ಆರ್.ಆರ್.ಆರ್. ಸಿನಿಮಾದ ಪ್ರದರ್ಶನದ ಜೊತೆಗೆ ಬೆಳ್ಳಿ ಪರದೆಯ ಮೇಲೆ ರಾರಾಜಿಸಿಲಿದ್ದಾನೆ ವಿಕ್ರಾಂತ್ ರೋಣ, ಹೌದು ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಆರ್.ಆರ್.ಆರ್. ಸಿನಿಮಾ ಜನವರಿ 7 ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಟಾಲಿವುಡ್ ಸ್ಟಾರ್ ನಟರಾದ ಜ್ಯುನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜಾ ಅವರು ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಸ್ಟಾರ್ ನಟರೂ ಕೂಡ ತಮ್ಮದೇಯಾದ ಅಪಾರ ಅಭಿಮಾನಿ ಬಳಗ ಹೊಂದಿರುವುದರಿಂದ ಅಭಿಮಾನಿಗಳು ಈ ಆರ್ ಆರ್.ಆರ್ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈಗಾಗಲೇ ಆರ್.ಆರ್.ಆರ್. ಸಿನಿಮಾದ ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಸಾಕಷ್ಟು ಕ್ರೇಜ಼್ ಹುಟ್ಟಿ ಹಾಕಿರುವ ಆರ್.ಆರ್.ಆರ್. ಚಿತ್ರ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಜನವರಿ 7 ರಂದು ಆರ್.ಆರ್.ಆರ್. ಸಿನಿಮಾ ದೇಶಾದ್ಯಂತ ರಿಲೀಸ್ ಆಗಲಿದ್ದು, ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಮತ್ತು ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ತೆಲುಗಿನ ಈ ಆರ್.ಆರ್.ಆರ್. ಸಿನಿಮಾದ ಜೊತೆಯೇ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೀಸರ್ ಕೂಡ ಪ್ರದರ್ಶನವಾಗಲಿದೆ ಎಂದು ವಿಕ್ರಾಂತ್ ರೋಣ ಚಿತ್ರತಂಡದ ಆಪ್ತ ಮೂಲಗಳಿಂದ ತಿಳಿದು ಬಂದಿದೆ.



ಹೌದು ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರ ಹೊಸ ವರ್ಷದ 2022 ರ ಫೆಬ್ರವರಿ ತಿಂಗಳ 26 ರಂದು ಗ್ರ್ಯಾಂಡ್ ಆಗಿ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಜಗತ್ತಿನ ಅತಿ ಎತ್ತರದ ಕಟ್ಟಡ ಆಗಿರುವ ಬುರ್ಜ್ ಖಲೀಫಾ ದಲ್ಲಿ ಮಾಡುವ ಮೂಲಕ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಜಗತ್ತಿನಾದ್ಯಂತ ಅಪಾರ ಪ್ರಚಾರ ಎಬ್ಬಿದೆ. ವಿಕ್ರಾಂತ್ ರೋಣ ಸಿನಿಮಾ ತನ್ನ ಎಲ್ಲಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿಕೊಂಡು ರಿಲೀಸ್ ಗೆ ಸಿದ್ದವಾಗಿದೆ.



ಅನೂಪ್ ಬಂಢಾರಿ ನಿರ್ದೇಶನದ ಈ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಬಿಡುಗಡೆಗೆ ಮುಂಚೆ ಭಾರಿ ಸದ್ದು ಮಾಡಿದೆ. ಇತ್ತೀಚೆಗಷ್ಟೇ ಸುದೀಪ್ ಜನ್ಮದಿನಾಚರಣೆದಂದು ವಿಕ್ರಾಂತ್ ರೋಣ ಚಿತ್ರದ ಗ್ಲಿಂಪಸ್ ವೊಂದನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಕಿಚ್ಚ ಸುದೀಪ್ ಆಕ್ಷನ್ ಮಾಡುತ್ತಿರುವ ಈ ತುಣುಕು ಬಿಡುಗಡೆಯಾದ ಎರಡೇ ದಿನದಲ್ಲಿ ಯೂಟ್ಯೂಬ್ ನಲ್ಲಿ ಕೋಟಿಗಟ್ಟಲೆ ವೀಕ್ಷಣೆ ಪಡೆದು ದಾಖಲೆ ನಿರ್ಮಾಣ ಮಾಡಿತ್ತು. ನಿರ್ಮಾಪಕ ಜಾಕ್ ಮಂಜು ಅವರು ವಿಕ್ರಾಂತ್ ರೋಣ ಚಿತ್ರದ ಭರ್ಜರಿ ಪ್ರಮೋಶನ್ ಗಾಗಿ ಇದರ ನಡುವೆ ಹೊಸದೊಂದು ಪ್ಲಾನ್ ಮಾಡಿಕೊಂಡಿದ್ದಾರೆ.



ಅದೇನಪ್ಪಾ ಅಂದರೆ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಆರ್.ಆರ್.ಆರ್.ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಮಲ್ಟಿ ಸ್ಟಾರ್ಸ್ ಸಿನಿಮಾ ಆದ ಕಾರಣ ಈ ಚಿತ್ರವನ್ನು ಬಹುತೇಕ ಎಲ್ಲರು ನೋಡೇ ನೋಡುತ್ತಾರೆ. ಇದೇ ಸಂಧರ್ಭದಲ್ಲಿ ವಿಕ್ರಾಂತ್ ರೋಣ ಚಿತ್ರದ ಪ್ರಮೋಶನ್ ಮಾಡಿಕೊಳ್ಳಲು ಉತ್ತಮ ಅವಕಾಶ ಹಾಗಾಗಿ ಆರ್.ಆರ್.ಆರ್. ಸಿನಿಮಾದ ಪ್ರದರ್ಶನದ ವಿರಾಮ ಅಥವಾ ಆರಂಭದ ನಡುವೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಲುಕ್ ಬಿಡಲು ಜಾಕ್ ಮಂಜು ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ.