ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಕಾರು ಕ್ರೇಜ಼್ ಉಳ್ಳವರು, ಪ್ರತಿ ವೀಕೆಂಡ್ ನಲ್ಲಿ ಲಾಂಗ್ ಡ್ರೈವ್ ಹೋಗುವ ಸಚಿನ್ ಪ್ರತಿಬಾರಿ ವೀಕೆಂಡ್ ಹೋಗುವಾಗ ವೈಶಿಷ್ಟ್ಯ ಕಾರನ್ನೇ ಬಳಸುತ್ತಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅಂತಹ ಐಷರಾಮಿ ಕಾರನ್ನು ಚಲಾಯಿಸುತ್ತಿರುವ ಫೋಟೋಗಳನ್ನು ನೋಡಬಹುದು. ಸಚಿನ್ ಅವರು ಹಲವು ಪ್ರತಿಷ್ಠಿತ ಕಾರುಗಳ ರಾಯಭಾರಿ ಆಗಿರುವುದರಿಂದ ಇವರ ಬಳಿ ಹತ್ತು ಹಲವು ಐಷರಾಮಿ ಕಾರುಗಳಿವೆ. ಅವುಗಳಲ್ಲಿ ಬಿ.ಎಂ.ಡಬ್ಲ್ಯು ಇಂಡಿಯಾ ಕಾರನ್ನು ಹೆಚ್ಚು ಬಳಸುತ್ತಿದ್ದರು. ಆದರೆ ಇದೀಗ ಅದಕ್ಕಿಂತ ಅಡ್ವಾನ್ಸ್ ಫೀಚರ್ ಹೊಂದಿರುವ ಪೋರ್ಷೇ 911 ಎಸ್ ಟರ್ಬೋ ಕಾರನ್ನು ಕಳೆದ ವೀಕೆಂಡ್ ನಲ್ಲಿ ಬಳಸಿದ್ದಾರೆ.

ಸಚಿನ್ ಅವರ ಬಳಿ ಈ ಪೋರ್ಷೇ ದುಬಾರಿ ಕಾರ್ ಇರುವುದು ಬಹುತೇಕರಿಗೆ ತಿಳಿದಿರುವುದಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಕ್ರಿಕೆಟಿಗರು, ಅಭಿಮಾನಿಗಳು ಸಚಿನ್ ಅವರು ಈ ಪೋರ್ಷೇ ಕಾರನ್ನು ಚಲಾಯಿಸುತ್ತಿರು ಫೋಟೋ ನೊಡಿ ಆಶ್ಚರ್ಯ ಪಟ್ಟಿದ್ದಾರೆ. ಅಸಲಿಗೆ ಇದು 2015ರಲ್ಲೇ ಖರೀದಿ ಮಾಡಿದ ಕಾರ್ ಆಗಿದೆ. ಆದರೆ ಸಚಿನ್ ಅವರು ಈ ಪೋರ್ಷೇ 911ಎಸ್ ಟರ್ಬೋ ಕಾರಿನ ಜೊತೆ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಈ ಪೋರ್ಷೇ ಎಸ್ 911 ಟರ್ಬೋ ಕಾರು ಇತರೆ ಐಷರಾಮಿ ಕಾರಿಗಿಂತ ಹೇಗೆ ವಿಭಿನ್ನವಾಗಿದೆ ಎಂದು ನೋಡುವುದಾದರೆ. ರೂಪಾಂತರಪಡೆದ ಈ ಪೋರ್ಷೇ ಟರ್ಬೋ ಎಸ್ ಕಾರು ಹೆಚ್ಚು ಸಾಮಾರ್ಥ್ಯ ಹೊಂದಿದೆ. ಕೇವಲ 3.1 ಸೆಕೆಂಡ್ ಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆದುಕೊಂಡಿದೆ.

ಈ ಕಾರು 20 ಸೆಕೆಂಡ್ ಗಳ ಓವರ್ ಬೂಸ್ಟ್ ಸಮಯದಲ್ಲಿ ಎಂಜಿನ್ 700 ಎನ್ ಎಂ ನಿಂದ 750 ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಕೇರ್ ಬಾಕ್ಸ್ ಹೊಂದಿದ್ದು ಇತರೆ ಸ್ಪೋರ್ಟ್ಸ್ ಫೀಚರ್ಸ್ ಗಿಂತ ಹೆಚ್ಚು ಅಡ್ವಾನ್ಸ್ ಆಗಿದೆ. ಈ ಕಾರು ವಿಶೇಷವಾಗಿ ಇಂಟೇರಿಯರ್ ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಜೊತೆಗೆ ವಿಶಾಲ ಡಿಸ್ ಪ್ಲೇ ಇನ್ಫೋಟೈನ್ ಮೆಂಟ್ ಸಂಪರ್ಕ ತಂತ್ರಜ್ಞಾನ ಒಳಗೊಂಡಿದೆ. ಇನ್ನು ಈ ಪೋರ್ಷೇ 911 ಎಸ್ ಟರ್ಬೋ ಕಾರು ಗಂಟೆಗೆ 100 ಕಿಮೀ ವೇಗ ಹೊಂದಿದ್ದು ಟಾಪ್ ಸ್ಪೀಡ್ 315 ಕಿಮೀ ಗೆ ಸೀಮಿತಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಕಾರು ವಿಶ್ವದ ಪ್ರತಿಷ್ಠಿತ ಗಣ್ಯರ ಅಚ್ಚು ಮೆಚ್ಚಿನ ಕಾರ್ ಆಗಿದೆ. ಈ ಕಾರಿನ ಬೆಲೆಯೂ 2.86 ಕೋಟಿಯಷ್ಟಿದೆ.