ಆರೋಗ್ಯ ವಿಚಾರವಾಗಿ ಹೆಚ್ಚೆಚ್ಚು ಕಾಳಜಿ ವಹಿಸುವ ನಾವು ಯಾವ ಪೌಷ್ಠಿಕಾಂಶ ಆಹಾರ ಸೇವಿಸಬೇಕು ಎಂಬುದನ್ನು ತಿಳಿದಿರುತ್ತೇವೆ, ಆದರೆ ಆ ಪೌಷ್ಟಿಕಾಂಶಗಳ ಆಹಾರ ಹೇಗೆ ತಯಾರಾಗುತ್ತವೆ ಅದರಿಂದ ನಮ್ಮ ಶರೀರಕ್ಕೆ ಯಾವ ರೀತಿಯ ಪ್ರಯೋಜನ ಅಗುತ್ತದೆ ಎಂಬುದನ್ನು ಬಹಳ ಜನರು ತಿಳಿದಿರುವುದಿಲ್ಲ. ನಮ್ಮ ದೇಹಕ್ಕೆ ಈ ಪೌಷ್ಠಿಕಾಂಶ ಆಹಾರಗಳಿಂದ ಏನೆಲ್ಲಾ ಪ್ರಯೋಜನಕಾರಿ ಆಗುತ್ತದೆ ಎಂದು ತಿಳಿದುಕೊಳ್ಳುವುದಕ್ಕೂ ಮುಂಚೆ ಅದರ ತಯಾರು ಹೇಗೆ ಆಗುತ್ತವೆ ಎಂಬುದನ್ನು ತಿಳಿಯೋಣ. ನಮ್ಮ ಹಿಂದೂಸಂಸ್ಕೃತಿ, ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಪೂಜೆ ಪುನಸ್ಕಾರ ಮಾಡುವಾಗ ಉಪವಾಸ ಮಾಡುವ ಪದ್ದತಿ ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುತ್ತಾರೆ. ಈ ಉಪವಾಸ ಸಂಧರ್ಭಗಳಲ್ಲಿ ನಮ್ಮ ಹಿರಿಯರು ಸಬ್ಬಕ್ಕಿಯನ್ನು ಮಿಥ್ಯ ಆಹಾರ ಎಂದು ಸಬ್ಬಕ್ಕಿಯನ್ನು ಬಳಸುತ್ತಿದ್ದರು. ಸಬ್ಬಕ್ಕಿಯು ನಮ್ಮ ದೇಹದಲ್ಲಿ ಸುಲಭವಾಗಿ ಜೀರ್ಣ ಕ್ರಿಯೆಯನ್ನು ನಡೆಸುತ್ತದೆ.

ಸಬ್ಬಕ್ಕಿಯನ್ನು ದೈಹಿಕವಾಗಿ ಆಶಕ್ತರಿಗೆ ಗಂಜಿಯ ರೂಪದಲ್ಲಿ ಆಹಾರವಾಗಿ ನೀಡುತ್ತಾರೆ, ಇದನ್ನು ಶಿಶು ಆಹಾರವಾಗಿ ಹೆಚ್ಚು ಬಳಸುವುದುಂಟು ಈ ಸಬ್ಬಕ್ಕಿಯಿಂದ ಮಾಡಿದ ಆಹಾರ ನಿಶ್ಯಕ್ತಿಯನ್ನು ಹೋಗಲಾಡಿಸಿ ಶರೀರದಲ್ಲಿ ಶಕ್ತಿವರ್ಧನೆ ಮಾಡುತ್ತದೆ. ಸಬ್ಬಕ್ಕಿಯಲ್ಲಿ ರುಚಿಕರವಾದ ಇಡ್ಲಿ, ವಡೆ, ಉಪ್ಪಿಟ್ಟು ಹೀಗೆ ಹಲವು ರೀತಿಯಾದ ಆಹಾರ ಪಧಾರ್ಥಗಳಿಗೆ ಸಬ್ಬಕ್ಕಿಯನ್ನು ಬಳಸುತ್ತಾರೆ. ಆಹಾರಕ್ರಮದಲ್ಲಿ ಸಬ್ಬಕ್ಕಿಯನ್ನುಬಳಸುವುದಕ್ಕಿಂತ ಮುಂಚೆ ಮೂರು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ಹದವಾಗಿ ರುಬ್ಬಿಕೊಂಡು ಇದರಿಂದ ಆಹಾರ ಪಧಾರ್ಥ ತಯಾರು ಮಾಡುತ್ತಾರೆ.

ಇನ್ನು ಈ ಸಬ್ಬಕ್ಕಿಯನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದನ್ನುತಿಳಿಯುವುದಾದರೆ ಈ ಸಬ್ಬ್ಕಕಿಯನ್ನು ಮರಗೆಣಸು ಇಂದ ತಯಾರು ಮಾಡುತ್ತಾರೆ, ಈ ಮರಗೆಣಸನ್ನು ಹೆಚ್ಚು ತಮಿಳುನಾಡು ಭಾಗದಲ್ಲಿಬೆಳೆದರು ಹೆಚ್ಚು ಅದನ್ನು ಉಪಯೋಗಿಸುವುದು ನಮ್ಮರಾಜ್ಯದ ದಕ್ಷಿಣ ಕರ್ನಾಟಕದಲ್ಲಿ ಎಂಬುದು ವಿಶೇಷವಾಗಿದೆ. ಮರಗೆಣಸನ್ನು ತೊಳೆದು ಇದನ್ನು ಚೆನ್ನಾಗಿ ಬೇಯಿಸಿ ಇದರ ಸಿಪ್ಪೆತೆಗೆದು ಅದನ್ನು ಹದವಾಗಿ ರುಬ್ಬಿ ಅದರಿಂದ ಬರುವ ಹಾಲಿನ್ನು ಒಂದು ಪಾತ್ರೆಯಲ್ಲಿಡುತ್ತಾರೆ. ಆ ಹಾಲನ್ನು ಪಾತ್ರೆಗೆ ಹಾಕಿದಾಗ ಮೇಲ್ಭಾಗಕ್ಕೆ ಬರುವ ಪಿಷ್ಟ ನೀರಿನ ಅಂಶವನ್ನು ಬೇರ್ಪಡಿಸುತ್ತದೆ. ನಂತರ ಉಳಿದನ್ನು ಹಿಟ್ಟಾಗಿ ಪರಿವರ್ತಿಸಿ ದುಂಡಾಕಾರದಲ್ಲಿ ಸಬ್ಬಕ್ಕಿಯಾಗಿ ಕರಿದ ನಂತರದಲ್ಲಿ ಇದು ಬಿಳಿಬಣ್ಣಕ್ಕೆ ತಿರುಗುತ್ತದೆ.
ಸಬ್ಬ್ಕಕಿ ಹಿಟ್ಟಿನಲ್ಲಿ ವಿಟಮಿನ್ ಸಿ ಪುಷ್ಕಳವಾಗಿದ್ದು ಇದು ಅಶಕ್ತರಾದ ವ್ಯಕ್ತಿಗಳಿಗೆ ತಿನ್ನಿಸುವುದರಿಂದ ಶಕ್ತಿವಂತ ರಾಗುತ್ತಾರೆ, ಹಬ್ಬ ಹುಣ್ಣಿಮೆ ಹರಿದಿನಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಜೊತೆಗೆಇತ್ತೀಚಿನ ದಿನಮಾನಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಸಬ್ಬಕ್ಕಿಯನ್ನುಯತೇಚ್ಚವಾಗಿ ಬಳಸುತ್ತಾರೆ. ಅನೇಕ ರೋಗಗಳಿಗೆ ರಾಮಬಾಣವಾದ ಈ ಸಬ್ಬಕ್ಕಿ ಪದಾರ್ಥದಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಅಂಶಗಳು ಹೆಚ್ಚಾಗಿರುತ್ತದೆ ಸ್ನಾಯುಗಳಿಗೆ ಮಾಂಸ ಖಂಡಗಳು ಹೆಚ್ಚು ಬಲವರ್ಧನೆಗೊಳ್ಳಲು ಸಹಾಯಕವಾಗಿದೆ.

ಸಬ್ಬಕ್ಕಿಯು ಹೃದಯ ಸಂಬಂಧಿ ಕಾಯಿಲೆಗಳಿಗೆ, ಜನನಾಂಗದಲ್ಲಿ ಉಂಟಾಗುವಂತಹ ಅಂಗವೈಕಲ್ಯ ಸಮಸ್ಯೆಗಳಿಗೆ ಉತ್ತಮ ಪ್ರಯೋಜನಕಾರಿ ಆಹಾರವಾಗಿದ್ದು ಇದನ್ನು ಗರ್ಭಿಣಿಯರು ಹೆಚ್ಚಾಗಿ ಸೇವಿಸುವುದು ಉತ್ತಮವಾಗಿದೆ, ಏಕೆಂದರೆ ಇದರಲ್ಲಿ ಹೇರಳವಾಗಿ ಪೋಷಕಾಂಶಗಳಿದ್ದು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ತೆಗೆಯುತ್ತದೆ. ನೈಸರ್ಗಿಕ ವಾದಂತಹ ಷರ್ಕರ ಅಂಶಗಳು ಇರುವುದರಿಂದ ಸಕ್ಕರೆ ಕಾಯಿಲೆ ಉಂಟಾಗುವುದಿಲ್ಲ. ಮೆದುಳಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಶರೀರದ ಗಾತ್ರ ಹೆಚ್ಚಾಗಿರುವವರು ಪ್ರತಿನಿತ್ಯ ಸಬ್ಬಕ್ಕಿ ಸೇವಿಸುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.