ಸಾವಿರ ಕೋಟಿಯ ಸರದಾರನಾದ ರಾಕಿಂಗ್ ಸ್ಟಾರ್ ಯಶ್ ಅವರು

ವಿಶ್ವದಾದ್ಯಂತ ಇದೀಗ ಸದ್ದು ಮಾಡುತ್ತಿರುವ ಸಿನಿಮಾ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್2 ಸಿನಿಮಾದ ಅಭೂತಪೂರ್ವ ಯಶಸ್ಸು. ಅದು ಯಾವ ಮಟ್ಟಿಗೆ ಅಂದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡುತ್ತಿರುವ ನಂಬರ್ ಒನ್ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಲು ಹೊರಟಿದೆ ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ. ಒಂದು ಕಾಲದಲ್ಲಿ ಕನ್ನಢ ಸಿನಿಮಾ ಪರಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುವುದಕ್ಕೆ ಹರ ಸಾಹಸ ಪಡಬೇಕಾಗಿತ್ತು. ಆದ್ರೆ ಇಂದೂ ಕನ್ನಡದ ನಮ್ಮ ಕೆಜಿಎಫ್2 ಸಿನಿಮಾ ಪಂಚ ಭಾಷೆಯಲ್ಲಿ ರಿಲೀಸ್ ಆಗಿ ಬರೋಬ್ಬರಿ 1000 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಈ ರೀತಿಯ ದಾಖಲೆ ಮುಂದಿನ ದಿನಗಳಲ್ಲಿ ಆಗುತ್ತೋ ಇಲ್ವೋ ಎಂಬುದು ನಿಜಕ್ಕೂ ಪ್ರಶ್ನಾರ್ಥಕ. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಸೈಡ್ ಲೈನ್ ಮಾಡಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.

ಕೆಜಿಎಫ್2 ಚಿತ್ರ ಅಮಿರ್ ಖಾನ್ ನಟನೆಯ ದಂಗಲ್ ಚಿತ್ರದ ದಾಖಲೆಯನ್ನು ಮುರಿಯಲು ಇನ್ನು ಕೇವಲ ಮೂವತ್ತು ಕೋಟಿಯ ಟಾರ್ಗೆಟ್ ಇದೆ ಅಷ್ಟೇ. ಮಿಸ್ಟರ್ ಪರ್ಫೆಕ್ಟ್ ಖ್ಯಾತ ನಟ ಅಮೀರ್ ಖಾನ್ ಅವರ ಅಭಿನಯದ ದಂಗಲ್ ಸಿನಿಮಾ ಭಾರತದಲ್ಲಿ ಕಲೆಕ್ಷನ್ ಮಾಡಿದ್ದು 387 ಕೋಟಿ. ಇದೀಗ ಹಿಂದಿಯಲ್ಲಿ 350 ಕೋಟಿ ಗಳಿಕೆ ಮಾಡಿರುವ ಕೆಜಿಎಫ್2 ಚಿತ್ರ ಇನ್ನು 30 ಕೊಟಿ ಕಲೆಕ್ಷನ್ ಮಾಡಿದ್ರೆ ದಂಗಲ್ ಚಿತ್ರದ ದಾಖಲೆ ಕೂಡ ಬ್ರೇಕ್ ಆಗಲಿದೆ. ಈ ಮೂಲಕ ಹಿಂದಿ ಭಾಷೆಯಲ್ಲಿ 380 ಕೋಟಿ ದಾಖಲೆ ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಕೀರ್ತಿಗೆ ನಮ್ಮ ಕನ್ನಡದ ಕೆಜಿಎಫ್2 ಚಿತ್ರ ಪಾತ್ರವಾಗಲಿದೆ. ಈಗಾಗ್ಲೇ ನಮ್ಮ ಕನ್ನಡದಿಂದ ಹೋಗಿ ತಮಿಳ್ನಾಡಲ್ಲಿ 100 ಕೋಟಿ, ಕೇರಳದಲ್ಲಿ 60 ಕೋಟಿ, ಆಂಧ್ರದಲ್ಲಿ 160 ಕೋಟಿ, ಹಿಂದಿಯಲ್ಲಿ 350 ಕೋಟಿ ಕಲೆಕ್ಷನ್ ಮಾಢಿದಂತಹ ಕನ್ನಡದ ಕೆಜಿಎಫ್ 2.ಚಿತ್ರ ಇತ್ತೀಚೆಗೆ ತಾನೇ ಅಧಿಕೃತವಾಗಿ ಸಾವಿರ ಕೋಟಿ ಗಳಿಕೆಯ ಬಗ್ಗೆ ತಿಳಿಸಿದೆ.

ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಒಂದು ವಾರದೊಳಗೆ ಕೆಜಿಎಫ್2 ಸಿನಿಮಾ ಈ ಮೂವತ್ತು ಕೋಟಿ ಕಲೆಕ್ಷನ್ ಮಾಡಿ ಖಂಡಿತವಾಗಿ ಕೂಡ ದಂಗಲ್ ಚಿತ್ರದ ದಾಖಲೆಯನ್ನು ಪುಡಿ ಪುಡಿ ಮಾಡಲಿದೆ. ಒಂದು ವೇಳೆ ನಮ್ಮ ಕನ್ನಡದ ಕೆಜಿಎಫ್2 ಚಿತ್ರವನ್ನ ಚೀನಾ ಜಪಾನ್ ಭಾಷೆಗೆ ಡಬ್ ಮಾಡಿದರೆ ಮುಲಾಜಿಲ್ಲದೆ ಇನ್ನೊಂದೆರಡು ಸಾವಿರ ಕೋಟಿ ಬಾಚುವುದರಲ್ಲಿ ಯಾವ ರೀತಿಯ ಅನುಮಾನವಿಲ್ಲ. ಯಾಕಂದ್ರೆ ದಂಗಲ್ ಚಿತ್ರ ಹಿಂದಿಯಲ್ಲಿ 380 ಕೋಟಿ ಗಳಿಕೆ ಮಾಡಿತ್ತು. ಇದಾದ ಬಳಿಕ ಚೀನಿ ಭಾಷೆಯಲ್ಲಿ ಡಬ್ ಮಾಡಿ ರೀ ರಿಲೀಸ್ ಮಾಡಿದಾಗ ಚೀನಿ ಭಾಷೆಯೊಂದರಲ್ಲೆ ದಂಗಲ್ ಚಿತ್ರ ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ತನ್ನ ಬೊಕ್ಕಸಕ್ಕೆ ತುಂಬಿಕೊಂಡಿತ್ತು. ಇದೇ ರೀತಿ ಕೆಜಿಎಫ್2 ಚಿತ್ರ ಏನಾದ್ರು ಚೀನಿ ಭಾಷೆಯಲ್ಲಿ ಡಬ್ ಆದ್ರೆ ಭಾರತದ ಯಾವ ಸಿನಿಮಾ ಮಾಡದ ದಾಖಲೆಯನ್ನು ಕೆಜಿಎಫ್2 ಚಿತ್ರ ಮಾಡಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ. ಒಟ್ಟಾರೆಯಾಗಿ ಕನ್ನಡದ ಸಿನಿಮಾವೊಂದು ಈ ಪರಿಯ ಸಕ್ಸಸ್ ಕಾಣ್ತಿರೋದು ಹೆಮ್ಮೆಯೇ ಸರಿ ಎಂದು ಹೇಳಬಹುದು.

%d bloggers like this: