ಆರ್ಸಿಬಿ ತಂಡದ ಹೊಸ ನಾಯಕನ ಜೊತೆ ಸೆಲ್ಫಿಯಲ್ಲಿ ಕಾಣಿಸಿಕೊಂಡ ಕನ್ನಡ ನಟಿ

ದೇಶದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಗಳನ್ನು ಹೊಂದಿರುವ ಕ್ರೀಡೆ ಕ್ರಿಕೆಟ್. ಸಣ್ಣ ವಯಸ್ಸಿನವರಿಂದ ಹಿಡಿದು ಹಿರಿಯ ವಯಸ್ಕರವರೆಗೂ ಎಲ್ಲರ ನೆಚ್ಚಿನ ಕ್ರೀಡೆ ಇದಾಗಿದೆ. ಜಗತ್ತಿನಲ್ಲಿ ಯಾವುದೇ ಕ್ರೀಡೆಗೂ ಇರಲಾರದಷ್ಟು ಕ್ರೇಜ್ ಕ್ರಿಕೆಟ್ ಗೆ ಇದೆ. ಬೇರೆ ಸ್ಫೋರ್ಟ್ಸ್ ಪರ್ಸನ್ ಗಳಿಗೆ ಹೋಲಿಸಿದರೆ ಕ್ರಿಕೆಟಿಗರ ಅಭಿಮಾನಿ ಬಳಗವೆ ಹೆಚ್ಚಾಗಿದೆ. ಅದರಲ್ಲೂ ಐಪಿಎಲ್ ಶುರುವಾದರಂತೂ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಔತಣವಿದ್ದಂತೆ. ಐಪಿಎಲ್ ನ ಎಲ್ಲ ತಂಡಗಳಿಗೂ ಹೋಲಿಸಿದರೆ ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡ ಇಡೀ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಕೆಲವು ದಿನಗಳ ಹಿಂದೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರಾಜು ಪ್ರಕ್ರಿಯೆ ಮುಕ್ತಾಯಗೊಂದಿದೆ. ಈ ಬಾರಿ ಕ್ಯಾಪ್ಟನ್ ಪಟ್ಟ ಸೇರಿದಂತೆ ಹಲವಾರು ಬದಲಾವಣೆಗಳು ನಮ್ಮ ಆರ್ಸಿಬಿ ತಂಡದಲ್ಲಿ ಆಗಿವೆ.

ವರ್ಷದಿಂದ ವರ್ಷಕ್ಕೆ ಹರಾಜಿನಲ್ಲಿ ಬೇರೆ ಬೇರೆ ಆಟಗಾರರು ಹೊಸ ತಂಡವನ್ನು ಸೇರಿಕೊಳ್ಳುತ್ತಿರುತ್ತಾರೆ. ಈ ಬಾರಿಯೂ ಆಟಗಾರರಲ್ಲಿ ಹಲವಾರು ಬದಲಾವಣೆಗಳಾಗಿವೆ. ಇನ್ನೇನು ಐಪಿಎಲ್ ಶುರುವಾಗಲಿದೆ. ಈ ಬಾರಿಯ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಈಗಾಗಲೇ ಆಟಗಾರರು ಬೆಂಗಳೂರು ತಲುಪಿದ್ದಾರೆ. ವಿರಾಟ್ ಕೊಹ್ಲಿಯು ಸಹ ಬ್ಯಾಕ್ ಟು ಬೆಂಗಳೂರು ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ನಮ್ಮ ಬೆಂಗಳೂರಿನ ಆರ್ಸಿಬಿ ತಂಡಕ್ಕೆ ಸ್ಯಾಂಡಲ್ವುಡ್ ನ ನಟನಟಿಯರು ಸಪೋರ್ಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು.

ಈ ಪಾರ್ಟಿಯಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಕೂಡ ಭಾಗಿಯಾಗಿದ್ದರು. ಸದ್ಯಕ್ಕೆ ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭೂ ನಿರ್ದೇಶನದ ಮಣ್ಮತ ಲೀಲೈ ಸಿನಿಮಾದಲ್ಲಿ ಸಂಯುಕ್ತ ನಟಿಸುತ್ತಿದ್ದಾರೆ. ಆದರೆ ವಿಷಯ ಸಿನಿಮಾದ್ದಲ್ಲ. ವಿಶೇಷವೆಂದರೆ ನಟಿ ಸಂಯುಕ್ತ ಹೆಗಡೆ ಅವರು ಆರ್ಸಿಬಿ ತಂಡದ ಒಬ್ಬ ಆಟಗಾರನೊಂದಿಗೆ ಸೆಲ್ಫಿ ತೆಗೆದುಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಎಲ್ಲೆಡೆ ವೈರಲ್ ಆಗಿದ್ದಾರೆ. ಇತ್ತೀಚೆಗಂತೂ ಯಾವುದಾದರೂ ನಟಿ ಈ ರೀತಿ ಫೋಟೋ ಹಾಕಿದರೆ ಸಾಕು ಸಾವಿರಾರು ಪ್ರಶ್ನೆಗಳು ಅವರ ಸುತ್ತ ಸುತ್ತುತ್ತವೆ. ಈಗ ಸಂಯುಕ್ತ ಹೆಗಡೆ ವಿಚಾರದಲ್ಲೂ ಹಾಗೇ ಆಗಿದೆ. ಸಂಯುಕ್ತ ಹೆಗಡೆ ಅವರು ಆರ್ಸಿಬಿ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಫಫ್ ಡು ಪ್ಲೇಸಿ ಅವರನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು.

ಅಪ್ ಲೋಡ್ ಮಾಡುವುದರ ಜೊತೆಗೆ, ಆರ್ಸಿಬಿ ಹೊಸ ನಾಯಕನಿಗೆ ಹಲೋ ಎನ್ನಿ. ಹೊಸ ಸೀಸನ್, ಹೊಸ ನಾಯಕ, ಹೊಸ ಜೆರ್ಸಿಗೆ, ಹೊಸ ಉತ್ಸಾಹ ಸಿಕ್ಕಿದೆ. ಆರ್ಸಿಬಿ ತಂಡಕ್ಕೆ ಅದೇ ಬೆಂಬಲ ಇರುತ್ತದೆ. ಈ ಕ್ಷಣಗಳ ಫೋಟೋಗಳನ್ನು ಶೇರ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಶೇರ್ ಕೂಡ ಮಾಡುತ್ತಿದ್ದಾರೆ. ಆದರೆ ಕೆಲವರು ಫಫ್ ಡು ಪ್ಲೇಸಿ ಅವರನ್ನು ಸಂಯುಕ್ತ ಏಕೆ ಭೇಟಿ ಮಾಡಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಮತ್ತೆ ಇನ್ನು ಕೆಲವರು ಕಾಮೆಂಟ್ ಬಾಕ್ಸ್ನಲ್ಲಿ ಕ್ವೆಶ್ಚನ್ ಮಾರ್ಕ್ ಇಟ್ಟಿದ್ದಾರೆ. ಸಂಯುಕ್ತ ಅವರಿಗೆ ಅದೊಂದು ಜಸ್ಟ್ ಫ್ಯಾನ್ ಮೂಮೆಂಟ್ ಕೂಡ ಇರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇದು ಬೇರೆ ರೀತಿಯೇ ವ್ಯಕ್ತವಾಗುತ್ತಿದೆ.

%d bloggers like this: