ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯ ಆರಂಭವಾಗುವ ನಿಟ್ಟಿನಲ್ಲಿ ವಿವಿಧ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅದರಂತೆ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಕೂಡ ತನ್ನ ತಂಡದ ಆಟಗಾರರ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರ ಎಂದೇ ಹೆಸರಾಗಿದ್ದಂತಹ ಖ್ಯಾತ ಬೌಲರ್ ಹರ್ಷಲ್ ಪಟೇಲ್ ಅವರನ್ನ ಕೈ ಬಿಡಲಾಗಿದೆ. ಹೀಗಾಗಿ ಕ್ರಿಕೆಟಿಗ ಹರ್ಷಲ್ ಪಟೇಲ್ ಅವರು ಪರೋಕ್ಷವಾಗಿ ತಮ್ಮನ್ನು ಮತ್ತೇ ಆರ್ಸಿಬಿ ತಂಡಕ್ಕೆ ಕರೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ಗೆ ಬಿಸಿಸಿಐ ತಂದಿರುವ ನೂತನ ರಿಟೈನ್ ನಿಯಮದಡಿಯಲ್ಲಿ ಆಯಾಯ ತಂಡಗಳು ತಮ್ಮ ಇಷ್ಟದ ಮೂವರು ಆಟಗಾರರನ್ನು ಉಳಿಸಿಕೊಂಡಿದೆ.

ಸದ್ಯಕ್ಕೆ ಎಂಟು ತಂಡಗಳು ರಿಟೈನ್ ನಿಯಮದಡಿ ಒಟ್ಟು ಇಪ್ಪತ್ತೇಳು ಆಟಗಾರರನ್ನು ಉಳಿಸಿಕೊಂಡಿದೆ. ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ತನ್ನ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್, ಮೊಹಮ್ಮದ್ ಸಿರಾಜ್ ಅವರನ್ನ ರಿಟೈನ್ ಮಾಡಿಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಸೀಸನ್ ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿದೆ. ಇನ್ನು ಈ 15ನೇ ಆವೃತ್ತಿಯಲ್ಲಿ ಎಲ್ಲಾ ತಂಡಗಳು ಕೂಡ ನಾವೇ ಐಪಿಎಲ್ ಕಪ್ ಗೆಲ್ಲಬೇಕು ಎಂಬ ಉತ್ಸುಕತೆಯಿಂದ ಭರ್ಜರಿ ತಯಾರಿ ನಡೆಸುತ್ತಿವೆ.

ಅಂತೆಯೇ ಆರ್ಸಿಬಿ ಪಟ್ಟಿಯಲ್ಲಿ ತನ್ನನ್ನ ಕೈ ಬಿಟ್ಟ ಕಾರಣ ಬೌಲರ್ ಹರ್ಷಲ್ ಪಟೇಲ್ ಅವರು ಕಳೆದ ಬಾರಿ ನಾನು ಡೆತ್ ಓವರ್ ನಲ್ಲಿ ನಾನು ಬೌಲಿಂಗ್ ಮಾಡಿರಲಿಲ್ಲ. ಆದರೂ ಕೂಡ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ವರ್ಗಾವಣೆ ಮಾಡಿಕೊಂಡಿತ್ತು. ನನ್ನ ವೃತ್ತಿ ಜೀವನಕ್ಕೆ ಹೊಸದೊಂದು ತಿರುವು ನೀಡಿರುವುದು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ. ಈ ಆರ್ಸಿಬಿ ಫ್ರಾಂಚೈಸಿ ನನಗೆ ಉತ್ತಮ ಅವಕಾಶ ನೀಡಿದ್ದು, ಒಬ್ಬ ಉತ್ತಮ ಬೌಲರ್ ಆಗಲು ಸಹಾಯ ಮಾಡಿದೆ. ಆದ್ದರಿಂದ ನಾನು ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ನ 15ನೇ ಆವೃತ್ತಿಯಲ್ಲಿ ಕೆಂಪು ಜೆರ್ಸಿ ಧರಿಸಿ ಆಟವಾಡಬೇಕು ಎಂದು ಬಯಸುತ್ತಿದ್ದೇನೆ ಎಂದು ಹರ್ಷಲ್ ಪಟೇಲ್ ಅವರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.