ರಶ್ಮಿಕಾ ಮಂದಣ್ಣ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಒಂದೇ ವಾರಕ್ಕೆ ಮತ್ತೊಂದು ಅವಕಾಶ

ಒಂದು ಅವಕಾಶ ಸಿಕ್ಕರೆ ಸಾಕು ಅದನ್ನೇ ಸಂಪೂರ್ಣವಾಗಿ ಶ್ರದ್ಧೆಯಿಂದ ಬಳಸಿಕೊಂಡು ತುಂಬಾ ಎತ್ತರಕ್ಕೆ ಹೋದೆ ಎಷ್ಟು ಜನ ಇದ್ದಾರೆ. ಹಾಗೆಯೇ ಕಿರಿಕ್ ಪಾರ್ಟಿ ಎಂಬ 2016 ರ ಬ್ಲಾಕ್ಬಸ್ಟರ್ ಚಲನ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕ ಮಂದಣ್ಣ ಮತ್ತೆ ತಿರುಗಿ ಹಿಂದೆ ನೋಡಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಬೇರೆ ಬೇರೆ ಭಾಷೆಯ ದೊಡ್ಡ ನಟರುಗಳ ಜೊತೆ ಅಭಿನಯಿಸುವ ಅವಕಾಶ ರಶ್ಮಿಕ ಅವರನ್ನು ಹುಡುಕಿಕೊಂಡು ಬಂದವು. ಆದರೆ ಇತ್ತೀಚಿಗೆ ಹಿಂದಿ ಚಿತ್ರರಂಗಕ್ಕೂ ಕೂಡ ರಶ್ಮಿಕ ಮಂದಣ್ಣ ಕಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಾಯಕ ನಟಿಯಾಗಿ ಮಿಷನ್ ಮಜ್ನು ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಹೇಳಿದ್ದರು. ಅದನ್ನು ಕೇಳಿದ ಎಷ್ಟು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಈ ಸುದ್ದಿ ಬಂದು ಇನ್ನೂ ಒಂದು ವಾರವಷ್ಟೇ ಆಗಿಲ್ಲ ಈಗಾಗಲೇ ಬಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದು ಸಹಿ ಕೂಡ ಹಾಕಿದ್ದಾರೆ. ಈ ಚಿತ್ರದ ಪ್ರಮುಖ ವಿಶೇಷತೆಯೇನೆಂದರೆ ರಶ್ಮಿಕ ಮಂದಣ್ಣ ಜೊತೆಗೆ ರಶ್ಮಿಕ ತಂದೆಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಭಾರತ ಚಿತ್ರರಂಗದ ಮೇರುನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು.

ಹೌದು ದೇಶದ ವಿವಿಧ ಭಾಷೆಯ ಎಷ್ಟು ನಟ-ನಟಿಯರಿಗೆ ಜೀವನದಲ್ಲಿ ಒಮ್ಮೆಯಾದರೂ ಅಮಿತಾಬ ಬಚ್ಚನ್ ಅವರೊಂದಿಗೆ ಅಭಿನಯಿಸಬೇಕೆಂಬ ಹೆಬ್ಬಾಸೆ ಇರುತ್ತದೆ. ಆದರೆ ರಶ್ಮಿಕ ಮಂದನ್ನ ಅವರಿಗೆ ಅವರು ಉಹಿಸುವುದಕ್ಕಿಂತ ಮೊದಲೇ ಅವರಿಗೆ ಈ ಸೌಭಾಗ್ಯ ಒದಗಿ ಬಂದಿದೆ. ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಈ ಹೊಸ ಚಿತ್ರದ ಹೆಸರು ಡೆಡ್ಲಿ. ಹೌದು ಶಾಂದಾರ್ ಹಾಗೂ ಕಳೆದ ವರ್ಷ ಬಿಡುಗಡೆಗೊಂಡ ಯಶಸ್ವಿ ಚಿತ್ರ ಸೂಪರ್ 30 ಚಿತ್ರದ ನಿರ್ದೇಶಕರಾದ ವಿಕಾಸ್ ಬಹ್ಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ರಶ್ಮಿಕ ಮಂದನ್ನ ಅವರ ಪಾಲಿಗೆ ನಿಜಕ್ಕೂ ಅದ್ಭುತ ಅವಕಾಶವಾಗಿದೆ.

ರಕ್ಷಿತ್ ಶೆಟ್ಟಿ ಅವರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕ ಮಂದಣ್ಣ ಕೆಲವೇ ವರ್ಷಗಳಲ್ಲಿ ಈ ಮಟ್ಟಕ್ಕೆ ಏರಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ, ಟಾಲಿವುಡ್ ಚಿತ್ರರಂಗದ ಮಹೇಶ್ ಬಾಬು ವಿಜಯ ದೇವರಕೊಂಡ ಆಯಿತು ಇದೀಗ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿರುವದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೊಸ ಪ್ರಾಯತ್ನಕ್ಕೆ ಕಾಲಿಟ್ಟಿರುವ ರಶ್ಮಿಕಾ ಅವರಿಗೆ ನಮ್ಮ ಕಡೆಯಿಂದ ಆಲ್ ದ ಬೆಸ್ಟ್.

%d bloggers like this: