ಕ್ರಿಸ್ ಮಸ್ ಗೂ ಮುಂಚೆ ಕೇಕ್ ಕತ್ತರಿಸಿದ ಚಾಲೇಂಜಿಂಗ್ ಸ್ಟಾರ್ ದರ್ಶನ್! ಸ್ಯಾಂಡಲ್ ವುಡ್ನ ಬಹುಬೇಡಿಕೆಯ ಮಾಸ್ ಹೀರೋ ನಟ ದರ್ಶನ್ ಸದಾ ಬ್ಯುಸಿ ಇರುವ ನಟ ಪ್ರತಿದಿನ ಒಂದಲ್ಲಾವೊಂದು ಚಿತ್ರದಲ್ಲಿ ಬಿಡುವಿಲ್ಲದೆ ನಟಿಸುತ್ತಿರುತ್ತಾರೆ. ಈ ಕೊರೋನ ಸಮಯದ ಲಾಕ್ ಡೌನ್ ನಲ್ಲಿ ಚಿತ್ರರಂಗದ ನಟ ನಟಿಯರೆಲ್ಲಾ ಒಂದೊಂದು ಹವ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗೇ ದರ್ಶನ್ ಕೂಡ ತನ್ನ ಸ್ನೇಹಿತ ಬಳಗದವರೊಂದಿಗೆ ಕ್ರಿಕೆಟ್, ಬೈಕ್ ರೈಡಿಂಗ್, ಕುದುರೆ ಸವಾರಿ, ಸಫಾರಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಹೋಟೇಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದರು. ಇತ್ತೀಚೆಗೆ ಹೊಟ್ಟೆಗೌಡನ ದೊಡ್ಡಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಎರಡನೇ ವರ್ಷದ ಸವಿನೆನಪಿಗಾಗಿ ಅವರ ಅಭಿಮಾನಿಗಳು ಅಂಬರೀಷ್ ಅವರ ಪ್ರತಿಮೆಯನ್ನು ನಿರ್ಮಿಸಿ ಗುಡಿ ನಿರ್ಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಲತಾ ಅವರು ಕೂಡ ಭಾಗವಹಿಸಿದ್ದರು.

ಈ ಸಂಭ್ರಮಾಚರಣೆಯನ್ನು ಅಂಬರೀಷ್ ಆಪ್ತರಾಗಿರುವ ಸಂದೇಶ್ ನಾಗರಾಜ್ ಅವರ ಹೋಟೇಲ್ ನಲ್ಲಿ ಎಲ್ಲರೂ ಜೊತೆಗೂಡಿ ಆಚರಣೆ ಮಾಡಿದರು. ಭೇಧಭಾವಯಿಲ್ಲದೆ ಹೋಟೇಲ್ ಸಿಬ್ಬಂದಿ ಮತ್ತು ಸೇರಿದ ಎಲ್ಲಾ ಗಣ್ಯರು ಒಟ್ಟಾಗಿ ಅದರಲ್ಲೂ ನಟ ದರ್ಶನ್ ಎಲ್ಲರ ಜೊತೆಗೂಡಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಜೊತೆಗೆ ಇತ್ತೀಚೆಗೆ ಬಿಡುಗಡೆ ಯಾದ ಮಂಸೋರೆ ನಿರ್ದೆಶನದ ಆಕ್ಟ್ 1978 ಚಿತ್ರಕ್ಕೆ ಶುಭ ಹಾರೈಸಿದರು. ಸಧ್ಯದ ಮಟ್ಟಿಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಎಲ್ಲಾ ಸಾಧ್ಯತೆಯಿದ್ದು ನಿರ್ಮಾಪಕ ಉಮಾಪತಿಯವರು ದರ್ಶನ್ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ನಟ ದರ್ಶನ ಈಗ ಐತಿಹಾಸಿಕ ಚಿತ್ರ ವೀರ ಮದಕರಿನಾಯಕ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.