ಸ್ಯಾಂಡಲ್ ವುಡ್ ದಿ.ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ನೋಡಲು ಕೇರಳದಿಂದ ಖ್ಯಾತ ನಟಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸ್ನೇಹ ಶಸಂಬಂಧ ಅನ್ನೋದು ಭಾಷೆ, ಧರ್ಮ ಜಾತಿ ಎಲ್ಲಾ ಗಡಿ ರೇಖೆಗಳನ್ನ ಮೀರಿ ಬೆಸೆಯುವಂತದ್ದು. ಆ ಸ್ನೇಹ ಸಂಬಂಧ ಎಂಬುವುದು ಪರಸ್ಪರ ಗಾಢವಾಗಿ ಉಳಿದುಕೊಂಡು ಬಿಟ್ಟರೆ ಆ ಗೆಳೆಯರು ಎಷ್ಟೇ ದೂರದಲ್ಲಿದ್ದರು ಕೂಡ ಭೇಟಿ ಮಾಡೇ ಮಾಡುತ್ತಾರೆ. ಅಂತೆಯೇ ಮಾಲಿವುಡ್ ಯುವ ಸ್ಟಾರ್ ನಟಿ ಅಹನಾ ಕೃಷ್ಣ ಕೂಡ ತಮ್ಮ ಗೆಳತಿ ನಟಿ ಮೇಘನಾ ರಾಜ್ ಅವರನ್ನ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಅವರನ್ನ ನೋಡಲು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ.

ನಟಿ ಮೇಘನಾ ರಾಜ್ ಅವರು ಮಗುವಿಗೆ ಜನ್ಮ ನೀಡಿದಾಗಿನಿಂದ ಅವರ ಆಪ್ತರು ಸಿನಿ ಲೋಕದ ಸ್ನೇಹಿತರು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿಕೊಂಡಿದ್ದರು. ನಟಿ ಮೇಘನಾ ರಾಜ್ ಅವರು ಕನ್ನಡ ಮಾತ್ರವಲ್ಲದೆ ಮಲೆಯಾಳಂ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಮಲೆಯಾಳಂ ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್ ಅವರಿಗೆ ಅಲ್ಲಿಯೂ ಕೂಡ ಅನೇಕ ಸ್ನೇಹಿತರಿದ್ದಾರೆ. ಅವರಲ್ಲಿ ಮಾಲಿವುಡ್ ಪ್ರಸಿದ್ದ ನಟಿಯಾಗಿರುವ ನಜ್ರಿಯಾ ಆಪ್ತ ಸ್ನೇಹಿತರು. ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ನಜ್ರಿಯಾ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಜೊತೆ ಇರುವ ಫೋಟೋ ವೊಂದನ್ನು ಶೇರ್ ಮಾಡಿದ್ದಾರೆ.

ನಟಿ ಮೇಘನಾ ರಾಜ್ ಅವರಿಗೆ ವಿಶ್ ಮಾಡಿದ್ದರು. 2013 ರಲ್ಲಿ ರೇವತಿ ಎಸ್ ವರ್ಮಾ ನಿರ್ದೇಶನದಲ್ಲಿ ತೆರೆಕಂಡ ಮಲೆಯಾಳಂ ನ ಮ್ಯಾಡ್ ಡ್ಯಾಡ್ ಚಿತ್ರದಲ್ಲಿ ಮೇಘನಾ ರಾಜ್ ಮತ್ತು ನಜ್ರಿಯಾ ಒಟ್ಟಿಗೆ ನಟಿಸಿದ್ದರು.ಅಲ್ಲಿಂದ ಇವರಿಬ್ಬರ ಸ್ನೇಹ ಗಾಢವಾಗಿ ಬೆಳೆದಿತ್ತು. ಅಂತೆಯೇ ಇದೀಗ ಮಲೆಯಾಳಂ ಮತ್ತೋರ್ವ ಸ್ಟಾರ್ ನಟಿಯಾಗಿರುವ ನಟಿ ಅಹನಾ ಕೃಷ್ಣ ಅವರು ಕೇರಳದಿಂದ ಬೆಂಗಳೂರಿಗೆ ಆಗಮಿಸಿ ತಮ್ಮ ಗೆಳತಿ ಮೇಘನಾ ರಾಜ್ ಅವರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ನನ್ನ ಎತ್ತಿಕೊಂಡು ಮುದ್ದಾಡಿದ್ದಾರೆ. ನಟಿ ಅಹನಾ ಕೃಷ್ಣ ಅವರು ರಾಯನ್ ರಾಜ್ ಸರ್ಜಾ ನನ್ನ ಎತ್ತಿ ಮುದ್ದಾಡುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.