ಸದ್ದಿಲ್ಲದೇ ಸರಳವಾಗಿ ವಿವಾಹವಾದ ಚಂದನವನದ ಮುದ್ದು ಚೆಲುವೆ! ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆ ಧಾರಾವಾಹಿಯ ನಟ ನಟಿಯರು ಸೇರಿದಂತೆ ಒಂದಷ್ಟು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅಂತೆಯೇ ಇದೀಗ ಮುದ್ದು ಮುಖದ ಗೊಂಬೆ ನಟಿ ಶುಭಪೂಂಜಾ ಅವರು ಇಂದು ಅಂದರೆ ಜನವರಿ5 ಬುಧವಾರದಂದು ತಮ್ಮ ಊರು ಮಜಲು ಬೆಟ್ಟು ಬೀಡುವಿನಲ್ಲಿ ತಮ್ಮ ಪ್ರಿಯಕರ
ಸುಮಂತ್ ಮಹಾಬಲ ಅವರನ್ನ ಮದುವೆ ಆಗಿದ್ದಾರೆ. ತಮ್ಮ ಊಲಿನಲ್ಲಿ ಅತ್ಯಂತ ಸರಳವಾಗಿ ತಮ್ಮ ಕುಟುಂಬಸ್ಥರು ಮತ್ತು ಆಪ್ತಿಷ್ಟರ ಸಮ್ಮುಖದಲ್ಲಿ ಸುಮಂತ್ ಮಹಾಬಲ ಅವರೊಟ್ಟಿಗೆ ನಟಿ ಶುಭಪೂಂಜಾ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಈ ಶುಭ ಸುದ್ದಿಯನ್ನ ಶುಭಪೂಂಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ಮತ್ತು ಸುಮಂತ್ ಮಹಾಬಲ ಗುರು ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಬರೆದುಕೊಂಡು ತಮ್ಮ ಬಾಳ ಸಂಗಾತಿ ಸುಮಂತ್ ಅವರೊಟ್ಟಿಗೆ ಮದುಮಗಳಾಗಿ ನಿಂತು ಪೋಸ್ ಕೊಟ್ಟಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದಾರೆ. ದಾಂಪತ್ಯ ಜೀವನಕ್ಕೆ ಹೆಜ್ಜೆ ನಟಿ ಶುಭಪೂಂಜಾ ಅವರಿಗೆ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ನಟಿ ಶುಭಪೂಂಜಾ ಮೊದಲಿನಿಂದಾನೂ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ತೊಡಗಿಸಿಕೊಂಡು ತಮ್ಮ ದೈನಂದಿನ ಬದುಕು ಮತ್ತು ತಮ್ಮ ಹೊಸ ಚಿತ್ರಗಳ ಅಪ್ಡೇಟ್ಸ್ ಗಳನ್ನು ನೀಡುತ್ತಿದ್ದರು.



ಅದರಂತೆ ತಮ್ಮ ಮದುವೆಯ ಬಗ್ಗೆಯೂ ಕೂಡ ಮಾಹಿತಿ ನೀಡಿದ್ದರು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶುಭಪೂಂಜಾ ತಮ್ಮ ನಟನಾ ಪ್ರತಿಭೆಯಿಂದ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ದಶಕಗಳಿಂದ ಸಿನಿ ಪ್ರಿಯರನ್ನ ರಂಜಿಸುತ್ತಾ ಬಂದಿರುವ ನಟಿ ಶುಭ ಪೂಂಜಾ ಪ್ರಸಿದ್ದ ರಿಯಾಲಿಟಿ ಶೋ ನಲ್ಲಿ ಕೂಡ ಪಾಲ್ಗೊಂಡಿದ್ದರು. ಬಿಗ್ ಬಾಸ್ 8ರ ಸ್ಪರ್ಧಿಯಾಗಿ ಭಾಗವಹಿಸಿದ ಶುಭಪೂಂಜಾ ದೊಡ್ಮನೆಯಲ್ಲಿ ಇರುವಷ್ಟು ದಿನ ಸದಾ ಖುಷಿಯಿಂದ ಎಲ್ಲರೊಂದಿಗೂ ಬೆರೆತು ಸ್ಪರ್ಧಿಗಳೊಟ್ಟಿಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದರು. ಇದೀಗ ನಟಿ ಶುಭಪೂಂಜಾ ಅವರು ತಮ್ಮ ಪ್ರಿಯಕರ ಸುಮಂತ್ ಮಹಾಬಲ ಅವರೊಟ್ಟಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇರಿಸಿ ಸಿದ್ದವಾಗಿದ್ದಾರೆ.