ಮಹಿಂದ್ರಾ ಕಂಪನಿಯ ವಿನೂತನ ಥಾರ್ ಎಸ್ಯುವಿ ಖರೀದಿಗೆ ಮುಗಿಬಿದ್ದ ಕಾರು ಪ್ರಿಯರು! ಹೌದು ಮಹಿಂದ್ರಾ ಕಂಪನಿಯು ಇದೇ ಅಕ್ಟೋಬರ್ ಮೊದಲ ವಾರದಲ್ಲಿ ವಿಶೇಷ ಲಕ್ಷಣಗಳನ್ನೊಳಗೊಂಡ ಹೊಸ ಮಾದರಿಯ ಕಾರನ್ನು ಪರಿಚಯಿಸಿ ಬಿಡುಗಡೆ ಮಾಡಿತ್ತು. ಮಹಿಂದ್ರಾ ಕಂಪನಿಯ ಈ ಥಾರ್ ಕಾರನ್ನು ಬಿಡುಗಡೆಗೊಂಡ ದಿನದಿಂದ ಈವರೆಗೂ 25000ಕ್ಕೂ ಹೆಚ್ಚು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಕ್ರಾಶ್ ಟೆಸ್ಟಿಂಗ್ ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡು ಕಾರು ಪ್ರಿಯರ ಅಚ್ಚು ಮೆಚ್ಚಿನ ಕಾರಾಗಿದೆ ಈ ಥಾರ್ ಕಾರು. ಎಲ್ಲಾ ಸುರಕ್ಷತೆಯ ಜೊತೆಗೆ ಇತರೆ ಕಾರಿಗಳಿಗಿಂತ ಭಿನ್ನವಾದ ಫೀಚರ್ ಗಳನ್ನು ಈ ಥಾರ್ ಕಾರು ಒಳಗೊಂಡಿದೆ. ಅದರಲ್ಲೂ ಎರಡು ಇಂಜೀನ್ ಆಯ್ಕೆಗಳನ್ನು ಮತ್ತು 4/4 ಡ್ರೈವ್ ವ್ಯವಸ್ಥೆ,ಕ್ರೂಸ್ ನಿಯಂತ್ರಣ, 255/65 18 ಆಲ್ ಟೈರನ್ ಟೈರುಗಳನ್ನು ಹೊಂದಿದ್ದು, ಡ್ಯುಯಲ್ ಏರ್ ಬ್ಯಾಗ್ ವ್ಯವಸ್ಥೆಯಿದೆ. ಇದರ ಜೊತೆಗೆ ಐಸೋಫಿಕ್ಸ್ ಮಕ್ಕಳ ಸೀಟು ಮೌಂಟ್, ಕಾಲಿನಿಂದ ಸ್ಟಾರ್ಟ್ ಮಾಡಬಹುದಾದ ಆಯ್ಕೆ ಈ ಕಾರಿನಲ್ಲಿ ಅಳವಡಿಸಿಲಾಗಿದೆ.

ಆಸಿಸ್ ರೋಲ್ ಓವರ್ ಮಿಟಗೇಷನ್ ತ್ರೀಪಾಯಿಂಟ್ ರಿಯರ್ ಕ್ಯಾಮರಾ ಒಳಗೊಂಡು ಅತ್ಯುಧುನಿಕ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಥಾರ್ ಕಾರು ಆಕರ್ಷಕವಾಗಿ ಜನರನ್ನು ತನ್ನತ್ತ ಸೆಳೆಯುತ್ತಿವೆ. ಮಹಿಂದ್ರಾ ಕಂಪನಿಯು ಥಾರ್ ಕಾರಿನ ಬೇಡಿಕೆಯನ್ನುಗುಣವಾಗಿ ಉತ್ಪಾದನೆಯಲ್ಲಿಯು ಸಹ ಹೆಚ್ಚಿನ ಉತ್ಪಾದನೆ ಮಾಡಲಾಗಿತ್ತು. ಆದರೂ ಸಹ ಉತ್ಪಾದನೆಗಿಂತ ಹೆಚ್ಚಾಗಿ ದ್ವಿಗುಣವಾಗಿ ಅಡ್ವಾನ್ಸ್ ಬುಕ್ಕಿಂಗ್ ಬಂದಿದ್ದರಿಂದ ಕಾಯನ್ನು ವಿತರಕರಿಗೆ ವರ್ಗಾಯಿಸಲು ಕಷ್ಟಸಾಧ್ಯವಾಗಿದೆ. ಈ ಕಾರಿಗಾಗಿ ಕಾಯುವರರ ಸಂಖ್ಯೆ ಹೆಚ್ಚಿದ್ದು ಥಾರ್ ಕಾರಿನ ಸಾಫ್ಟ್ ಟಾಪ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆ ಮಾಡಿದ್ದಾರೆ. ಸಾಫ್ಟ್ ಟಾಪ್ ಹೊಂದಿರುವ ಥಾರ್ ಕಾರನ್ನು ಪಡೆಯಬೇಕಾದರೆ ಬರೋಬ್ಬರಿ ಇಪ್ಪತೈದು ವಾರದಿಂದ ಮೂವತ್ತು ವಾರಗಳ ವರೆಗೂ ಕಾಯಬೇಕಿದೆ. ಈ ಮಹಿಂದ್ರಾ ಕಂಪನಿಯ ಥಾರ್ ಕಾರಿನ ಆರಂಭಿಕ ಬೆಲೆಯು 11.90 ಲಕ್ಷದಿಂದ 12.95 ಲಕ್ಷದವರಿಗೂ ವಿವಿಧ ಫೀಚರ್ ಒಳಗೊಂಡಿರುವ ಕಾರುಗಳಾಗಿವೆ.