ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡ್ತಿದ್ದಾರೆ 60 ವರ್ಷದ ಈ ಕೂಲಿ ಕಾರ್ಮಿಕ

ಸಕ್ಸಸ್ ಎಂಬುದು ಯಾರ ಸ್ವತ್ತು ಅಲ್ಲ. ಅದು ಯಾವಾಗ ಬೇಕಾದರೂ ನಮ್ಮ ಕೈ ಹಿಡಿಯಬಹುದು ಆದರೆ ನಮ್ಮ ಟೈಮ್ ಚೆನ್ನಾಗಿರಬೇಕು ಅಷ್ಟೇ. ಹಣೆಬರಹ ಚೆನ್ನಾಗಿದ್ದರೆ ರಾತ್ರೋರಾತ್ರಿ ಏನು ಬೇಕಾದರೂ ನಡೆಯಬಹುದು ಎಂಬ ಮಾತಿದೆ. ಇವೆಲ್ಲಾ ಬರೀ ಮಾತಿಗಷ್ಟೇ. ನಿಜ ಜೀವನದಲ್ಲಿ ಎಂದಿಗೂ ಯಾರ ಜೀವನವೂ ರಾತ್ರೋರಾತ್ರಿ ಬದಲಾಗುವುದಿಲ್ಲ ಎಂದು ನಂಬುವವರಿಗೆ ಇಲ್ಲೊಬ್ಬರ ಸ್ಟೋರಿ ಶಾಕ್ ನೀಡಿದೆ. ಹೌದು ಕೇರಳದ 60 ವರ್ಷದ ಕೂಲಿ ಕಾರ್ಮಿಕರೊಬ್ಬರು ರಾತ್ರೋರಾತ್ರಿ ಮಾಡೆಲ್ ಆಗಿ ಬದಲಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಮಾಡೆಲ್ ಆಗಬೇಕೆಂಬ ಆಸೆ ಇಂದಿನ ಸಾಕಷ್ಟು ಯುವ ಜನರಲ್ಲಿರುತ್ತದೆ. ಮಾಡೆಲ್ ಆಗಿ ಬಣ್ಣದ ಪ್ರಪಂಚದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಹಲವಾರು ಯುವಕರು ಕಷ್ಟಪಡುತ್ತಿರುತ್ತಾರೆ.

ಆದರೆ ಇಲ್ಲೊಬ್ಬ 60 ವರ್ಷದ ಕೂಲಿಕಾರ್ಮಿಕರಿಗೆ ಬಯಸದೆ ಮಾಡೆಲ್ ಆಗುವ ಭಾಗ್ಯ ಬಂದೊದಗಿದೆ. ಈ ಹಿಂದೆ ಕೇರಳದಲ್ಲಿ ಫೋಟೋಗ್ರಾಫರ್ ಒಬ್ಬರು 60 ವರ್ಷದ ಮಮ್ಮಿಕ್ಕಾ ಎಂಬ ನೌಕರರ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಮತ್ತು ಅವುಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡಿದ್ದರು. ಕೊಳಕಾದ ಲುಂಗಿ ಸುತ್ತಿಕೊಂಡು, ಮಸುಕಾದ ಹಳೆಯ ಶರ್ಟ್ ಒಂದನ್ನು ಹಾಕಿಕೊಂಡು, ತಲೆಗೊಂದು ಟವೆಲ್ ಸುತ್ತಿಕೊಂಡು ಕೈಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಈ ವ್ಯಕ್ತಿಯ ಫೋಟೋವನ್ನು ಫೋಟೋಗ್ರಾಫರ್ ಒಬ್ಬರು ಕ್ಲಿಕ್ಕಿಸಿದ್ದರು.

ಸೋಶಿಯಲ್ ಮೀಡಿಯಾ ಗಳಲ್ಲಿ ಈ ಫೋಟೋವನ್ನು ಅಪ್ಲೋಡ್ ಮಾಡಿದ ನಂತರ ತಲೆಗೆ ಟವೆಲ್ ಕಟ್ಟಿಕೊಂಡು ನಡೆದುಕೊಂಡು ಬರುತ್ತಿದ್ದ ಈ ದಿನಗೂಲಿ ಕಾರ್ಮಿಕನ ಫೋಟೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಒಂದು ಫೋಟೋದಿಂದ ದಿನಗೂಲಿಗಾಗಿ ಕಾರ್ಮಿಕ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಅದೃಷ್ಟವೇ ಖುಲಾಯಿಸಿದೆ. 60 ವರ್ಷದ ನೌಕರರನ್ನು ಸ್ಥಳೀಯ ಸಂಸ್ಥೆಯೊಂದು ಮಾಡೆಲ್ ಆಗಿ ಆಯ್ಕೆ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ಸೂಟು ಬೂಟು ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಟ್ಯಾಬ್ ಹಿಡಿದು ಮಮ್ಮಿಕ್ಕಾ ಅವರು ನೀಡಿರುವ ಫೋಟೋಪೋಸ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿವೆ. ಹಿಂದಿನ ಫೋಟೋದಲ್ಲಿದ್ದ ವ್ಯಕ್ತಿಗೂ, ಮಾಡೆಲ್ ಆಗಿ ಬದಲಾದ ವ್ಯಕ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇವರಿಬ್ಬರೂ ಒಂದೇ ವ್ಯಕ್ತಿ ಎಂದು ನಂಬಲಾರದಷ್ಟು ಬದಲಾವಣೆಗಳಾಗಿವೆ. ಸೋಶಿಯಲ್ ಮೀಡಿಯಾಗಳು ಜೀವನವನ್ನು ಹೇಗಾದರೂ ಬದಲಾಯಿಸಬಹುದು ಎಂಬುದಕ್ಕೆ ಇದು ದೊಡ್ಡ ಸಾಕ್ಷಿ.

%d bloggers like this: