ರಷ್ಯಾ ದೇಶಕ್ಕೆ ಹಾರಿದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅವರು

ಕಿರಿಕ್ ಪಾರ್ಟಿ ಖ್ಯಾತಿಯ ನಮ್ಮ ಕೊಡಗಿನ ಬೆಡಗಿಯ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದೆ ಇಟ್ಟಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಒಂದು ಚಿತ್ರ ಯಶಸ್ಸು ಕಂಡರೆ ಸಾಕು. ಇನ್ನು ಸ್ಟಾರ್ ಪಟ್ಟ ಮೂಡಿಗೆರಿದರಂತೂ ಮುಗಿಯಿತು. ಈಗ ರಶ್ಮಿಕಾ ಅವರು ಕೂಡ ಯಶಸ್ಸಿನ ಶಿಖರ ತಲುಪುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಕ್ರಷ್ ಎಂದೇ ಹೆಸರಾಗಿದ್ದ ರಶ್ಮಿಕಾ ಮಂದಣ್ಣ, ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿಯೂ ನಟಿಯಾಗಿ ನಟಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು. ಕನ್ನಡದ, ತಮಿಳು, ತೆಲುಗು ಭಾಷೆಯ ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ರಶ್ಮಿಕಾ ಅವರಿಗೆ ಈ ಅದೃಷ್ಟ ದೊರಕಿದೆ.

ಪುಷ್ಪಾ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿದ ರಶ್ಮಿಕಾ, ಪುಷ್ಪ ಟು ಚಿತ್ರದಲ್ಲೂ ಮಿಂಚಲಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲೂ ರಶ್ಮಿಕ ಅವರದೇ ಹವಾ. ಇನ್ನೊಂದು ಮೈಲಿಗಲ್ಲು ಅನ್ನುವಂತೆ ಇವರು ಬಾಲಿವುಡ್ ನಲ್ಲೂ ಸಿನಿಮಾ ಮಾಡುತ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಏಕೆಂದರೆ ಇವರು ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿವೆ. ರಶ್ಮಿಕಾ ಅಭಿನಯದ ಪುಷ್ಪ1 ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಯಶಸ್ಸಿನ ನಾಗಲೋಟ ಮುಂದುವರೆಸಿದ್ದಾರೆ.

ಮೂಲಗಳ ಪ್ರಕಾರ ಮಲಯಾಳಂ ಚಿತ್ರದ ಸುಪ್ರಸಿದ್ಧ ನಟ ದುಲ್ಕರ್ ಸಲ್ಮಾನ್ ಅವರೊಟ್ಟಿಗೆ ಸಿನಿಮಾ ಶೂಟಿಂಗ್ ಗಾಗಿ ರಶ್ಮಿಕಾ ಮಂದಣ್ಣ ಅವರು ರಷ್ಯಾಗೆ ತೆರಳಿದ್ದಾರೆ. ಹೌದು ತೆಲುಗು ಸಿನಿಮಾ ಒಂದರಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದು, ಈ ಸಿನಿಮಾದ ಮೊದಲ ಭಾಗದ ಶೂಟಿಂಗ್ ಹೈದ್ರಾಬಾದ್ ಮತ್ತು ಕಾಶ್ಮೀರದಲ್ಲಿ ನಡೆದಿದೆ. ಉಳಿದ ಭಾಗದ ಶೂಟಿಂಗ್ ಮಾಡಲು ಚಿತ್ರತಂಡ ತಯಾರಿ ನಡೆಸಿದ್ದು, ಸಿನಿಮಾ ಶೂಟಿಂಗ್ ಗಾಗಿ ರಶ್ಮಿಕಾ ಮಂದಣ್ಣ ರಷ್ಯಾಗೆ ತೆರಳಿದ್ದಾರೆ. ಬಾಥ್ರೂಮ್ ಮಿರರ್ ಮುಂದೆ ನಿಂತು ಕ್ಲಿಕ್ಕಿಸಿದ ಸೆಲ್ಫಿ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಎಲ್ಲಾ ಅಭಿಮಾನಿಗಳಿಗೆ ಹಾಯ್ ಫ್ರಮ್ ರಷ್ಯಾ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

%d bloggers like this: