ಸಲ್ಮಾನ್ ಖಾನ್ ಹುಟ್ಟುಹಬಕ್ಕೆ ಕತ್ರಿನಾ ಕೈಫ್ ಕೊಟ್ರು ವಿಶೇಷ ಉಡುಗೊರೆ

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರು ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಲ್ಲು ಅವರ ಹುಟ್ಟು ಹಬ್ಬಕ್ಕೆ ಬಾಲಿವುಡ್ ನ ಅನೇಕ ಸ್ಟಾರ್ ನಟ-ನಟಿಯರು ಉಡುಗೊರೆ ನೀಡಿ ಶುಭಾಶಯ ತಿಳಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ನೀಡಿದ ಉಡುಗೊರೆ ಇದೀಗ ಬಿ-ಟೌನ್ ನಲ್ಲಿ ಭಾರಿ ಸುದ್ದಿಯಾಗಿದೆ. ಹೌದು ಇತ್ತೀಚೆಗಷ್ಟೇ ಬಾಲಿವುಡ್ ಜನಪ್ರಿಯ ನಟ ಸಲ್ಮಾನ್ ಖಾನ್ ಅವರು ತಮ್ಮ 56ನೇ ಜನ್ಮದಿನಾಚರಣೆಯನ್ನು ತಮ್ಮ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಆಪ್ತ ಗೆಳೆಯರು ಜೊತೆಗೂಡಿ ಸಲ್ಮಾನ್ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡರು.

ಸಲ್ಮಾನ್ ಖಾನ್ ಅವರಿಗೆ ಚಿತ್ರರಂಗದಲ್ಲಿ ತುಂಬಾನೇ ಸ್ನೇಹಿತರಿದ್ದಾರೆ. ಸ್ಟಿಲ್ ಬ್ಯಾಚ್ಯೂಲರ್ ಆಗಿರುವ ಅವರಿಗೆ ಬಾಲಿವುಡ್ ನಲ್ಲಿ ಅಪಾರ ಸ್ನೇಹ ಬಳಗ. ಹಾಗಾಗಿ ಅವರ ಬರ್ಡೇಗೆ ಬಾಲಿವುಡ್ ಸ್ಟಾರ್ಸ್ ದಂಡೇ ನೆರೆದಿರುತ್ತದೆ. ಅವರ ಜನ್ಮದಿನಕ್ಕೆ ಸಿನಿಮಾರಂಗದ ಗಣ್ಯರು ಸೇರಿ ಇದ್ದಂತೆ ಅವರ ಸಹೋದ್ಯೋಗಿ ನಟ-ನಟಿಯರು ಕೂಡ ಬರ್ತಡೇ ಪಾರ್ಟಿಗೆ ಆಗಮಿಸಿ ಗಿಫ್ಟ್ ನೀಡಿ ಶುಭ ಕೋರಿದ್ದಾರೆ. ಅದರಂತೆ ನಟ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಬಾಲಿವುಡ್ ಕ್ಯಾಥ್ ಖ್ಯಾತಿಯ ನಟಿ ಕತ್ರಿನಾ ಕೈಫ್ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ನಟಿ ಕತ್ರಿನಾ ಕೈಫ್ ಮತ್ತು ಮತ್ತು ಸಲ್ಮಾನ್ ಖಾನ್ ಬಾಲಿವುಡ್ ನ ಕ್ಯೂಟೆಸ್ಟ್ ಜೋಡಿಯಾಗಿದ್ದವು.

ಈ ಜೋಡಿ ನಿಜ ಜೀವನದಲ್ಲಿಯೂ ಕೂಡ ಪ್ರೀತಿ ಪ್ರೇಮದಲ್ಲಿ ಇದ್ದರು ಎಂದು ಕೂಡ ಹೇಳಲಾಗುತ್ತಿತ್ತು. ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಜೋಡಿ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇನ್ನು ಇತ್ತೀಚೆಗೆ ಕತ್ರಿನಾ ಕೈಫ್ ಅವರು ನಟ ವಿಕ್ಕಿ ಕೌಶಲ್ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟ ಕತ್ರಿನಾ ಕೈಫ್ ಅವರಿಗೆ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿಗೆ ಬರೋಬ್ಬರಿ ಮೂರು ಕೋಟಿ ಮೌಲ್ಯದ ರೇಂಜ್ ರೋವರ್ ಕಾರ್ ಅನ್ನು ಗಿಫ್ಟ್ ಆಗಿ ನೀಡಿದರು ಎಂಬ ಸುದ್ದಿ ಕೇಳಿ ಬಂದಿತ್ತು.

ಆದರೆ ಕತ್ರಿನಾ ಕೈಫ್ ಮದುವೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನ ಮಾಡಿರಲಿಲ್ಲ ಎಂಬುದು ಇತ್ತೀಚೆಗೆ ತಿಳಿದು ಬಂದ ಸುದ್ದಿಯಾಗಿದೆ. ಇದೀಗ ಬಿ-ಟೌನ್ ನಲ್ಲಿ ಮತ್ತೊಂದು ಸುದ್ದಿಯಾಗಿರುವುದು ಅಂದರೆ ನಟಿ ಕತ್ರಿನಾ ಕೈಫ್ ಅವರು ತಮ್ಮ ಮಾಜಿ ಗೆಳೆಯ ಸಲ್ಮಾನ್ ಖಾನ್ ಅವರಿಗೆ ಬರ್ಡೇ ಗಿಫ್ಟ್ ಆಗಿ ಬರೋಬ್ಬರಿ ಮೂರು ಲಕ್ಷ ಬೆಲೆಯ ಬ್ರಾಸ್ಲೈಟ್ ಒಂದನ್ನ ನೀಡಿದ್ದಾರೆ ಎಂಬುದು. ಬರ್ಡೇ ಗಿಫ್ಟ್ ಸ್ವೀಕರಿಸಿರುವ ನಟ ಸಲ್ಮಾನ್ ಖಾನ್ ಅವರು ಕೂಡ ಪ್ರತಿಯಾಗಿ ಕತ್ರಿನಾ ಕೈಫ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರಂತೆ.

%d bloggers like this: