ರವೀಂದ್ರ ಜಡೇಜಾಗೆ ಸಿಕ್ತು ಬಂಗಾರದ ಬೆಲೆ, ಜಡೇಜಾ ಅವರನ್ನು ಉಳಿಸಿಕೊಳ್ಳಲು ಸಿ.ಎಸ್.ಕೆ ನೀಡಿದ ಹಣ ಎಷ್ಟು ಗೊತ್ತೇ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹರಾಜಿನಲ್ಲಿ ಫ್ರಾಂಚೈಸಿಯ ಕ್ಯಾಪ್ಟನ್ ಗಳಿಗಿಂತ ಹೆಚ್ಚು ಸಂಭಾವನೆ ಪಡೆದು ಸುದ್ದಿ ಆಗಿದ್ದಾರೆ ಈ ಆಟಗಾರ. ಹೌದು ಜಗತ್ತಿನ ಪ್ರತಿಷ್ಟಿತ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿ ಮುಗಿದು, 15ನೇ ಆವೃತ್ತಿ ಆರಂಭಗೊಳ್ಳಲು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಬಿಸಿಸಿಐ 15ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಹೊಸ ನಿಯಮವೊಂದನ್ನ ಪರಿಚಯಿಸಿದೆ. ರಿಟೇನ್ ನಿಯಮದಡಿಯಲ್ಲಿ ಆಟಗಾರರು ಸ್ವತಂತ್ರವಾಗಿ ಬಿಡ್ಡಿಂಗ್ ನಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿರುವುದರಿಂದ ವಿವಿಧ ಫ್ರಾಂಚೈಸಿಗಳು ಕೇವಲ ನಾಲ್ಕು ಆಟಗಾರರನ್ನು ಮಾತ್ರ ತಮ್ಮ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿರುತ್ತದೆ.

ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರನ್ನ ಆರ್ಸಿಬಿ ತಂಡ ಉಳಿಸಿಕೊಂಡಿದೆ. ಇಲ್ಲಿಯವರಗೆ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿಯನ್ನ ಗೆದ್ದಿಲ್ಲ‌. ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ತಂಡ ಯಾವುದೇ ರೀತಿಯಾದ ಯಶಸ್ಸು ಕಾಣದ ಹಿನ್ನೆಲೆ ವಿರಾಟ್ ಕೊಹ್ಲಿ ಅವರನ್ನ ಆರ್ಸಿಬಿ ತಂಡದಿಂದ ಕೈ ಬಿಡಲಾಗುತ್ತದೆ ಎಂಬ ಸುದ್ದಿಯಿತ್ತು. ಆದರೆ ಈ ಸುದ್ದಿ ಸುಳ್ಳಾಗಿದ್ದು ವಿರಾಟ್ ಕೊಹ್ಲಿ ಅವರನ್ನ 15ಕೋಟಿಗೆ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿ ತನ್ನಲ್ಲೇ ಉಳಿಸಿಕೊಂಡಿದೆ. ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೇನ್, ಮ್ಯಾಕ್ಸವೆಲ್, ಸಿರಾಜ್ ಅವರನ್ನ ಉಳಿಸಿಕೊಂಡಿದೆ.

ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದ ಬಗ್ಗೆಯು ಕೂಡ ಅಪಸ್ವರ ಕೇಳಿ ಬಂದ ಹಿನ್ನೆಲೆ ಸಿ.ಎಸ್.ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಬಹುದು ಎಂದು ಊಹೆ ಮಾಡಲಾಗಿತ್ತು. ಆದರೆ ಧೋನಿ ಅವರು ಇನ್ನು ಮೂರು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಸಿಎಸ್ಕೆ ತಂಡವೇ ತಿಳಿಸಿದೆ. ಧೋನಿ ಅವರನ್ನು ಹನ್ನೆರಡು ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿ ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಕೂಡ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಕೂಡ ರಿಟೇನ್ ನಿಯಮದಡಿ ತನ್ನಲ್ಲೇ ಉಳಿಸಿಕೊಂಡಿದೆ.

ರೋಹಿತ್ ಶರ್ಮಾ, ಜಸ್ ಪ್ರೀತ್ ಬುಮ್ರಾ, ಸೂರ್ಯ ಕುಮಾರ್ ಯಾದವ್, ಕಿರನ್ ಪೋಲಾರ್ಡ್ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿದುಕೊಂಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸುನೀಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್ ಉಳಿದುಕೊಂಡಿದ್ದಾರೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೇನ್ ವಿಲಯಮ್ಸ್, ಉಮ್ರನ್ ಮಲಿಕ್, ಅಬ್ದುಲ್ ಸಮದ್ ಉಳಿದಿದ್ದು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಹೆನ್ರಿಕ್ ನಾರ್ಟ್ಜೆ ಇದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ರನ್ನ ಉಳಿಸಿಕೊಂಡಿದೆ. ಅಂತೆಯೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮಯಾಂಖ್ ಅಗರ್ವಾಲ್ ಮತ್ತು ಹರ್ಷ್ ದೀಪ್ ಸಿಂಗ್ ಅವರ ಹೆಸರನ್ನ ತಿಳಿಸಿದೆ.

ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ತನ್ನ ಕ್ಯಾಪ್ಟನ್ಸಿಯಿಂದ ಹೊರ ಬಂದಿದ್ದಾರೆ. ಬಿಸಿಸಿಐ ರಿಟೇನ್ ನಿಯಮದಡಿಯಲ್ಲಿ ನಿಮ್ಮ ನಿಮ್ಮ ತಂಡದಲ್ಲಿ ಉಳಿಸಿಕೊಳ್ಳ ಬಯಸುವ ನಾಲ್ಕು ಆಟಗಾರರ ಹೆಸರನ್ನು ತಿಳಿಸುವಂತೆ ಮಂಗಳವಾರ ಕೊನೆಯ ದಿನಾಂಕವನ್ನಾಗಿ ನಿಗದಿ ಪಡಿಸಲಾಗಿತ್ತು. ಅದರಂತೆ ವಿವಿಧ ಪ್ರಾಂಚೈಸಿಗಳು ತಾವು ಉಳಿಸಿಕೊಳ್ಳುತ್ತಿರುವ ನಾಲ್ಕು ಆಟಗಾರರ ಹೆಸರನ್ನ ತಿಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರವೀಂದ್ರಾ ಜಡೇಜಾ, ಎಂಎಸ್. ಧೋನಿ, ಋತುರಾಜ್ ಗಾಯಕ್ವಾಡ್, ಮೊಯೀನ್ ಅಲಿ ಉಳಿದುಕೊಂಡಿದದ್ದಾರೆ. ವಿಶೇಷ ಅಂದರೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ ಅವರನ್ನ ಬಲೋಬ್ಬರಿ 16 ಕೋಟಿ ನೀಡಿ ತಮ್ಮಲ್ಲಿ ಉಳಿಸಿಕೊಂಡಿದೆ. ಈ ಮೂಲಕ ರವೀಂದ್ರಾ ಜಡೇಜಾ ಅವರು ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನ ಹಿಂದಿಕ್ಕಿದ್ದಾರೆ.

%d bloggers like this: