ಉಂಡ ಮನೆಗೆ ದ್ರೋಹ ಬಗೆಯುವುದು ಎಂದರೆ ಇದೇ ಇರಬೇಕು, ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು ಸುಮಾರು ದಶಕಗಳ ಹಿಂದೆಯೇ ಕರ್ನಾಟಕದಲ್ಲಿ ಸ್ಥಾಪನೆಯಾಗಿದೆ ಅಂದು ಮೈಸೂರಿನ ರಾಜರು ಈ ಭಾರತೀಯ ವಿಜ್ಞಾನ ಸಂಸ್ಥೆಗೆ ಉಚಿತ ಹಾಗೂ ಉಡುಗೊರೆಯಾಗಿ ನೂರಾರು ಎಕರೆ ಜಾಗವನ್ನು ನೀಡಿದ್ದರು. ಅಂದು ಉಚಿತವಾಗಿ ಜಾಗವನ್ನು ಪಡೆದು ಸ್ಥಾಪನೆಯಾದ ಈ ವಿಜ್ಞಾನ ಸಂಸ್ಥೆ ಇಂದು ಇದೇ ನೆಲದ ಕನ್ನಡಿಗರನ್ನು ಕಡೆಗಣಿಸುತ್ತಿದೆ. ಈಗ ಈ ವಿಜ್ಞಾನ ಸಂಸ್ಥೆಯಲ್ಲಿ ಬರೀ ಇಂಗ್ಲಿಷ್ ಹಾಗೂ ಹಿಂದಿಯ ರಾಜ್ಯಭಾರ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ವಿಜ್ಞಾನ ವಿದ್ಯಾಲಯ ಸಂಸ್ಥೆಯಲ್ಲಿ ಕರ್ನಾಟಕದ ಜನರನ್ನು ಕಡೆಗಣಿಸುತ್ತಿರುವ ಸಂಸ್ಥೆ ಅಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನವರು ಹೊರ ರಾಜ್ಯದವರೇ ಇದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಈ ವಿಜ್ಞಾನ ಸಂಸ್ಥೆಗೆ ಮೊದಲು 440 ಎಕರೆ ಜಾಗವನ್ನು ನೀಡಿತ್ತು ಇತ್ತೀಚಿಗೆ ಇದೆ ಸಂಸ್ಥೆಗೆ ಚಿತ್ರದುರ್ಗದ ಸಮೀಪ ಬರೋಬ್ಬರಿ ಒಂದು ಸಾವಿರದ ಐದುನೂರು ಎಕರೆ ಜಾಗವನ್ನು ಕೊಟ್ಟಿದೆ, ಇಷ್ಟೆಲ್ಲಾ ಸವಲತ್ತನ್ನು ಪಡೆಯುತ್ತಿರುವ ಈ ಸಂಸ್ಥೆ ಮಾತ್ರ ತನ್ನ ಸಂಸ್ಥೆಯಲ್ಲಿ ಬರೀ ರಾಜ್ಯದವರಿಗೆ ಮಣ್ಣನೆ ನೀಡುತ್ತಿದೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಅವರು ಮಾತುಕತೆ ನಡೆಸಲಿದ್ದಾರೆ. ಬರಿ ಇದೊಂದೇ ಸಂಸ್ಥೆ ಅಲ್ಲ ಇಂತಹ ಸಂಸ್ಥೆಗಳು ಕನಾಟಕದ ತುಂಬೆಲ್ಲಾ ಇದೆ. ಅದರಲ್ಲೂ ಹೆಚ್ಚಿನವರೇ ವಲಸಿಗರು ಬೆಂಗಳೂರಿನಲ್ಲಿ ಕನ್ನಡಿಗರನ್ನೇ ಕಡೆಗಣಿಸುತ್ತಾರೆ, ಇದೆಲ್ಲಾ ಹತೋಟಿಗೆ ಬರಬೇಕೆಂದರೆ ಸಾಮಾನ್ಯ ಕನ್ನಡಿಗ ಎಚ್ಚೆತ್ತುಕೊಂಡು ಇರಬೇಕು.