ಸಾಮಾನ್ಯ ಹಳ್ಳಿ ಹುಡುಗನ ಐಡಿಯಾ ಇಂದು ಆತನಿಗೆ 600 ಕೋಟಿಯಷ್ಟು ಆದಾಯ ಕೊಟ್ಟಿದೆ

ಪುಟ್ಟದೊಂದು ಐಡಿಯಾ ಬರೋಬ್ಬರಿ 600 ಕೋಟಿ ಒಡೆಯನನ್ನಾಗಿ ಮಾಡಿದೆ, ಇಂದು ಜನಪ್ರಿಯ ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್ ಅಂತೆಯೇ ಐಫೋನ್ ಗಳಾದ ಆಪಲ್ ದಿಗ್ಗಜ ಸಂಸ್ಥೆಗಳಂತೆ ಇಂದು ಡಿಜಿಟಲ್ ಉದ್ಯಮದಲ್ಲಿ ಭಾರಿ ಜನಪ್ರಿಯ ಗಳಿಸಿರುವುದು ರೆಡ್ ಬಸ್ ಕಂಪನಿ. ಈ ರೆಡ್ ಬಸ್ ಉದ್ಯಮದ ಬಗ್ಗೆ ಈಗಾಗಲೇ ಹಲವಾರು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ಸುದ್ದಿ ಆಗಿದೆ. ಹೌದು ಕೇವಲ ಇಪ್ಪತ್ತೈದು ವರ್ಷದ ಯುವಕ ಫಣೀಂದ್ರ ಸಾಮ ಎಂಬುವರು ಈ ರೆಡ್ ಬಸ್ ಸಂಸ್ಥೆಯ ಸ್ಥಾಪಕ ಆಗಿದ್ದ ಅಂದರೆ ನಿಜಕ್ಕೂ ಆಶ್ಚರ್ಯ ಉಂಟಾಗುತ್ತದೆ. ಫಣೀಂದ್ರಾ ಸಾಮಾ ಅವರು ಜನಿಸಿದ್ದು ಆಂಧ್ರಪ್ರದೇಶ. ಈಗಿನ ತೆಲಂಗಾಣ ರಾಜ್ಯದ ನಿಜಾ಼ಮಾಬಾದ್ ನಲ್ಲಿ. ಫಣಿಂದ್ರ ಸಾಮ ಎಲೆಕ್ಕ್ರಿಕಲ್ ವಿಭಾಗದಲ್ಲಿ ಪದವಿ ಪಡೆದು, ಇಂಡಿಯನ್ ಇನ್ಸ್ಟಿಟ್ಯೂಟ್ ನಲ್ಲಿ ಉನ್ನತ ಶಿಕ್ಷಣ ಪದವಿ ಮಾಡುತ್ತಾರೆ. ತದ ನಂತರ ಟ್ಯಾಕ್ಸಸ್ ಇನ್ಸ್ಟ್ರೂಮೆಂಟ್ ಕಂಪನಿಯಲ್ಲಿ ಸೀನಿಯರ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಹೀಗೆ 2005ರ ವರ್ಷದಲ್ಲಿಎಂದಿನಂತೆ ತಮ್ಮ ಕರ್ತವ್ಯ ಮುಗಿಸಿ ರೂಮಿಗೆ ಬರುತ್ತಾರೆ. ಆಗ ಸ್ನೇಹಿತರು ದೀಪಾವಳಿ ಪ್ರಯುಕ್ತ ತಮ್ಮ ತಮ್ಮ ಊರಿಗೆ ಹೋಗಲು ಸಿದ್ದತೆ ನಡೆಸುತ್ತಿರುತ್ತಾರೆ. ಆದರೆ ಫಣೀಂದ್ರಾ ಅವರಿಗೆ ಊರಿಗೆ ಹೋಗುವ ಮನಸ್ಸು ಇರುವುದಿಲ್ಲ. ಇತ್ತ ಬೆಳಿಗ್ಗೆ ತನ್ನ ಗೆಳೆಯರೆಲ್ಲಾ ಅವರವರ ಊರುಗಳಿಗೆ ತೆರಳುತ್ತಾರೆ. ತದ ನಂತರ ರೂಮಿನಲ್ಲಿ ಒಂಟಿಯಾಗಿ ಚಿಂತೆಯಲ್ಲಿ ಮುಳುಗಿದ ಫಣೀಂದ್ರ ಇದ್ದಕಿದ್ದಂತೆ ಊರಿಗೆ ಹೋಗುವ ನಿರ್ಧಾರ ಮಾಡುತ್ತಾರೆ. ತಕ್ಷಣ ತಾನು ಪ್ರತಿಬಾರಿ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದ ಎಜೆಂಟ್ ಸಂಪರ್ಕ ಮಾಡುತ್ತಾರೆ. ಆದರೆ ಸಮಯ ಮುಗಿದಿದ್ದ ಕಾರಣ ಅವರಿಗೆ ಎಲ್ಲಿಯೂ ಕೂಡ ಬಸ್ ಟಿಕೆಟ್ ದೊರೆಯುವುದಿಲ್ಲ. ಆಗ ನಿರಾಸೆಯಿಂದ ತಮ್ಮ ರೂಮಿಗೆ ಬಂದು ಕೂರುತ್ತಾರೆ. ಹೀಗೆ ಅಸಹಾಯಕನಾಗಿ ಕುಳಿತಿದ್ದ ಅವರಿಗೆ ಒಂದು ಉಪಾಯ ಹೊಳೆಯುತ್ತದೆ.

ಅರೇ, ನಾನ್ಯಾಕೆ ಟಿಕೆಟ್ ಬುಕ್ ಮಾಡುವುದಕ್ಕೇ ಒಂದು ಆನ್ಲೈನ್ ವೇದಿಕೆ ರಚಿಸಬಾರದು ಎಂದು ಆಲೋಚನೆ ಮಾಡಿ, ತಮ್ಮ ಗೆಳೆಯರಿಗೆ ತಿಳಿಸುತ್ತಾರೆ. ಇದಕ್ಕೂ ಮುನ್ನ ಫಣೀಂದ್ರಾ ವೆಬ್ಸೈಟ್ ಕ್ರಿಯೆಟ್ ಮಾಡುವುದಕ್ಕೆ ಒಂದಷ್ಟು ಜನರಿಗೆ ಸಲಹೆ ಕೇಳುತ್ತಾರೆ. ಆದರೆ ಫಣೀಂದ್ರರ ಇಚ್ಚೆಗೆ ತಕ್ಕಂತೆ ಬೆಂಬಲ ಪ್ರೋತ್ಸಾಹ ನೀಡುವುದಿಲ್ಲ. ಆಗ ಇಂಜಿನಿಯರಿಂಗ್ ವಿಧ್ಯಾರ್ಥಿಯೊಬ್ಬ ಟಿಕೆಟ್ ಬುಕ್ಕಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಪರಿಚಯ ಮಾಡಿಕೊಂಡು ಸಿಸ್ಟಮ್ ಅಭಿವೃದ್ದಿಪಡಿಸುವುದರ ಬಗ್ಗೆ ಮಾಹಿತಿ ಪಡೆಯುತ್ತಾನೆ. ಇದಾದ ಬಳಿಕ ತನ್ನ ಸಹಪಾಠಿಗಳ ಬಳಿ ತನ್ನ ಆಲೋಚನೆ ತಿಳಿಸುತ್ತಾರೆ. ಎಲ್ಲರೂ ಈ ಆಲೋಚನೆಗೆ ಸಹ ಮತ ವ್ಯಕ್ತಪಡಿಸುತ್ತಾರೆ. ಸುಮಾರು ಐದು ಲಕ್ಷದಷ್ಟು ಬಂಡವಾಳದ ಮೂಲಕ ರೆಡ್ ಬಸ್.ಇನ್ ಎಂಬ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಜಾಲತಾಣ ಆರಂಭಿಸುತ್ತಾರೆ.

ಆರಂಭದಲ್ಲಿ ಎಲ್ಲಾ ಉದ್ಯಮಗಳಂತೆ ನಿರಾಸೆ, ಅವಮಾನ, ನಷ್ಟ ಅನುಭವಿಸುತ್ತಾರೆ. ಆಗ ಆರಂಭದ ದಿನಗಳಲ್ಲಿ ಐಟಿ ಬಿಟಿ ಕಂಪನಿಗಳಿಗೆ ಭೇಟಿ ನೀಡಿ ಅಲ್ಲಿನ ಉದ್ಯೋಗಿಗಳಿಗೆ ತಮ್ಮ ರೆಡ್ ಬಸ್.ಇನ್ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ ಬಗ್ಗೆ ತಿಳಿಸುತ್ತಾರೆ. ಕುತೂಹಲ ಮತ್ತು ಅನುಭವಕ್ಕಾಗಿ ಅಲ್ಲಿನ ಒಂದಷ್ಟು ಉದ್ಯೋಗಿಗಳು ಟಿಕೆಟ್ ಬುಕ್ ಮಾಡುತ್ತಾರೆ. ಉತ್ತಮ ಸೇವೆ ಪಡೆಯುತ್ತಾರೆ. ಈ ರೆಡ್ ಬಸ್ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಜಾಲತಾಣದ ವಿಚಾರವನ್ನು ತನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ದಿನಗಳು ಕಳೆಯುತ್ತಿದ್ದಂತೆ ರೆಡ್ ಬಸ್.ಇನ್ ಖ್ಯಾತಿ ಇಡೀ ದೇಶಾದ್ಯಂತ ಪ್ರಚಾರ ಪಡೆಯುತ್ತದೆ. ಆಶ್ಚರ್ಯ ಅಂದರೆ ರೆಡ್ ಬಸ್ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸಿದಾಗ ಫಣೀಂದ್ರಾ ಮತ್ತು ಅವರ ತಂಡಕ್ಕೆ ಸಾಫ್ಟ್ ವೇರ್ ಅಭಿವೃದ್ದಿಪಡಿಸಲು ಕೋಡಿಂಗ್ ಜ್ಞಾನ ಕೂಡ ಇರಲಿಲ್ಲ, ಅದಕ್ಕೆ ಸಂಬಂಧಪಟ್ಟಂತೆ ಹತ್ತಾರು ಪುಸ್ತಕಗಳ ಅಧ್ಯಾಯನ ನಡೆಸಿ ಈ ರೆಡ್ ಬಸ್.ಇನ್ ವೆಬ್ಸೈಟ್ ಅಭಿವೃದ್ದಿ ಪಡಿಸುತ್ತಾರೆ.

