ರಿಷಬ್ ಶೆಟ್ಟಿ ಅವರ ಚಿತ್ರದಿಂದ ಸ್ಪೂರ್ತಿಗೊಂಡ ಯುವಕರು ಕನ್ನಡ ಶಾಲೆಗೆ ಎಂತಹ ರೂಪ ಕೊಟ್ಟಿದ್ದಾರೆ ನೋಡಿ

ಸಿನಿಮಾಗಳು ಜನರ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಅದ್ಭುತ ಸಾಕ್ಷಿ ಅಷ್ಟಕ್ಕೂ ಸಿನಿಮಾದಿಂದ ಸ್ಫೂರ್ತಿ ಪಡೆದು ಜನ ಮೆಚ್ಚುವಂತಹ ಕೆಲಸ ಮಾಡಿದ್ದು ಮೈಸೂರಿನ ಯುವಕರು ಹಾಗೂ ಅವರ ಸ್ಪೂರ್ತಿಗೆ ಕಾರಣವಾದ ಚಿತ್ರ ನಮ್ಮ ಕನ್ನಡದ ಚಿತ್ರ ಎಂಬುದು ಖುಷಿಯ ವಿಚಾರ. ಹೌದು 2018ರಲ್ಲಿ ಬಿಡುಗಡೆಯಾಗಿದ್ದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಚಿತ್ರವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಗಳಿಸಿದೆ. ಚಿತ್ರ ಬರಿ ಮೆಚ್ಚುಗೆ ಅಲ್ಲದೆ ಬಾಕ್ಸಾಫೀಸಲ್ಲಿ ಸಹ ಭರ್ಜರಿ ಕೊಳ್ಳೆಹೊಡೆದಿದೆ. ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮಕ್ಕಳ ನಟಿಸಿದ್ದು ರಿಷಬ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಮತ್ತು ಅನಂತನಾಗ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಾಸರಗೋಡು ಚಿತ್ರವು ಕನ್ನಡಿಗರ ಮನಸ್ಸಲ್ಲಿ ಎಷ್ಟು ಆಳವಾಗಿ ಹೋಗಿದೆಯೆಂದರೆ ಇದನ್ನು ನೋಡಿದ ಎಷ್ಟೊಂದು ಜನರಿಗೆ ಕನ್ನಡ ಶಾಲೆಗಳ ಮೇಲೆ ಗೌರವ ಬಂದಿದೆ.

ಹೆಚ್ಚು ಹೆಚ್ಚು ಜನ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ. ಈ ಚಿತ್ರವು ಕೇರಳದ ಕಾಸರಗೋಡಿನಲ್ಲಿರುವ ಕನ್ನಡ ಶಾಲೆಯನ್ನು ಉಳಿಸಲು ಅಲ್ಲಿನ ಕನ್ನಡಿಗರು ಪಟ್ಟಿರುವ ಕಷ್ಟದ ಬಗ್ಗೆ ಹೇಳುತ್ತದೆ. ಇದರಿಂದ ಸ್ಫೂರ್ತಿ ಪಡೆದ ಮೈಸೂರಿನ ಸಂತೋಷ್ ಕುಮಾರ್ ಎಂಬುವವರು ಹಾಗೂ ಅವರ ಕೆಲ ಸಹಚರರೊಂದಿಗೆ ಸೇರಿ ಹಳೆಯದಾಗಿ ಬಣ್ಣವೆಲ್ಲಾ ಕಿತ್ತು ಹೋಗಿದ್ದ ಸರಕಾರಿ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ. ಗೋಡೆ ಮೇಲೆ ಚಿತ್ರಗಳನ್ನು ಬರೆದು ಶಾಲೆ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ ಹಾಗೂ ಈ ವಿಡಿಯೋವನ್ನು ಸಂತೋಷ್ ಕುಮಾರ್ ಎಂಬುವವರು ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದು ಇದನ್ನು ಸ್ವತಃ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಚಲನಚಿತ್ರಗಳು ಯುವಕರಲ್ಲಿ ಇಂತಹ ಸಕಾರಾತ್ಮಕ ಪರಿಣಾಮ ಮೂಡಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ.

%d bloggers like this: