ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್2 ಚಿತ್ರ ನೋಡಿ ಫಿದಾ ಆದ ಆಸ್ಟ್ರೇಲಿಯಾದ

ಆಸ್ಟ್ರೇಲಿಯಾದ ಸುಂದರಿ ಕೆಜಿಎಫ್2 ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರ ಲುಕ್ ನೋಡಿ ರಾಕಿ ಬಾಯ್ ರಾಕಿ ಬಾಯ್ ಎಂದು ಕನವರಿಸುತ್ತಿದ್ದಾಳಂತೆ. ಹೌದು ಕೆಜಿಎಫ್2 ಸಿನಿಮಾ ಇಂದು ವರ್ಲ್ಡ್ ವೈಡ್ ಯಾವ ರೀತಿ ಸಕ್ಸಸ್ ಕಂಡಿದೆ ಅನ್ನುವುದು ಈಗಾಗಲೇ ನಿಮಗೆ ಗೊತ್ತೇ ಇದೆ. ಕನ್ನಡದ ನಮ್ಮ ಕೆಜಿಎಫ್2 ಚಿತ್ರ ನೋಡಿ ಎಲ್ಲೆಡೆ ಹಾಡಿ ಹೋಗುತ್ತಿದ್ದಾರೆ. ಇಡೀ ಭಾರತೀಯ ಚಿತ್ರರಂಗದ ದಿಗ್ಗಜ ನಟರು, ನಿರ್ದೇಶಕರು, ನಿರ್ಮಾಪಕರು ಕನ್ನಡ ಚಿತ್ರದ ಈ ಪರಿಯ ಯಶಸ್ಸು ಕಂಡು ನಿಬ್ಬೆರಗಾಗಿದ್ದಾರೆ. ಅದರಲ್ಲಿಯೂ ರಾಕಿಬಾಯ್ ಪಾತ್ರದಲ್ಲಿ ಯಶ್ ಅವರ ನಟನೆಗೆ ಸ್ವತಃ ರಜಿನಿಕಾಂತ್ ಅವರೇ ಫಿಧಾ ಆಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಕರೆ ಮಾಡಿ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಮಾತ್ರ ಅಲ್ಲದೆ ವಿಶ್ವಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಯಶ್ ಅವರು ಆಗಾಗ ಒಂದು ಮಾತ್ ಹೇಳ್ತಿದ್ರು. ಕನ್ನಡ ಚಿತ್ರವನ್ನ ಇಡೀ ಭಾರತೀಯ ಚಿತ್ರರಂಗ ನೋಡಿ ಅಚ್ಚರಿ ಪಡಬೇಕು.

ಕನ್ನಡದ ಸಿನಿಮಾಗಳು ಉತ್ತಮ ಗುಣಮಟ್ಟದ ಅದ್ದೂರಿಯಾಗಿ ತಯಾರಾಗಬಲ್ಲವು ಎಂಬುದನ್ನು ತೋರಿಸಬೇಕು ಎಂದು ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತು ಖಾಸಗಿ ವಾಹಿನಿಯ ಸಂದರ್ಶನಗಳಲ್ಲಿ ಹೇಳುತ್ತಲೇ ಇದ್ರು. ಅದರಂತೆ ಇವತ್ತು ಕನ್ನಡ ಚಿತ್ರರಂಗದತ್ತ ಭಾರತ ಮಾತ್ರ ಅಲ್ಲದೆ ಇಡೀ ವಿಶ್ವದ ಚಿತ್ರವೇ ತಿರುಗಿ ನೋಡುವಂತೆ ಯಶ್ ಮತ್ತು ಪ್ರಶಾಂತ್ ನೀಲ್ ಮಾಡಿ ತೋರಿಸಿದ್ದಾರೆ. ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ದಾಖಲೆ ಮೇಲೆ ದಾಖಲೆ ಮಾಡಿ ವಿಶ್ವಾದ್ಯಂತ ಬಹುದೊಡ್ಡ ಯಶಸ್ಸು ಪಡೆದುಕೊಂಡು ಬರೋಬ್ಬರಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಇದರ ನಡುವೆ ಇದೀಗ ಆಸ್ಟ್ರೇಲಿಯಾದ ಸುಂದರಿ ಒಬ್ಬಳು ಕೆಜಿಎಫ್2 ಚಿತ್ರ ನೋಡಿ ಸಖತ್ ಫಿದಾ ಆಗಿದ್ದಾಳೆ. ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಅಪಟ್ಟ ಅಭಿಮಾನಿ ಆಗಿರುವ ಕ್ಲಾಯ್ ಅಮಂಡಾ ಬೈಲೆ ಎಂಬ ಆಸ್ಟ್ರೇಲಿಯಾದ ಯುವತಿ ಕೆಜಿಎಫ್2 ಚಿತ್ರ ನೋಡಿ ನಾನು ಕೊಂಚ ತಡವಾಗಿ ಬಂದಿದ್ದೇನೆ.

ಕೆಜಿಎಫ್ 2 ಚಿತ್ರವನ್ನ ಹೇಗೆ ತಯಾರು ಮಾಡಿದ್ರು. ಅಬ್ಬಾ ಚಿತ್ರದ ದೃಶ್ಯಗಳು ಕಣ್ಣಿಗೆ ಹಬ್ಬದಂತೆ ಇದೆ. ಯಾರೂ ಕೂಡ ಊಹೆ ಮಾಡಿಕೊಳ್ಳಲು ಸಾಧ್ಯವಾಗದ ರೀತಿ ದೃಶ್ಯ ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಅಂತೂ ಬಹಳ ಚೆನ್ನಾಗಿದೆ. ಅದರಲ್ಲಿಯೂ ಹಿನ್ನೆಲೆ ಸಂಗೀತ ಅಂತೂ ಮೈ ರೋಮಾಂಚನ ಅನಿಸುವಷ್ಟೂ ಅದ್ಭುತವಾಗಿದೆ. ರಾಕಿಬಾಯ್ ಪಾತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಮಾತ್ರ ಸಖತ್ ಆಗಿ ಕಾಣಿಸಿಕೊಂಡಿದ್ದು. ಮೈಂಡ್ ಬ್ಲೋಯಿಂಗ್ ಎಂದು ಈ ಆಸ್ಟ್ರೇಲಿಯಾದ ಚೆಲುವೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಸುಂದರಿಯ ಟ್ವೀಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಒಟ್ಟಾರೆ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ಈ ಮಟ್ಟಿಗೆ ದೇಶದ ಗಡಿಯಾಚೆ ಸೌಂಡ್ ಮಾಡುತ್ತಿರುವುದು ನಿಜಕ್ಕೂ ಕೂಡ ಕನ್ನಡಿಗರಿಗೆ ಹೆಮ್ಮೆಯೇ ಸರಿ.

%d bloggers like this: