ರಸ್ತೆ ಗುಂಡಿಗಳಿಂದ ನೀವು ಬಿದ್ದು ತೊಂದರೆ ಮಾಡಿಕೊಂಡರೆ ಈ ರೀತಿ ಅರ್ಜಿ ಹಾಕಿ ಪರಿಹಾರ ಹಣ ಪಡೆಯಬಹುದು

ಉದ್ಯಾನನಗರಿ ಸಿಲಿಕಾನ್ ಸಿಟಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ರಸ್ತೆ ಅಪ-ಘಾತಗಳಾಗುವುದು ಅತಿ ಸಾಮಾನ್ಯವಾದ ಸಂಗತಿ. ಈ ಬಹುತೇಕ ಅಪ-ಘಾತಗಳಿಗೆ ಮುಖ್ಯ ಕಾರಣ ರಸ್ತೆಗಳಲ್ಲಿರುವ ಗುಂಡಿಗಳಿಂದ ಎಂಬುದು ಎಲ್ಲರಿಗೂ ಗೊತ್ತು. ನಮ್ಮ ದೇಶದಲ್ಲಿನ ಭ್ರಷ್ಟಾಚಾರ ವ್ಯವಸ್ಥೆ ಯಾವ ಒಂದು ಕೆಲಸವನ್ನು ಪೂರ್ಣ ಮಾಡಲು ಬಿಡುವುದಿಲ್ಲ ಹಾಗಾಗಿ ರಸ್ತೆ ಗುಂಡಿಗಳು ಭ್ರಷ್ಟಾಚಾರದ ಫಲಪ್ರಧಾನ ಎನ್ನಬಹುದು. ಪ್ರತಿವರ್ಷ ಸಾವಿರಾರು ಜನ ಈ ರಸ್ತೆ ಗುಂಡಿಗಳಿಂದ ಅಪ-ಘಾತಕ್ಕೀಡಾಗಿ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ, ಇನ್ನೂ ಕೆಲವರು ಸಣ್ಣ ಪುಟ್ಟ ಗಾ-ಯಗಳನ್ನು ಮಾಡಿಕೊಳ್ಳುತ್ತಾರೆ, ಮತ್ತೆ ಕೆಲವರು ದುರ್ವಿಧಿಯ ಕಾರಣ ಮರ-ಣಕ್ಕೂ ತುತ್ತಾಗುತ್ತಾರೆ.

ಆದರೆ ಇದ್ಯಾವುದಕ್ಕೂ ಸರ್ಕಾರಗಳಾಗಲಿ ಅಥವಾ ಬೆಂಗಳೂರಿನ ಸಮಗ್ರ ಅಧಿಕಾರಗಳನ್ನು ನಿರ್ವಹಿಸುವ ಬಿಬಿಎಂಪಿ ಆಗಲಿ ತಲೆಕೆಡಿಸಿಕೊಂಡಿರಲಿಲ್ಲ. ಹೆಲ್ಮೆಟ್ ಹಾಕದಿದ್ದರೆ ಮಾಸ್ಕ ಹಾಕದಿದ್ದರೆ ನೂರುಪಾಯಿ ಸಾವಿರ ರೂಪಾಯಿ ಗಂಟಲೇ ದಂಡ ಹಾಕುವ ಸರಕಾರ ಮೊದಲು ರಸ್ತೆಗುಂಡಿಗಳನ್ನು ಸರಿ ಮಾಡಬೇಕು ಎಂದು ಬೆಂಗಳೂರಿನ ಜನ ದಿನಂಪ್ರತಿ ಅಂದುಕೊಳ್ಳುತ್ತಾರೆ. ಆದರೆ ಇದೀಗ ನಮ್ಮ ರಾಜ್ಯ ಹೈಕೋರ್ಟ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಡಿದು ಎಚ್ಚರಿಸಿದೆ. ಹೌದು ಹೈಕೋರ್ಟ್ ನೀಡಿದ ಎಚ್ಚರಿಕೆಯಿಂದ ಗದರಿದ ಬಿಬಿಎಂಪಿ ರಸ್ತೆಯಲ್ಲಿ ಗುಂಡಿಗಳಿಂದ ಅಪ-ಘಾತಕ್ಕೀಡಾದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮಾರ್ಗಸೂಚಿಗೆ ಮಾಡಿದೆ.

http://newsmobile.in/articles/2018/07/30/after-sons-death-father-vows-to-make-india-pothole-free-fills-556th-in-mumbai/

ಈ ರೀತಿಯ ಪರಿಹಾರವನ್ನು ಪಡೆಯಬೇಕೆಂದರೆ ರಸ್ತೆ ಗುಂಡಿಗಳಿಂದ ಅಪ-ಘಾತಕ್ಕೊಳಗಾದ ಸಂತ್ರಸ್ತರು ಪೊಲೀಸರ ದೂರಿನ ಪ್ರತಿಯೊಂದಿಗೆ ಬೆಂಗಳೂರು ಮಹಾನಗರಪಾಲಿಕೆಯ ವಲಯ ಆಯುಕ್ತರಿಗೆ 30ದಿನಗಳ ಒಳಗಾಗಿ ಪರಿಹಾರಕ್ಕಾಗಿ ಕೋರಿ ಅರ್ಜಿ ಸಲ್ಲಿಸಬೇಕು ಆದರೆ , ಸಾಕ್ಷಾಧಾರಗಳನ್ನು ಆಧರಿಸಿ ಪರಿಹಾರವನ್ನು ನೀಡಲಾಗುತ್ತದೆ. ಒಂದು ವೇಳೆ ಮಧ್ಯಮ ಪ್ರಮಾಣದ ಅಪ-ಘಾತವಾದರೆ 15000 ಮತ್ತು ಅಪ-ಘಾತದಲ್ಲಿ ಮರ-ಣ ಹೊಂದಿದರೆ ಮೂರು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತದೆ, ಸಣ್ಣಪುಟ್ಟ ಗಾಯಗಳಾಗಿದ್ದಾರೆ 5000 ಹಾಗೂ ಕೆಲಕಾಲ ಆಸ್ಪತ್ರೆಗೆ ಚಿಕಿತ್ಸೆ ಪಡೆದರೆ 10000 ಪರಿಹಾರ ನೀಡಲಾಗುತ್ತದೆ, ಒಂದು ವೇಳೆ ಸಂತ್ರಸ್ಥರು ಸರಿಯಾದ ಅವಧಿಯಲ್ಲಿ ಅರ್ಜಿ ಸಲ್ಲಿಸಲು ವಿಫಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

%d bloggers like this: