ಸಾಲಭಾದೆಯಿಂದ ಮುಕ್ತರಾಗಬೇಕೆಂದರೆ ತಪ್ಪದೆ ಇದನ್ನು ಪಾಲಿಸಿ

ಕೆಲವರಿಗೆ ಎಷ್ಟು ದುಡಿದರೂ ಸಹ ಹಣದ ಕೊರತೆ ಎನ್ನುವುದು ಮಾತ್ರ ನೀಗುವುದಿಲ್ಲ. ಋಣಾನುಬಂಧ ರೂಪೇಣ ಪಶುಪತಿ ಸುತಾಲಯ ಅನ್ನೋ ಹಾಗೇ ನಿಮಗೆ ಲಭಿಸುವ ಪ್ರತಿಯೊಂದು ವಸ್ತುವಿಗೂ ಅದರದೆ ಆದ ಋಣವಿರುತ್ತದೆ. ಅದರಲ್ಲೂ ಈ ಉಪ್ಪಿನ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಅಂತಹ ಮಹತ್ವ ಪಡೆದುಕೊಂಡಿದೆ. ಮನೆಯಲ್ಲಿ ಇರುವ ಸದಸ್ಯರೆಲ್ಲರೂ ದುಡಿಯುತ್ತಿದ್ದರು ಸಾಲ ಎಂಬುದು ಮಾತ್ರ ತೀರದು ಸದಾ ಸಾಲದ ಭಾರದಲ್ಲಿ ಬಳಲುವವರೇ ಹೆಚ್ಚು, ಈ ಸಾಲದ ಋಣದಿಂದ ಅಂದರೆ ಹಣದ ದಾರಿದ್ರ್ಯತನದಿಂದ ನೀವು ಮುಕ್ತರಾಗಬೇಕಾದರೆ ನೀವು ಪ್ರತಿನಿತ್ಯ ಚಾಚೂತಪ್ಪದೆ ಈವೊಂದು ಕೆಲಸವನ್ನು ಪಾಲಿಸಿಕೊಂಡು ಬರಬೇಕು. ಅದೇನಪ್ಪಾ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಮನೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ನಿಮ್ಮ ಮನೆಯ ನಾಕೂ ಮೂಲೆಗಳಲ್ಲಿ ಒಂದು ಚಿಟುಕಿ ಉಪ್ಪನ್ನು ದಿನನಿತ್ಯ ಇಡುತ್ತಿರಬೇಕು.

ಇದಾದ ಬಳಿಕ ದೇವರಿಗೆ ದೀಪ ಹಚ್ಚಬೇಕು,ದೀಪ ಹಚ್ಚುವುದಕ್ಕೂ ಒಂದು ನಿಯಮವಿದೆ ದೇವರಿಗೆ ದೀಪ ಹಚ್ಚುವಾಗ ಹರಳೆಣ್ಣೆ, ಎಳ್ಳೆಣ್ಣೆ ಬಳಸಬಾರದು, ಇದರ ಬದಲು ತೆಂಗಿನೆಣ್ಣೆ ಅಥವಾ ನಿಮಗೆ ಸಾಧ್ಯವಾದರೆ ತುಪ್ಪದ ದೀಪ ಹಚ್ಛಬೇಕು ಈ ರೀತಿ ಒಂದು ವಾರಗಳ ಕಾಲ ನಿಯಮ ಪಾಲಿಸಬೇಕು. ಮರುದಿನ ಬೆಳಿಗ್ಗೆ ಈ ಉಪ್ಪನ್ನು ಯಾರೂ ದಾಟದ ಹಾಗೇ, ತುಳಿಯದ ಹಾಗೇ ನೋಡಿಕೊಂಡು ಆ ಉಪ್ಪನ್ನು ಅಂಗಳದಲ್ಲಿ ಹರಡಲು ಬಿಡದೇ ಸಂಪೂರ್ಣವಾಗಿ ತೆಗೆದುಬಿಡಬೇಕು ಈ ರೀತಿಯಾಗಿ ನೀವು ಒಂದು ವಾರ ಪಾಲಿಸಿದರೆ ನಿಮ್ಮ ಹಣದ ದಾರಿದ್ರ್ಯತನ ದೂರವಾಗುತ್ತದೆ ಸಾಲದ ಋಣದಿಂದ ಮುಕ್ತವಾಗಿ ನೀವು ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ಜ್ಯೋತಿಷ್ಯಶಾಸ್ಥ್ರಜ್ಞರು ತಿಳಿಸುತ್ತಾರೆ.

%d bloggers like this: