ್ಸನ್ನು ಪಡೆದುಕೊಂಡವು. ಕರ್ನಾಟಕದ ಕ್ರಶ್ ಆಗಿದ್ದ ರಶ್ಮಿಕಾ, ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದರು.

ರಕ್ಷಿತ್ ಶೆಟ್ಟಿ ಅವರೊಂದಿಗೆ ಸಂಬಂಧವನ್ನು ಮುರಿದುಕೊಂಡ ನಂತರ, ರಶ್ಮಿಕಾ ಅವರ ಹೆಸರು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರೊಂದಿಗೆ ಕೇಳಿಬರುತ್ತಿತ್ತು. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಹಲವು ಅಭಿಮಾನಿಗಳು ಈ ಜೋಡಿಯನ್ನು ಕೇವಲ ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲದೇ, ಆಫ್ ಸ್ಕ್ರೀನ್ನಲ್ಲಿ ನೋಡೋಕೆ ಇಷ್ಟಪಡುತ್ತಿದ್ದರು. ಆಗಿನಿಂದ ಇಂದಿನವರೆಗೂ ಇವರಿಬ್ಬರ ಮಧ್ಯೆ ರಿಲೇಶನ್ಶಿಪ್ ಇದೆ ಎಂದು ಸುದ್ದಿ ಹರಡುತ್ತಲೇ ಇದೆ. ಆದರೆ ಇದರ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ದೇವರಕೊಂಡ ಆಗಲಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಭಾರತದಾದ್ಯಂತ ಫ್ಯಾನ್ ಫಾಲೋವಿಂಗ್ ಹೊಂದಿರುವ ಈ ಜೋಡಿಗಳಿಗೆ ಸದ್ಯಕ್ಕೆ ಬಾಲಿವುಡ್ ನಲ್ಲೂ ಆಫರ್ ಬರುತ್ತಿದೆ. ಹೀಗಾಗಿ ಇಬ್ಬರೂ ಬಾಲಿವುಡ್ ನಲ್ಲಿ ಸಕ್ರಿಯರಾಗಿ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಇವರಿಬ್ಬರೂ ಜೊತೆಯಾಗಿ ಜಿಮ್ ಮಾಡುತ್ತಾರೆ. ಪದೇಪದೇ ಜೊತೆಯಾಗಿ ಡಿನ್ನರ್ ಮಾಡುತ್ತಲೇ ಇರುತ್ತಾರೆ. ಇವರಿಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಸುದ್ದಿ ಹರಡುತ್ತಲೇ ಇದೆ. 2022 ರಲ್ಲಿ ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಒಟ್ಟಿಗೆ ರಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು ಹೊಸ ವರ್ಷವನ್ನು ಆಚರಿಸಲು ಗೋವಾದಲ್ಲಿ ಒಂದೇ ರೆಸಾರ್ಟ್ ನಲ್ಲಿ ಇದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳು ಸುಳಿದಾಡುತ್ತಿದ್ದವು.

ಈ ವರದಿಗಳ ಬಗ್ಗೆ ಇವರಿಬ್ಬರೂ ಪ್ರತಿಕ್ರಿಯಿಸಿದ್ದರೂ, ಇತ್ತೀಚೆಗೆ ಇವರು ಡಿನ್ನರ್ ಡೇಟ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಲವಾರು ಊಹಾಪೋಹಗಳಿಗೆ ಕಾರಣವಾಯಿತು. ಪ್ರಸ್ತುತ ವಿಜಯ್ ತಮ್ಮ ಮೊದಲ ಬಾಲಿವುಡ್ ಸಿನಿಮಾ ಲೈಗರ್ ಚಿತ್ರದ ಚಿತ್ರೀಕರಣದಲ್ಲಿ ಇದ್ದಾರೆ. ರಶ್ಮಿಕಾ ಕೂಡ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜನೂ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ. ರಶ್ಮಿಕಾ ಮುಂಬೈನಲ್ಲಿ ಒಂದು ಅಪಾರ್ಟ್ಮೆಂಟ್ ಸಹ ಹೊಂದಿದ್ದಾರೆ ಎಂದು ಸುದ್ದಿಯಾಗಿದೆ. ಇವರಿಬ್ಬರೂ ಎಂದಿಗೂ ಅವರು ಸಂಬಂಧದಲ್ಲಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿಲ್ಲ. ಹಾಗೆಯೇ ಇದನ್ನು ಖಚಿತಪಡಿಸಿಯೂ ಇಲ್ಲ.

ಹೀಗಾಗಿ ಇವರಿಬ್ಬರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂದು ಎಲ್ಲರೂ ತಿಳಿದಿದ್ದರು. ಆದರೆ ಇತ್ತೀಚಿಗೆ ವಿಜಯ್ ದೇವರಕೊಂಡ ಅವರು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಹಾಗೂ ರಶ್ಮಿಕಾ ಅವರ ಮದುವೆ ಸುದ್ದಿಯನ್ನು ವಿಜಯ್ ಅವರು ನಾನ್ಸೆನ್ಸ್ ಎಂದು ಕರೆಯುವ ಮೂಲಕ ಪರೋಕ್ಷವಾಗಿ ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ವಿಜಯ್ ಅವರು ಎಂದಿನಂತೆ ಇದು ನಾನ್ಸೆನ್ಸ್, ಸುದ್ದಿ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.

%d bloggers like this: