ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಕೆಜಿಎಫ್ ಚಾಪ್ಟರ್2 ಚಿತ್ರದ ನಕಲಿ ದಿನಾಂಕಗಳು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಇಲ್ಲ

ಇಡೀ ವಿಶ್ವ ಚಿತ್ರರಂಗವೇ ಭಾರಿ ಕಾತುರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್2 ಸಿನಿಮಾ ಇದೇ ಏಪ್ರಿಲ್ 14ರಂದು ವರ್ಲ್ಡ್ ವೈಸ್ ಅದ್ದೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಉಂಟುಮಾಡಿದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗವಾಗಿ ಕೆಜಿಎಫ್ ಚಾಪ್ಟರ್2 ಸಿನಿಮಾ ಸಿದ್ಧವಾಗಿದೆ. ಈಗಾಗಲೇ ಕಳೆದ ಕೆಜಿಎಫ್2 ಚಿತ್ರದ ಮೇಕಿಂಗ್ ಮತ್ತು ಅದರ ಟೀಸರ್ ನಿಂದಾನೇ ವಿಶ್ವ ದಾಖಲೆ ಮಾಡಿರುವ ಈ ಸಿನಿಮಾ ಯಾವ ಹಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲವೆಂಬಂತೆ ಕಾಣುತ್ತಿದೆ. ಅಷ್ಟು ಅದ್ದೂರಿ ವೆಚ್ಚದಲ್ಲಿ ವೈಭವವಾಗಿ ಹೊಂಬಾಳೆ ಫಿಲ್ಮ್ಸ್ ಬ್ಯಾನರಡಿಯಲ್ಲಿ ನಿರ್ಮಾಪಕರಾದ ವಿಜಯ್ ಕಿರಂಗದೂರ್ ನಿರ್ಮಾಣ ಮಾಡಿದ್ದಾರೆ. ಈ ಕೆ.ಜಿ.ಎಫ್ ಚಾಪ್ಟರ್2 ಸಿನಿಮಾ ಮೊದಲ ಭಾಗಕ್ಕಿಂತ ಎರಡನೇ ಭಾಗ ಭಾರಿ ಕುತೂಹಲ ಹುಟ್ಟಿಸುವುದರ ಜೊತೆಗೆ ಭಾರಿ ಹೈಪ್ ಪಡೆದುಕೊಂಡಿದೆ.

ಅಂದರೆ ಅದಕ್ಕೆ ಪ್ರಮುಖ ಕಾರಣ ಈ ಕೆಜಿಎಫ್ ಚಾಪ್ಟರ್2 ಸಿನಿಮಾದಲ್ಲಿರುವ ಬಹುದೊಡ್ಡ ತಾರಾಗಣ. ಹೌದು ಕೆಜಿಎಫ್ ಚಾಪ್ಟರ್2 ಸಿನಿಮಾದಲ್ಲಿ ಕೇವಲ ಕನ್ನಡ ನಟರು ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್, ರವೀನಾ ಟಂಡನ್, ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ದ ನಟರಾದ ಪ್ರಕಾಶ್ ರೈ, ಶ್ರೀಕಾಂತ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಅಂತಹ ಪರಭಾಷಾ ನಟರು ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಕೆಜಿಎಫ್2 ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಕೆಜಿಎಫ್ ಚಾಪ್ಟರ್2 ಸಿನಿಮಾ ತಂಡ ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ವೊಂದನ್ನು ನೀಡುತ್ತಿದೆ. ಅದೇನಪ್ಪಾ ಅಂದರೆ ಕೆಜಿಎಫ್ ಚಾಪ್ಟರ್2 ಸಿನಿಮಾದ ಟ್ರೇಲರ್ ಇದೇ ಮಾರ್ಚ್ 8ರಂದು ಸಂಜೆ 6.18ಕ್ಕೆ ರಿಲೀಸ್ ಆಗಲಿದೆ ಎಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ.

ಇದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರವಾಗಿದೆ. ಆದರೆ ಈ ಟ್ರೇಲರ್ ರಿಲೀಸ್ ಆಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಆಗಿರುವ ಈ ಕೆಜಿಎಫ್ ಚಾಪ್ಟರ್2 ಸಿನಿಮಾದ ಪೋಸ್ಟರ್ ಫೇಕ್ ಎಂಬುದಾಗಿ ತಿಳಿದು ಬಂದಿದೆ. ಇದರ ಸಂಬಂಧವಾಗಿ ಹೊಂಬಾಳೆ ಫಿಲಂಸ್ ಯಾವುದೇ ರೀತಿಯಾಗಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಪೋಸ್ಟ್ ಅನ್ನು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕ್ರಿಯೆಟ್ ಮಾಡಿರುವ ಪೋಸ್ಟರ್ ಎಂದು ತಿಳಿದುಬಂದಿದೆ. ಏನೇ ಆದರು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕೆಜಿಎಫ್ ಚಾಪ್ಟರ್2 ಸಿನಿಮಾದ ಬಿಡುಗಡೆಯ ದಿನಕ್ಕಾಗಿಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹೊಂಬಾಳೆ ಫಿಲಂಸ್ ವಿಜಯ್ ಕಿರಂಗದೂರ್ ಅವರಿಗೆ ಪತ್ರದ ಮೂಲಕ ಕೆಜಿಎಫ್2 ಚಿತ್ರದ ಅಪ್ ಡೇಟ್ ಕೇಳಿದ್ದರು. ಇದರಿಂದ ಇಡೀ ಚಿತ್ರತಂಡ ಕೂಡ ಅಚ್ಚರಿ ವ್ಯಕ್ತಪಡಿಸಿ ಸಂತಸ ಪಟ್ಟಿದ್ದರು.

%d bloggers like this: