ರೆಕಾರ್ಡ್ ಬುಕ್ ಅಲ್ಲಿ ಹೆಸರು ಮಾಡಿದ ದಕ್ಷಿಣ ಭಾರತದ ಸ್ಟಾರ್ ನಟನ 5 ವರ್ಷದ ಪುತ್ರಿ

ದಕ್ಷಿಣ ಭಾರತದ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಐದು ವರ್ಷದ ಪುತ್ರಿ ಇದೀಗ ವರ್ಲ್ಡ್ ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದ್ದಾರೆ. ಹಾಗಾದರೆ ಅಲ್ಲು ಪುತ್ರಿ ಮಾಡಿರುವ ಸಾಧನೆ ಏನು ಗೊತ್ತಾ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಅಲ್ಲು ಅರ್ಜುನ್ ಪುತ್ರಿ ಸುದ್ದಿಯಾಗಿದ್ದು ಬಣ್ಣದ ಲೋಕಕ್ಕೆ ಎಂಟ್ರಿ ಆಗುತ್ತಿರುವ ವಿಚಾರವಾಗಿ. ಅದೂ ಕೂಡ ಸೌತ್ ಸಿನಿ ದುನಿಯಾದ ಸ್ಟಾರ್ ನಟಿ ಸಮಂತಾ ಅಭಿನಯದ ಶಕುಂತಲಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ ಅಲ್ಲು ಅರ್ಹಾ. ಬನ್ನಿ ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿ ಅಲ್ಲು ಅರ್ಹ ಟಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟು ಸಖತ್ ಸುದ್ದಿಯಲ್ಲಿದ್ದರು.

ಇದೀಗ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ದಂಪತಿಗಳಿಂದ ಅಲ್ಲು ಅರ್ಹಾಳ ಬಗ್ಗೆ ಹೊಸದೊಂದು ಅಚ್ಚರಿಯ ಸುದ್ದಿ ತಿಳಿದು ಬಂದಿದೆ. ಅದೇನಪ್ಪಾ ಅಂತೀರಾ. ಐದು ವರ್ಷದ ಈ ಬಾಲ ಪ್ರತಿಭೆ ಅಲ್ಲು ಅರ್ಹಾ ಯೆಂಗೆಸ್ಟ್ ಚೆಸ್ ಟ್ರೇನರ್ ಎಂಬ ದಾಖಲೆಗೆ ಆಯ್ಕೆ ಆಗಿದ್ದಾರೆ. ಇದರಿಂದಾಗಿ ತಮ್ಮ ಮಗಳ ಸಾಧನೆಗೆ ಅಲ್ಲು ಅರ್ಜುನ್ ದಂಪತಿಗಳು ಫುಲ್ ಖುಷ್ ಆಗಿದ್ದಾರೆ. ಬಾಲ ಪ್ರತಿಭೆ ಅಲ್ಲು ಅರ್ಹಾ ಯೆಂಗೆಸ್ಟ್ ಚೆಸ್ ಟ್ರೇನರ್ ಆಗಿದ್ದಕ್ಕೆ ನೊಬೆಲ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಅಲ್ಲು ಅರ್ಹಾಳ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ತಿಳಿಸುತ್ತಿದ್ದಾರೆ.

ನಟ ಅಲ್ಲು ಅರ್ಜುನ್ ಮತ್ತು ಸ್ನೇಹ ರೆಡ್ಡಿ ದಂಪತಿಗಳು ಇತ್ತೀಚೆಗಷ್ಟೇ ತಮ್ಮ ಮುದ್ದಿನ ಮಗಳು ಅಲ್ಲು ಅರ್ಹಾಳ ಐದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ವೀಡಿಯೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಒಟ್ಟಾರೆಯಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಅಲ್ಲು ಅರ್ಹಾ ತನ್ನ ಐದನೇ ವಯಸ್ಸಿನಲ್ಲಿಯೇ ಅದ್ಭುತ ಪ್ರತಿಭೆಯ ಮೂಲಕ ತನ್ನ ಪೋಷಕರಿಗೆ ಅಪಾರ ಕೀರ್ತೀ ತಂದುಕೊಟ್ಟಿದ್ದಾರೆ ಎನ್ನಬಹುದು.

%d bloggers like this: