ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಕನ್ನಡದ ಖ್ಯಾತ ನಟಿ

ಚಂದನವನದ ಜನಪ್ರಿಯ ನಟಿಯೊಬ್ಬರು ಯಾರಿಗೂ ತಿಳಿಸದೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಹೌದು ಕನ್ನಡ ಚಿತ್ರರಂಗದ ಅನೇಕ ಯುವ ಕಲಾವಿದರು ಸಿಂಗಲ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಮುಖ ಮಾಡುತ್ತಿದ್ದಾರೆ. ಅದರಂತೆ ಇದೀಗ ಕನ್ನಡದ ಖ್ಯಾತ ನಟಿ ಅಧಿತಿ ಪ್ರಭುದೇವ ಅವರು ಕೂಡ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನಟಿ ಅಧಿತಿ ಪ್ರಭುದೇವ ಅವರು ಕನ್ನಡದ ಇತರೆ ನಟಿಯರಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎನ್ನಬಹುದು. ಏಕೆಂದರೆ ಕನ್ನಡ ನಾಡು ನುಡಿ, ಸಂಸ್ಕೃತಿ ಭಾಷೆ ಜಲದ ಬಗ್ಗೆ ಆಗಾಗ ಧೈರ್ಯವಾಗಿ ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಕನ್ನಡಿಗರಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಖಾಸಗಿ ಸಂದರ್ಶನವೊಂದರಲ್ಲಿ ಅಧಿತಿ ಪ್ರಭುದೇವ ಅವರು ತಮ್ಮ ಬಾಳ ಸಂಗಾತಿ ಹೇಗಿರಬೇಕು ಎಂಬುದನ್ನ ಹಂಚಿಕೊಂಡಿದ್ದರು. ಅಂದರೆ ಅವರ ಲೈಫ್ ಪಾರ್ಟ್ನರ್ ಕೃಷಿ ಕ್ಷೇತ್ರದಲ್ಲಿ ತೊಡಿಗಿಸಿಕೊಂಡಿದ್ದರೆ ನನಗೆ ಇಷ್ಟ ಆಗುತ್ತಾರೆ ಎಂದು ತಿಳಿಸಿದ್ದರು. ಅಧಿತಿ ಅವರು ಕೂಡ ಲಾಕ್ ಡೌನ್ ಸಂಧರ್ಭದ ದಿನಗಳಲ್ಲಿ ತಮ್ಮ ಊರಿಗೋದಾಗ ಟ್ರ್ಯಾಕ್ಟರ್ ಓಡಿಸಿ ಹೊಲದಲ್ಲಿ ಒಂದಷ್ಟು ಕೆಲಸ ಕಾರ್ಯಗಳನ್ನು ಮಾಡಿ ಅದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಈ ವೀಡಿಯೋಗಳು ವೈರಲ್ ಕೂಡ ಆಗಿದ್ದವು.

ಇತ್ತೀಚೆಗೆ ಅಧಿತಿ ಪ್ರಭುದೇವ ಅವರು ವಿಶೇಷವಾದ ಸೂಪರ್ ವುಮೆನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆನಾ ಸಿನಿಮಾ ಕೂಡ ಬಿಡುಗಡೆ ಆಗಿ ಉತ್ತಮ ಮೆಚ್ಚುಗೆ ಪಡೆದುಕೊಂಡಿದ್ದರು ಕೂಡ ಪರಭಾಷೆ ಚಿತ್ರಗಳ ಹಾವಳಿ ಹಿನ್ನೆಲೆ ಥಿಯೇಟರ್ ಸಮಸ್ಯೆಯಿಂದಾಗಿ ಆನ ಚಿತ್ರಕ್ಕೆ ನಕರಾತ್ಮಕ ಪರಿಣಾಮ ಬೀರಿತು ಎನ್ನಬಹುದು. ಆ ಸಂಧರ್ಭದಲ್ಲಿಯೂ ಕೂಡ ನಟಿ ಅಧಿತಿ ಪ್ರಭುದೇವ ಅವರು ಚಿತ್ರ ಪ್ರದರ್ಶಕರು ಮತ್ತು ಚಿತ್ರಮಂದಿರದ ಮಾಲಿಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ನಟಿ ಅಧಿತಿ ಪ್ರಭುದೇವ ಅವರು ಯಾರಿಗೂ ತಿಳಿಸದೆ ಗುಟ್ಟಾಗಿ ಎಂಗೇಜ್ ಮಾಡಿಕೊಂಡು ತಮ್ಮ ಬಾಳ ಸಂಗಾತಿಯಾಗಲಿರುವ ತಮ್ಮ ಹುಡುಗ ಯಶಸ್ ಅವರ ಜೊತೆ ಇರುವ ಫೋಟೋವೊಂದನ್ನ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿಕೊಂಡು ಕನಸು ನನಸಾಯಿತು ಎಂದು ಬರೆದುಕೊಂಡಿದ್ದಾರೆ.

ಅಧಿತಿ ಶೇರ್ ಮಾಡಿಕೊಂಡಿರುವ ಈ ಫೋಟೋದಲ್ಲಿ ಅವರ ಉಂಗುರ ಗಮನ ಸೆಳೆಯುತ್ತಿತ್ತು. ಇನ್ನು ನಟಿ ಅಧಿತಿ ಪ್ರಭುದೇವ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿರುವ ಯಶಸ್ ಅವರು ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಎಂದು ತಿಳಿದು ಬಂದಿದ್ದು ಕಾಫಿ ತೋಟದ ಮಾಲೀಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಯಶಸ್ ಮತ್ತು ಅಧಿತಿ ಪ್ರಭುದೇವ ಅವರು ಒಂದಷ್ಟು ವರ್ಷಗಳ ಕಾಲದಿಂದ ಪ್ರೀತಿಸುತ್ತಿದ್ದರು ಇದೀಗ ತಮ್ಮ ಪ್ರೀತಿಗೆ ಅರ್ಥ ನೀಡಲು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಮೂಲಗಳ ಪ್ರಕಾರ ಅಧಿತಿ ಪ್ರಭುದೇವ ಮತ್ತು ಯಶಸ್ ಕಳೆದ ಭಾನುವಾರ ಹೊಳೆ ನರಸೀಪುರದಲ್ಲಿ ತಮ್ಮ ಕುಟುಂಬಸ್ಥರು ಮತ್ತು ಆಪ್ತಿಷ್ಟರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

%d bloggers like this: