ಕಿರಿಕ್ ಪಾರ್ಟಿ ಖ್ಯಾತಿಯ ನಮ್ಮ ಕೊಡಗಿನ ಬೆಡಗಿಯ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದೆ ಇಟ್ಟಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಈ ಬಣ್ಣದ ಲೋಕವೇ ಹಾಗೆ. ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದು ಚಿತ್ರ ಯಶಸ್ಸು ಕಂಡರೆ ಸಾಕು. ಇನ್ನು ಸ್ಟಾರ್ ಪಟ್ಟ ಮೂಡಿಗೆರಿದರಂತೂ ಮುಗಿಯಿತು. ಈಗ ರಶ್ಮಿಕಾ ಅವರು ಕೂಡ ಯಶಸ್ಸಿನ ಶಿಖರ ತಲುಪುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಕ್ರಷ್ ಎಂದೇ ಹೆಸರಾಗಿದ್ದ ರಶ್ಮಿಕಾ ಮಂದಣ್ಣ, ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿಯೂ ನಟಿಯಾಗಿ ನಟಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು.

ಕನ್ನಡದ, ತಮಿಳು, ತೆಲುಗು ಭಾಷೆಯ ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ರಶ್ಮಿಕಾ ಅವರಿಗೆ ಈ ಅದೃಷ್ಟ ದೊರಕಿದೆ. ಪುಷ್ಪಾ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿದ ರಶ್ಮಿಕಾ, ಪುಷ್ಪ ಟು ಚಿತ್ರದಲ್ಲೂ ಮಿಂಚಲಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲೂ ರಶ್ಮಿಕ ಅವರದೇ ಹವಾ. ಇನ್ನೊಂದು ಮೈಲಿಗಲ್ಲು ಅನ್ನುವಂತೆ ಇವರು ಬಾಲಿವುಡ್ ನಲ್ಲೂ ಸಿನಿಮಾ ಮಾಡುತ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ.

ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಏಕೆಂದರೆ ಇವರು ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿವೆ. ಇತ್ತೀಚೆಗೆ ದಳಪತಿ ವಿಜಯ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟರ ಜೊತೆ ನಟಿಸುವ ಅವಕಾಶವನ್ನು ರಶ್ಮಿಕಾ ಗಿಟ್ಟಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬುದು ಬಹುತೇಕ ನಟಿಯರ ಆಸೆ.

ರಶ್ಮಿಕ ಮಂದಣ್ಣ ಕೂಡ ಈ ಮೊದಲು ಒಂದು ಸಂದರ್ಶನದಲ್ಲಿ ದಳಪತಿ ವಿಜಯ್ ಜೊತೆ ನಟಿಸಬೇಕು ಎಂದು ಹೇಳಿದ್ದರು. ಈ ಮೂಲಕ ರಶ್ಮಿಕಾ ಅವರ ಅಸೆ ನೆರವೇರುತ್ತಿದ್ದೆ. ಈಗ ಸದ್ಯಕ್ಕೆ ವಿಜಯ್ ಅವರು ಬೀಸ್ಟ್ ಸಿನಿಮಾದಲ್ಲಿ ಬ್ಯುಸಿ ಇದ್ದು, ಮುಂದಿನ ಸಿನಿಮಾಗೆ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದೀಗ ಇನ್ನೊಬ್ಬ ಸ್ಟಾರ್ ನಟರ ಜೊತೆ ರಶ್ಮಿಕಾ ಅವರ ಹೆಸರು ಕೇಳಿಬರುತ್ತಿದೆ. ನಟ ರಾಮ್ ಚರಣ್ ಸದ್ಯಕ್ಕೆ ತ್ರಿಬಲ್ ಆರ್ ಚಿತ್ರದ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾದ ಬಳಿಕ ರಾಮ್ ಚರಣ್ ಅವರು ಹದಿನಾರನೇ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದು, ಇವರ ಹದಿನಾರನೇ ಚಿತ್ರಕ್ಕೆ ತಾತ್ಕಾಲಿಕವಾಗಿ ಆರ್ ಸಿ 16 ಎಂದು ಹೆಸರಿಡಲಾಗಿದೆ.

ಇದನ್ನು ನಿರ್ದೇಶಕ ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ನ ಬಿಕಿನಿ ಕ್ವೀನ್ ದಿಶಾ ಪಾಟ್ನಿ ರಾಮ್ ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ದಿಶಾ ಪಾಟ್ನಿ ಅವರ ಜಾಗಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಟ್ಟಾರೆಯಾಗಿ ಕನ್ನಡದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ಬೆಡಗಿ ಇದೀಗ ದೇಶಾದ್ಯಂತ ಹೆಸರು ಮಾಡುತ್ತಿರುವದಂತೂ ಸತ್ಯ,