ರೆಡ್ ಬಸ್ ಆಲೋಚನೆ ಹೊಳೆದಾಗ ಇದನ್ನು ನಾಲ್ಕು ಜನರಿಗೆ ಉಪಯೋಗವಾಗುವುದಕ್ಕೆ ಮಾತ್ರ ಚಿಂತನೆ ಮಾಡಲಾಗಿತ್ತೇ ಹೊರತು ಕೋಟಿ ಕೋಟಿ ದುಡಿಯುವ ಉದ್ದೇಶ ಇರವುದಿಲ್ಲ. ಕೊನೆಗೆ ಈ ರೆಡ್ ಬಸ್ ಜಾಲತಾಣವನ್ನು ಯಾವುದಾದದು ಎನ್.ಜಿ.ಓ ಸಂಸ್ಥೆಗಳಿಗೆ ಉಚಿತವಾಗಿ ನೀಡಲು ಕೂಡ ಮುಂದಾಗಿದ್ದರಂತೆ ಫಣೀಂದ್ರಾ. ಆದರೆ ತಂತ್ರಜ್ಞಾನ, ಇಂಟರ್ ನೆಟ್ ಬಗ್ಗೆ ಅರಿವಿಲ್ಲದ ಅಂದು ಎಲ್ಲರೂ ಇದನ್ನು ತಿರಸ್ಕಾರ ಮಾಡಿದರಂತೆ. ತದ ನಂತರ ಇದೇ ರೆಡ್ ಬಸ್.ಇನ್ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ ಅನ್ನು ಫಣೀಂದ್ರಾ ಸಾಮ ಅವರು 2013ರಲ್ಲಿ ಖಾಸಗಿ ಕಂಪನಿಗೆ ಬರೋಬ್ಫರಿ 400. ಕೋಟಿಗೆ ಮಾರಾಟ ಮಾಡುತ್ತಾರೆ. ಇಂದು ದೇಶದ 15 ರಾಜ್ಯಗಳಲ್ಲಿ ಈ ರೆಡ್ ಬಸ್ ಕಾರ್ಯ ನಿರ್ವಹಿಸುತ್ತಿದೆ. ಪ್ರತಿದಿನ 5000ಕ್ಕೂ ಹೆಚ್ಚು ರೂಟ್ ಗಳನ್ನು ಒಳಗೊಂಡಂತೆ ಪ್ರಯಾಣ ಸೇವೆ ಒದಗಿಸುತ್ತದೆ.

2019ರ ಹಣಕಾಸು ವರ್ಷದಲ್ಲಿ ರೆಡ್ ಬಸ್.ಇನ್ ಸಂಸ್ಥೆಯ ಆದಾಯ ಬರೋಬ್ಬರಿ 85 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದ್ದು ಒಂದು ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಯಾವುದೋ ಒಂದು ಸಂಧರ್ಭದಲ್ಲಿ ಹೊಳೆಯುವ ಉಪಾಯ ಆ ವ್ಯಕ್ತಿಯ ಬದುಕನ್ನ ಎಷ್ಟರ ಮಟ್ಟಿಗೆ ಹಸನು ಮಾಡಬಹುದು ಎಂಬುದಕ್ಕೆ ಫಣೀಂದ್ರಾ ಸಾಮ ಅವರು ಉತ್ತಮ ಉದಾಹರಣೆ ಆಗಿದ್ದಾರೆ. ಸಮಯ ಸಂಧರ್ಭ ಒಂದು ಉತ್ತಮವಾದ ನಿರ್ಧಾರ ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದು. ಕನಸು ಕಾಣುವುದಕ್ಕಿಂತ ಕಂಡ ಕನಸನ್ನು ನನಸಾಗಿಸಲು ಆ ಕನಸಿನ ಬೆನ್ನತ್ತಿ ಹೊರಟು ಹಗಲಿರುಳು ಶ್ರಮ ಪಟ್ಟರೆ ಕಂಡ ಕನಸು ನನಸಾಗುವುದಲ್ಲಿ ಅನುಮಾನವಿಲ್ಲ.

%d bloggers like this: