ನೀವು ರಸ್ತೆಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಸಿಕ್ಕ ನಾಣ್ಯವನ್ನು ಏನು ಮಾಡುಬೇಕು ಗೊತ್ತಾ? ರಸ್ತೆಯಲ್ಲಿ ಹೋಗುವಾಗ ನಿಮಗೆ ನಾಣ್ಯ ಸಿಕ್ಕರೆ ಅದು ಮಹಾಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವ ಸಂಕೇತವಾಗಿದೆ. ರಸ್ತೆಯಲ್ಲಿ ಸಿಗುವ ನಾಣ್ಯವನ್ನು ದಾರಿದ್ರ್ಯದ ಸೂಚನೆ ಎಂದು ಹಲವರು ತಿಳಿದಿದ್ದಾರೆ. ಆದರೆ ಅದು ಸುಳ್ಳು ಸಿಕ್ಕ ನಾಣ್ಯವನ್ನು ತೆಗೆದುಕೊಳ್ಳಬಹುದು ಆದರೆ ಆ ನಾಣ್ಯವನ್ನು ದೇವರ ಹುಂಡಿಗೆ ಹಾಕಬೇಡಿ. ಸಾಕ್ಷಾತ್ ಲಕ್ಷ್ಮಿಯೇ ನಿಮ್ಮ ಬಳಿಗೆ ಬಂದರೆ ಅದನ್ನು ನೀವು ಮತ್ತೆ ದೇವಸ್ಥಾನಕ್ಕೆ ಹಾಕುವ ಅವಶ್ಯಕತೆಯಿಲ್ಲ. ರಸ್ತೆಯಲ್ಲಿ ಸಿಕ್ಕ ಆ ನಾಣ್ಯವನ್ನು ನಿಮ್ಮಲ್ಲಿ ಇಟ್ಟುಕೊಳ್ಳಬಹುದಾಗಿದೆ. ಮಹಾಲಕ್ಷ್ಮಿ ದೇವಿಯು ಒಂದೊಂದು ಬಾರಿ ಹಲವು ರೂಪದಲ್ಲಿ ಒಲಿಯುತ್ತಾಳೆ, ರಸ್ತೆಯಲ್ಲಿ ನಾಣ್ಯ ಸಿಕ್ಕರೆ ನಿಮ್ಮ ಬದುಕಿನಲ್ಲಿ ಲಕ್ಷ್ಮಿಯ ಪ್ರವೇಶ ಆರಂಭವಾಗುತ್ತದೆ ಎಂಬ ಶುಭ ಸೂಚನೆಯಾಗಿದೆ.

ಲಕ್ಷ್ಮಿಯ ಆಗಮನದಿಂದ ಜೀವನದ ದಿಕ್ಕು ಬದಲಾಗುತ್ತದೆ. ದಾರಿಯಲ್ಲಿ ಸಿಕ್ಕ ನಾಣ್ಯವನ್ನು ತೆಗೆದುಕೊಂಡು ಮನೆಗೆ ಬಂದ ಮೇಲ ನೀವು ಸ್ನಾನ ಮಾಡಿ ಆ ನಾಣ್ಯವನ್ನು ನೀರಿನಿಂದ ಅಥವಾ ಅರಿಶಿನ ನೀರಿನಿಂದ ಮತ್ತು ಹಾಲಿನಿಂದ ಅದನ್ನು ಸ್ವಚ್ಛಗೊಳಿಸಬೇಕು. ನಂತರದಲ್ಲಿಅಕ್ಷತೆ ತಟ್ಟೆಯಲ್ಲಿಟ್ಟು ಆ ನಾಣ್ಯವನ್ನು ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಅನುಗ್ರಹವಾಗುತ್ತದೆ. ಈ ರೀತಿ ಸಿಕ್ಕ ನಾಣ್ಯವನ್ನು ಪ್ರತಿ ಮಂಗಳವಾರ, ಶುಕ್ರವಾರದಂದು ಸಂಧ್ಯಾಕಾಲದಲ್ಲಿ ಶ್ರದ್ದಾಭಕ್ತಿಯಿಂದ ಪೂಜಿಸಿದರೆ ನಿಮ್ಮ ಎಲ್ಲಾ ಆರ್ಥಿಕ, ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಿ ಆರ್ಥಿಕ ಪ್ರಗತಿ ಕಾಣುತ್ತೀರಿ.