ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ಶುಭಾ ಪೂಂಜಾ

ಚಂದನವನದ ಮೊಗ್ಗಿನ ಮನಸ್ಸಿನ ಮುದ್ದು ಚೆಲುವೆ ತಮ್ಮ ಮದುವೆಯ ಮುನ್ಸೂಚನೆ ನೀಡಿದ್ದಾರೆ. ಹೌದು ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆ ಧಾರಾವಾಹಿಯ ನಟ ನಟಿಯರು ಸೇರಿದಂತೆ ಒಂದಷ್ಟು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅಂತೆಯೇ ಇದೀಗ ಮುದ್ದು ಮುಖದ ಗೊಂಬೆ ನಟಿ ಶುಭಪೂಂಜಾ ಅವರ ಸರದಿ ಇದೀಗ ಬಂದಿದೆ ಎನ್ನಬಹುದು. ಈ ಕುರಿತು ಅವರೇ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ನಟಿ ಶುಭಾಪೂಂಜ ತಮ್ಮ ದೈನಂದಿನ ಬದುಕು ಮತ್ತು ತಮ್ಮ ಹೊಸ ಚಿತ್ರಗಳ ಅಪ್ಡೇಟ್ಸ್ ಗಳನ್ನು ನೀಡುತ್ತಿರುತ್ತಾರೆ.

ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶುಭಪೂಂಜಾ ತಮ್ಮ ನಟನಾ ಪ್ರತಿಭೆಯಿಂದ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ದಶಕಗಳಿಂದ ಸಿನಿ ಪ್ರಿಯರನ್ನ ರಂಜಿಸುತ್ತಾ ಬಂದಿರುವ ನಟಿ ಶುಭ ಪೂಂಜಾ ಪ್ರಸಿದ್ದ ರಿಯಾಲಿಟಿ ಶೋನಲ್ಲಿ ಕೂಡ ಪಾಲ್ಗೊಂಡಿದ್ದರು. ಬಿಗ್ ಬಾಸ್ 8ರ ಸ್ಪರ್ಧಿಯಾಗಿ ಭಾಗವಹಿಸಿದ ಶುಭಪೂಂಜಾ ದೊಡ್ಮನೆಯಲ್ಲಿ ಇರುವಷ್ಟು ದಿನ ಸದಾ ಖುಷಿಯಿಂದ ಎಲ್ಲರೊಂದಿಗೂ ಬೆರೆತು ಸ್ಪರ್ಧಿಗಳೊಟ್ಟಿಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದರು. ಇದೀಗ ನಟಿ ಶುಭಪೂಂಜಾ ಅವರು ತಮ್ಮ ಪ್ರಿಯಕರ ಸುಮಂತ್ ಬಿಲ್ಲವ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ.

ದೊಡ್ಮನೆಯಿಂದ ಹೊರ ಬಂದ ಬಳಿಕ ತಮ್ಮ ಭಾವಿ ಪತಿ ಸುಮಂತ್ ಬಿಲ್ಲವ ಅವರ ನೇಟೀವ್ ನಲ್ಲಿ ಒಂದಷ್ಟು ದಿನಗಳ ಕಾಲ ಅಲ್ಲೇಯೇ ಉಳಿದುಕೊಂದ್ದರು. ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆಇಬ್ಬರು ಕೂಡ ಜೊತೆಯಾಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಂದಿದ್ದರು.
ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ನಟಿ ಶುಭಪೂಂಜಾ ತಮ್ಮ ಮದುವೆಯ ಬಗ್ಗೆ ಅಧಿಕೃತವಾದ ಮಾಹಿತಿಯೊಂದನ್ನು ನೀಡಿದ್ದಾರೆ. ತಮ್ಮ ಪ್ರಿಯಕರ ಸುಮಂತ್ ಅವರು ಮತ್ತು ಅವರ ಕುಟುಂಬ ಉಡುಪಿಯಲ್ಲಿ ವಾಸವಾಗಿರುವುದರಿಂದ ನಾನು ಮತ್ತು ಸುಮಂತ್ ಮಂಗಳೂರಿನಲ್ಲಿಯೇ ಮದುವೆ ಆಗಬೇಕು ಎಂಬ ಯೋಜನೆಯನ್ನ ಹಾಕಿಕೊಂಡಿದ್ದೇವೆ.

ಆದರೆ ರಿಸೆಪ್ಷನ್ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ. ಇನ್ನು ತಮ್ಮ ಭಾವಿ ಪತಿ ಸುಮಂತ್ ಬಿಲ್ಲವರ ಬಗ್ಗೆ ಶುಭಪೂಂಜಾ ಹಂಚಿಕೊಳ್ಳುವುದು ಹೀಗೆ ಸುಮಂತ್ ಅವರು ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ನನಗೆ ನನ್ನ ವೃತ್ತಿ ಮತ್ತು ನನ್ನ ಪತಿಯ ವೃತ್ತಿ ಬೇರೆ ಆಗಿರಬೇಕು. ಅವರು ನನ್ನ ವೃತ್ತಿಯನ್ನ ಅರ್ಥ ಮಾಡಿಕೊಂಡು ನನ್ನೊಂದಿಗೆ ಇದ್ದು ಪ್ರೀತಿಸುವವರು ನನಗೆ ಬೇಕಿತ್ತು. ಅಂತಹ ವ್ಯಕ್ತಿತ್ವ ಗುಣ ಸುಮಂತ್ ಅವರಲ್ಲಿತ್ತು. ಹಾಗಾಗಿ ನಾವಿಬ್ಬರು ಪ್ರೀತಿಸಲು ಇದೂ ಕೂಡ ಕಾರಣವಾಯಿತು ಎಂದು ತಿಳಿಸುತ್ತಾರೆ.

%d bloggers like this: