ರಾಕಿ ಭಾಯ್ ಕುಟುಂಬಕ್ಕೆ ಈಗ ಮತ್ತೊಂದು ಮಗುವಿನ ಆಗಮನ

ರಾಕಿಂಗ್ ಸ್ಟಾರ್ ಯಶ್ ಅವರಿಗೆ 2020 ರಲ್ಲಿ ಕೆಜಿಎಫ್ 2 ಬಿಡುಗಡೆಯ ಖುಷಿ ಸಿಗುವ ಮೊದಲೇ ಮನೆಯಲ್ಲಿಯೇ ಇನ್ನೊಂದು ಸಂಭ್ರಮ ಸಿಕ್ಕಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ. ಯಶ್ ಅವರ ಪ್ರೀತಿಯ ಸಹೋದರಿ ನಂದಿನಿಯವರು ತಮ್ಮ ಎರಡನೆಯ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಯಶ್ ಅವರ ಸಂಸಾರಕ್ಕೆ ಮತ್ತೊಂದು ಮಗುವಿನ ಆಗಮನ ಆಗಿದೆ. ಖುದ್ದು ನಂದಿನಿ ಅವರೇ ಇನ್ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಇವರ ಮೊದಲನೇ ಮಗು ಕೂಡ ಗಂಡು ಆಗಿತ್ತು ಈಗ ಎರಡನೇ ಮಗು ಕೂಡ ಗಂಡು ಮಗುವೆ ಆಗಿದೆ. ಹೀಗಾಗಿ ನಂದಿನಿ ಈಗ ಇಬ್ಬರು ಗಂಡು ಮಕ್ಕಳ ತಾಯಿಯಾಗಿದ್ದರೆ. ಸ್ವತಃ ಯಶ್ ಅವರು ತಮ್ಮ ಸ್ವಂತ ಖರ್ಚಿನಿಂದ ತಂಗಿ ಮದುವೆಯನ್ನು ತಾವೇ ಎಂಟು ವರ್ಷಗಳ ಹಿಂದೆ ಉದ್ಯಮಿಯೊಬ್ಬರ ಜೊತೆ ಮಾಡಿಕೊಟ್ಟಿದ್ದರು. ಪ್ರೀತಿಯ ತಂಗಿಯ ಮಗನ ಜನನದಿಂದ ಯಶ್ ಅವರು ಮತ್ತೊಮ್ಮೆ ಮಾನವನಾಗಿರುವ ಸಂತಸದಲ್ಲಿದ್ದಾರೆ.

%d bloggers like this: