ಸೇಫ್ಟಿ ರೇಟಿಂಗ್ ಅಲ್ಲಿ ಗರಿಷ್ಠ ಅಂಕ ಗಳಿಸಿ ಪ್ರಶಂಸೆ ಪಡೆದುಕೊಂಡ ಬಲಿಷ್ಠ ಫೋಕ್ಸ್ ವ್ಯಾಗನ್ ಕಾರು

ಜರ್ಮನ್ ಮೂಲದ ಈ ಪ್ರಸಿದ್ದ ಕಾರು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅತ್ಯುತ್ತಮ ರೇಟಿಂಗ್ ಪಡೆದುಕೊಂಡು ಇದೀಗ ಆಟೋ ಮೊಬೈಲ್ ಕ್ಷೇತ್ರದಲ್ಲಿ ಈ ಕಾರು ಸಖತ್ ಟ್ರೆಂಡ್ ಆಗಿದೆ. ಹೌದು ಕೋವಿಡ್ ಲಾಕ್ ಡೌನ್ ತೆರವಾದ ನಂತರ ಬಹುಬೇಗ ಚೇತರಿಸಿಕೊಂಡು ಉತ್ತಮ ವ್ಯಾಪಾರ ವಹಿವಾಟು ಆರಂಭಿಸಿದ ಕ್ಷೇತ್ರ ಅಂದರೆ ಅದು ಆಟೋಮೊಬೈಲ್ ಕ್ಷೇತ್ರ. ಅಷ್ಟರ ಮಟ್ಟಿಗೆ ಭಾರತದಲ್ಲಿ ಅಪಾರ ಸಂಖ್ಯೆಯ ಕಾರು ಪ್ರಿಯರು ಇದ್ದಾರೆ. ಯಾವುದೇ ಸಂತೋಷ ಸಂಭ್ರಮ ಅಥವಾ ಇನ್ಯಾವುದೋ ಶುಭ ಕಾರ್ಯಗಳಿಗೆ ಉಡುಗೊರೆ ಯಾಗಿ ಕಾರ್ ಗಳನ್ನು ಗಿಪ್ಟ್ ಆಗಿ ನೀಡುವ ಪರಂಪರೆ ಶ್ರೀಮಂತ ವರ್ಗದ ಜನರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಇನ್ನೊಂದೆಡೆ ಬಹುತೇಕ ಜನರಿಗೆ ಕಾರ್ ಕ್ರೇಜ಼್ ಎಂಬುದು ಇದ್ದೇ ಇರುತ್ತದೆ. ಸದ್ಯಕ್ಕೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅನೇಕ ಪ್ರತಿಷ್ಟಿತ ಕಾರು ಸಂಸ್ಥೆಗಳು ಹೊಸ ಹೊಸ ಬಗೆಯ ಅಡ್ವಾನ್ಸ್ ಫೀಚರ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಲೇ ಇವೆ. ಈಗಾಗಲೇ ಕಾರು ಮಾರುಕಟ್ಟೆಯಲ್ಲಿ ಅನೇಕ ಅತ್ಯಾಕರ್ಷಕ, ಜನಪ್ರಿಯ ಕಾರುಗಳಿವೆ. ಆದರೆ ಈ ಕಾರುಗಳಲ್ಲಿ ಸುರಕ್ಷತೆಯ ಪ್ರಮಾಣ ಎಷ್ಟಿದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಆದರೆ ಇಂದು ಜನಪ್ರಿಯವಾಗಿರುವ ಅನೇಕ ಕಾರುಗಳು ಸುರಕ್ಷಿತ ಪರೀಕ್ಷೆಯಲ್ಲಿ ಫೇಲ್ ಆಗಿವೆ. ಆದರೂ ಕೂಡ ಈ ಕಾರುಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಮಾರುತಿ ಸುಜುಕಿ ಬಲೆನೋ ಕಾರು. ಈ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದರು ಕೂಡ ಯುರೋ ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಫೇಲ್ ಆಗಿದೆ.

ಹಾಗಂತ ಮಾರುತಿ ಸುಜುಕಿ ಕಂಪನಿಯ ಕಾರುಗಳು ಪ್ರಯಾಣ ಮಾಡಲು ಸುರಕ್ಷಿತವಲ್ಲ ಎಂದು ಅರ್ಥ ಅಲ್ಲ. ಇನ್ನು ಇದೀಗ ಆಟೋ ಮೊಬೈಲ್ ಕ್ಷೇತ್ರದಲ್ಲಿ ಭಾರಿ ಸುದ್ದಿಯಲ್ಲಿರುವ ಕಾರು ಅಂದರೆ ಅದು ಫೋಕ್ಸ್ ವ್ಯಾಗನ್ ಕಾರು. ಹೌದು ಜರ್ಮನ್ ಮೂಲದ ಈ ಫೋಕ್ಸ್ ವ್ಯಾಗನ್ ಸಂಸ್ಥೆಯು ಕಾರು ತನ್ನ ಪೋಲ್ ಫೇಸ್ ಲಿಫ್ಟ್ ಕಾರನ್ನು ಯುರೋ ಎನ್.ಸಿ.ಎ.ಪಿ ಕ್ರ್ಯಾಸ್ ಟೆಸ್ಟಿಂಗ್ ಗೆ ಒಳಪಡಿಸಿತ್ತು. ಈ ಟೆಸ್ಟಿಂಗ್ ಪ್ರಯಾಣ ಸುರಕ್ಷತೆ ಎಷ್ಟು ಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ತಿಳಿಸುತ್ತದೆ. ಅದರಂತೆ ಈ ಫೋಕ್ಸ್ ವ್ಯಾಗನ್ ಕಂಪನಿಯ ಪೋಲ್ ಫೇಸ್ ಲಿಫ್ಟ್ ಕಾರು ಈ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಟ ಅಂಕ ಪಡೆದಿದೆ. ಅಂದರೆ ಈ ಕಾರಿನಲ್ಲಿ ವಯಸ್ಕ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂಬುದಕ್ಕೆ 38 ಅಂಕಗಳಿಗೆ 35.9 ಅಂಕಗಳನ್ನ ನೀಡಲಾಗಿದೆ.

ಅಂದರೆ ಶೇಕಡಾ 100 ಅಂಕಗಳಿಗೆ 94.5 ಅಂಕದಷ್ಟು ಸುರಕ್ಷಿತ ಪ್ರಯಾಣ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಈ ಫೋಕ್ಸ್ ವ್ಯಾಗನ್ ಪೊಲೊ ಫೇಸ್ ಲಿಫ್ಟ್ ಕಾರು ಕಾರ್ಯ ಕ್ಷಮತೆಯ ಪೈಕಿ 24 ಗರಿಷ್ಟ ಅಂಕಗಳಲ್ಲಿ 19.5 ಅಂಕಗಳನ್ನು ಪಡೆದುಕೊಂಡಿದೆ. ಅಸಮಾಧಾನ ಆಗುವಂತಹ ವಿಷಯ ಅಂದರೆ ಹೊಸದಾಗಿ ಪರಿಚಯ ಆಗಿರುವ ಈ ಅತ್ಯಂತ ಸುರಕ್ಷಿತ 2022ರ ಫೋಕ್ಸ್ ವ್ಯಾಗನ್ ಪೊಲೊ ಫೇಸ್ ಲಿಫ್ಟ್ ಕಾರು ಭಾರತದಲ್ಲಿ ಲಭ್ಯವಾಗುತ್ತಿಲ್ಲ. ಸದ್ಯಕ್ಕೆ ಜರ್ಮನ್ ದೇಶದಲ್ಲಿ ಮಾತ್ರ ಈ ಕಾರು ಲಭ್ಯವಾಗುತ್ತಿದೆ. ಹ್ಯಾಚ್ ಬ್ಯಾಕ್ 4ಮೀಟರಿಗಳಿಗಿಂತ ಉದ್ದವಾದ ಕಾರಣ ಈ ಕಾರು ಭಾರತದಲ್ಲಿ ಲಭ್ಯವಾಗುತ್ತಿಲ್ಲ. ಈ ಹ್ಯಾಚ್ ಬ್ಯಾಕ್ ಫೋಕ್ಸ್ ವ್ಯಾಗನ್ ಕಾರು ಭಾರತೀಯ ಮಾರುಕಟ್ಟೆಯ 2010 ರಲ್ಲಿ ಪ್ರವೇಶ ಪಡೆದುಕೊಂಡಿತು.

%d bloggers like this: