ಸದ್ದಿಲ್ಲದೇ ಹಸೆಮಣೆ ಏರಿದ ನಟಿ ಕಾಜಲ್ ಅಗರವಾಲ್, ಪತಿ ಯಾರು ಗೊತ್ತೇ

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಭಾರಿ ಜನಪ್ರಿಯದ ಜೊತೆಗೆ ಸಾಕಷ್ಟು ಬೇಡಿಕೆಯೊಂದಿರುವ ನಟಿಯರಲ್ಲಿ ನಟಿ ಕಾಜಲ್ ಅಗರ್ ವಾಲ್ ಕೂಡ ಒಬ್ಬರು. 2009ರಲ್ಲಿ ತೆರೆಕಂಡ ತೆಲುಗಿನ ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಮಗಧೀರನ ರಾಣಿಯಾಗಿ ಎಂಟ್ರಿ ಕೊಟ್ಟ ಈ ನಟಿ ತನ್ನ ಅಮೋಘ ಅಭಿನಯದ ಮೂಲಕ ಯುವರಾಣಿಯ ಪಾತ್ರದಲ್ಲಿ ಸಿನಿರಸಿಕರ ಮನಗೆದ್ದರು. ತದನಂತರ ತನ್ನ ನಟನೆಯ ಸಾಮ್ರಾಜ್ಯವನ್ನು ಬೇರೆ ಭಾಷೆಗಳತ್ತ ವಿಸ್ತರಿಸಿಕೊಳ್ಳುತ್ತಾ ತಮಿಳು, ಹಿಂದಿ ಭಾಷೆಗಳಿಗೂ ಲಗ್ಗೆ ಇಟ್ಟು ಜನಪ್ರಿಯತೆ ಗಳಿಸಿದರು ನಟಿ ಕಾಜಲ್ ಅಗರ್ ವಾಲ್.

ಸಧ್ಯಕ್ಕೆ ಇವರು ಸುದ್ದಿಯಾಗಿರುವುದು ಅವರ ನಟನೆಯ ಸಿನಿಮಾದಿಂದಲ್ಲ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೌದು ನಟಿ ಕಾಜಲ್ ಅಗರ್ ವಾಲ್ ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾಗಿದ್ದಾರೆ‌, ಮದುವೆ ತಯಾರಿ ಫೋಟೋಗಳನ್ನು ಕಾಜಲ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಧುಮಗಳಾಗಿ ಮಿಂಚಿರುವ ಕಾಜಲ್ ಅವರ ಉಡುಗೆ, ತೊಡುಗೆಗಳು ಅವರ ವಸ್ತ್ರ ವಿನ್ಯಾಸಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.

ಮದವೆಯಲ್ಲಿ ಅವರು ತೊಟ್ಟಿದ್ದ ಕಡುಗೆಂಪು ಬಣ್ಣದ ದುಪ್ಪಟ ಹಾಗೂ ಗುಲಾಬಿ ಬಣ್ಣ ಹಚ್ಚೊತ್ತಿದ್ದ ಸಿಲ್ವರ್ ಬಣ್ಣದ ಶೆರ್ವಾನಿಯಲ್ಲಿ ವರ ಗೌತಮ್ ಕಿಚ್ಲು ಸಂಭ್ರಮಾಚರಣೆಯಲ್ಲಿ ಮಿಂಚುತ್ತಿದ್ದರು, ಮದುವೆಯ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಕೇವಲ ಅವರ ಆಪ್ತರು ಮತ್ತು ಕುಟುಂಬದ ವರ್ಗದವರು, ಹಿತೈಷಿಗಳು ಮಾತ್ರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ತಿಂಗಳು ನಟಿ ಕಾಜಲ್ ಅಗರ್ ವಾಲ್ ಅವರು ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದರು.

%d bloggers like this: