ಸಂಭಾವನೆ ಏರಿಸಿಕೊಂಡ ರಶ್ಮಿಕಾ, ಪುಷ್ಪಾ ಎರಡನೇ ಭಾಗಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ

ಪುಷ್ಪಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಮಾಡಿದ ಬೆನ್ನಲ್ಲೇ ಸಂಭಾವನೆಯಲ್ಲಿ ಭಾರಿ ಏರಿಕೆ ಮಾಡಿಕೊಂಡ ಶ್ರೀ ವಲ್ಲಿ, ಕಳೆದ ವರ್ಷ 2021 ಡಿಸೆಂಬರ್ 17 ರಂದು ದೇಶಾದ್ಯಂತ ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ಪ್ರಪಂಚದಾದ್ಯಂತ ರಿಲೀಸ್ ಆದ ಪುಷ್ಪಾ ಸಿನಿಮಾ ಮಿಶ್ರ ಪತ್ರಿಕ್ರಿಯೆ ಪಡೆದುಕೊಂಡಿದೆ. ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಚಿತ್ರ ಬಹು ಕೋಟಿ ವೆಚ್ಚದ ಸಿನಿಮಾವಾಗಿದ್ದು, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾಗಿತ್ತು. ಪುಷ್ಪ ಚಿತ್ರ ಬಿಡುಗಡೆಗೆ ಮುನ್ನ ತನ್ನ ಟೀಸರ್ ಮತ್ತು ಸಾಂಗ್ ಗಳಿಂದಾನೇ ಸಖತ್ ಕ್ರೇಜ಼್ ಹುಟ್ಟು ಹಾಕಿತ್ತು.

ಯಾವುದೇ ಸಿನಿಮಾ ಆಗಿರಲಿ ಅದು ಫೇಲ್ ಆಗಲಿ ಪಾಸ್ ಆಗಲಿ ಅದು ಆ ಸ್ಟಾರ್ ನಟನ ಫೇಸ್ ವ್ಯಾಲ್ಯೂ ಆಧಾರದ ಮೇಲೆ ಮೊದಲ ವಾರದ ಕಲೆಕ್ಷನ್ ನಿರ್ಧಾರ ಆಗುತ್ತದೆ. ಅಂತೆಯೇ ಪುಷ್ಪಾ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಸ್ಟೈಲೀಶ್ ನಟ ಅಲ್ಲು ಅರ್ಜುನ್. ಅಲ್ಲು ಅರ್ಜುನ್ ಅವರ ಎಲ್ಲಾ ಸಿನಿಮಾಗಳು ಮೊದಲ ವಾರದಲ್ಲಿ ಹಾಕಿದ ಬಂಡವಾಳವನ್ನು ತೆಗೆಯುವಲ್ಲಿ ಸಫಲ ಆಗುತ್ತವೆ. ಅಷ್ಟರ ಮಟ್ಟಿಗೆ ಕ್ರೇಜ಼್ ಅಲ್ಲು ಅರ್ಜುನ್ ಅವರ ಚಿತ್ರಗಳಿಗೆ ಇರುತ್ತದೆ.

ನಟ ಅಲ್ಲು ಅರ್ಜುನ್ ಅವರ ಆಕ್ಟಿಂಗ್, ಡ್ಯಾನ್ಸ್, ಲುಕ್, ಫೈಟ್ಸ್ ಗಳಿಗೆ ಮನ ಸೋಲದ ಸಿನಿ ಪ್ರೇಕ್ಷಕನಿಲ್ಲ‌. ಯಾವುದೇ ಪಾತ್ರವನ್ನಾಗಲಿ ಅದಕ್ಕೆ ಜೀವ ತುಂಬಿ ನಟಿಸುವ ಪಾತ್ರಕ್ಕೆ ಬೇಕಾದಂತಹ ದೇಹ ದಂಡನೆ ಪಾತ್ರದ ಹಾವ ಭಾವ ಎಲ್ಲದಕ್ಕೂ ಪ್ರಾಮುಖ್ಯ ಕೊಟ್ಟು ಪರಾಕಾಯ ಪ್ರವೇಶ ಮಾಡುತ್ತಾರೆ ನಟ ಅಲ್ಲು ಅರ್ಜುನ್. ಅಂತೆಯೇ ಅವರ ಸಂಭಾವನೆಯೂ ಕೂಡ ದುಬಾರಿಯಾಗಿಯೇ ಇರುತ್ತದೆ. ಪುಷ್ಪ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಕೂಡ ಗಳಿಕೆಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲಿಯೂ ಕೂಡ ಉತ್ತಮ ಕಲೆಕ್ಷನ್ ಮಾಡಿದೆ.

ಪುಷ್ಪಾ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚಿತ್ರ ಮಂದಿರಗಳು ಸಂಪೂರ್ಣವಾಗಿ ತುಂಬಿ ತುಳುಕಿ ಅಲ್ಲು ಅರ್ಜುನ್ ಅಭಿಮಾನಿಗಳು ಕೂರಲು ಸೀಟ್ ಸಿಗದೇ ನೆಲದ ಮೇಲೆಯೇ ಕೂತು ಸಿನಿಮಾ ವೀಕ್ಷಣೆ ಮಾಡಿದ್ದರು. ಅಷ್ಟರ ಮಟ್ಟಿಗೆ ಈ ಪುಷ್ಪ ಸಿನಿಮಾ ಕ್ರೇಜ಼್ ಹುಟ್ಟು ಹಾಕಿತ್ತು. ಹೌದು ಬಿಡುಗಡೆಯಾದ ಕೇವಲ ಮೂರೇ ವಾರದಲ್ಲಿ ಪುಷ್ಪ ಸಿನಿಮಾ ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಯಾವುದೇ ಸಿನಿಮಾ ಯಶಸ್ಸು ಕಂಡ ನಂತರ ಆ ಚಿತ್ರದಲ್ಲಿ ನಟಿಸಿದ ಕಲಾವಿದರು ತಮ್ಮ ಸಂಭಾವನೆ ಏರಿಕೆ ಮಾಡಿಕೊಳ್ಳುತ್ತಾರೆ. ಇದು ಸಾಮಾನ್ಯ ಕೂಡ ಹೌದು. ಅಂತೆಯೇ ಇದೀಗ ಪುಷ್ಪಾ ಸಿನಿಮಾದಲ್ಲಿ ನಟಿಸಿದ ನಾಯಕಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸಂಭಾವನೆಯನ್ನ ಏರಿಸಿದ್ದಾರೆ. ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಎರಡು ಕೋಟಿ ಸಂಭಾವನೆ ಪಡೆದಿದ್ದರಂತೆ. ಇದೀಗ ಪುಷ್ಪ ಪಾರ್ಟ್ 2.ಚಿತ್ರಕ್ಕೆ ಮೂರು ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

%d bloggers like this: