ಸ್ಯಾಂಡಲ್ವುಡ್ ನ ಪ್ರಿನ್ಸೆಸ್ ರಾಧಿಕಾ ಪಂಡಿತ್ ಇತ್ತೀಚೆಗೆ ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಮನೆಯವರೊಂದಿಗೆ ರಾಧಿಕಾ ಅವರು ಆಚರಿಸಿಕೊಂಡಿದ್ದಾರೆ. ಪ್ರತಿಬಾರಿಯೂ ಸಿನಿಮಾ ಸ್ಟಾರ್ ಗಳ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಎಲ್ಲ ಕಡೆಯಿಂದ, ಬೇರೆ ಬೇರೆ ಊರುಗಳಿಂದ ಅವರ ಮನೆಯ ಹತ್ತಿರ ಬರುತ್ತಾರೆ. ತಮ್ಮ ನೆಚ್ಚಿನ ಸ್ಟಾರ್ ಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಕೇಕ್ ಕಟ್ ಮಾಡಿಸಿ, ಹೂವಿನ ಹಾರಗಳಿಂದ ಅವರಿಗೆ ಶುಭ ಹಾರೈಸಿ, ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ನಮ್ಮ ಕನ್ನಡದ ಸಿನಿ ಇಂಡಸ್ಟ್ರಿ ಯಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ನಟಿಯೆಂದರೆ ರಾಧಿಕಾ ಪಂಡಿತ್.

ಇವರ ಹುಟ್ಟು ಹಬ್ಬಕ್ಕೆ ಅನೇಕ ಅಭಿಮಾನಿಗಳು ಬೇರೆ ಕಡೆಗಳಿಂದ ಬರುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ರಾಧಿಕಾ ಅವರು, ಯಾರು ನಮ್ಮ ಮನೆ ಹತ್ತಿರ ಬರಬೇಡಿ. ಕೋವಿಡ್ ಮಹಾಮಾರಿಯಿಂದ ನೀವೆಲ್ಲರೂ ಸುರಕ್ಷಿತವಾಗಿ ನಿಮ್ಮ ಮನೆಯಿಂದಲೇ ನನಗೆ ವಿಶ್ ಮಾಡಿ. ಅದೇ ನನಗೆ ಖುಷಿ ಕೊಡುತ್ತದೆ. ಎಲ್ಲರೂ ಸುರಕ್ಷಿತವಾಗಿರುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಬರೆದುಕೊಂಡಿದ್ದರು. ಆದರೆ ಈ ಬಾರಿ ಅಪ್ಪು ಅವರ ಅಕಾಲಿಕ ನಿಧನದ ಕಾರಣಕ್ಕಾಗಿ ಯಾವ ಸೆಲೆಬ್ರಿಟಿಗಳು ಕೂಡ ಅದ್ದೂರಿಯಾಗಿ ತಮ್ಮ ಅಭಿಮಾನಿಗಳೊಂದಿಗೆ ಬರ್ತಡೆ ಆಚರಿಸಿಕೊಳ್ಳುತ್ತಿಲ್ಲ. ಅದೇ ರೀತಿ ರಾಧಿಕಾ ಪಂಡಿತ್ ಅವರು ಕೂಡ ಈ ಬಾರಿ ಕೇವಲ ಮನೆಯಲ್ಲಿಯೇ ಸಿಂಪಲ್ ಆಗಿ ಬರ್ತಡೆ ಆಚರಿಸಿಕೊಂಡಿದ್ದಾರೆ.

ಇನ್ನೂ ನಟ ಯಶ್ ಕೂಡ ಜನೇವರಿಯಲ್ಲಿ ಸಿಂಪಲ್ಲಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಜೋಡಿ. ಇವರಿಬ್ಬರ ಜರ್ನಿ ತುಂಬಾ ವಿಶೇಷವಾಗಿದೆ. ಏಕೆಂದರೆ ಇಬ್ಬರು ಅಪರಿಚಿತರಾಗಿ ಒಂದೇ ಸೀರಿಯಲ್ ನಲ್ಲಿ ಅಭಿನಯಿಸುವುದರ ಮೂಲಕ ಭೇಟಿಯಾದರು. ನಂತರ ಇಬ್ಬರು ಬೆಳ್ಳಿ ಪರದೆಗೆ ಕಾಲಿಟ್ಟಿದ್ದು ಕೂಡ ಒಂದೇ ಸಿನಿಮಾದ ಮೂಲಕ. ಹಲವು ಸಿನಿಮಾಗಳಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದ ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದರು. ಕೇವಲ ಪರದೆಯ ಹಿಂದಷ್ಟೇ ಅಲ್ಲದೆ ನಿಜ ಜೀವನದಲ್ಲೂ ಇವರಿಬ್ಬರ ಜೋಡಿ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದರು.

ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದ ನಂತರವಂತೂ ಈ ಜೋಡಿಗಳು ಮದುವೆಯಾಗುತ್ತಾರೆ ಎಂಬ ಸುದ್ದಿ ಸಕ್ಕತ್ ವೈರಲ್ ಆಗಿತ್ತು. ಆದರೆ ಎಲ್ಲಿಯೂ ಅಧಿಕೃತವಾಗಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳದ ಈ ಜೋಡಿ ಒಮ್ಮೆಲೆ ಎಂಗೇಜ್ಮೆಂಟ್ ಆಗುತ್ತಿರುವ ಸುದ್ದಿಯನ್ನು ತಿಳಿಸಿ ಎಲ್ಲರಿಗೂ ಶಾಕ್ ನೀಡಿದರು. ರಾಧಿಕಾ ಪಂಡಿತ್ ಮದುವೆ ಹಾಗೂ ಮಕ್ಕಳ ನಂತರ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ರಾಧಿಕಾ ಅವರು, ತಮ್ಮ ಹಾಗೂ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

ರಾಧಿಕಾ ಅಷ್ಟು ದೊಡ್ಡ ನಟಿಯಾದರೂ, ನ್ಯಾಷನಲ್ ಹೀರೋ ಯಶ್ ಅವರ ಹೆಂಡತಿಯಾದರೂ, ಯಾವಾಗಲೂ ಸಿಂಪಲ್ ಅಂಡ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಶ್ ಅವರಿಗೆ ಸಿಂಪಲ್ ಆಗಿ ಇರುವುದೇ ಇಷ್ಟ ಎಂದು ಒಂದು ಸಂದರ್ಶನದಲ್ಲಿ ರಾಧಿಕಾ ಹೇಳಿಕೊಂಡಿದ್ದರು. ಈ ಬಾರಿಯೂ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಈ ಜೋಡಿಗಳ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ನಟ ಯಶ್, ನಟಿ ರಾಧಿಕಾ ಪಂಡಿತ್ ಮತ್ತು ಇಬ್ಬರು ಮಕ್ಕಳೊಂದಿಗೆ ಸೇರಿ ಬರ್ತಡೇ ಆಚರಿಸಿಕೊಂಡ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.