ಸಂಭಾವನೆಯಲ್ಲಿ ದಕ್ಷಿಣ ಭಾರತದ ದೊಡ್ಡ ನಟಿಯರನ್ನೇ ಹಿಂದೆ ಹಾಕ್ತಿದ್ದಾರೆ ರಶ್ಮಿಕಾ ಮಂದಣ್ಣ ಅವರು

ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಎಲ್ಲ ಕಡೆ ಅಲ್ಲು ಅರ್ಜುನ್ ಅವರ ಅಭಿನಯದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ತನ್ನ ಟೀಸರ್ ನಿಂದ ಸಖತ್ ಕುತೂಹಲ ನೀಡಿತ್ತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಜನತೆ 50-50 ರಿಯಾಕ್ಷನ್ ನೀಡಿತ್ತು. ಆದರೆ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅಲ್ಲು ಅವರ ನಟನೆಯಿಂದಲೇ ಪುಷ್ಪ ಸಿನಿಮಾದ ಕಲೆಕ್ಷನ್ ಜೋರಾಗಿತ್ತು. ಕಿರಿಕ್ ಪಾರ್ಟಿ ಖ್ಯಾತಿಯ ನಮ್ಮ ಕೊಡಗಿನ ಬೆಡಗಿಯ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದೆ ಇಟ್ಟಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.

ಒಂದು ಚಿತ್ರ ಯಶಸ್ಸು ಕಂಡರೆ ಸಾಕು. ಇನ್ನು ಸ್ಟಾರ್ ಪಟ್ಟ ಮೂಡಿಗೆರಿದರಂತೂ ಮುಗಿಯಿತು. ಈಗ ರಶ್ಮಿಕಾ ಅವರು ಕೂಡ ಯಶಸ್ಸಿನ ಶಿಖರ ತಲುಪುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಕ್ರಷ್ ಎಂದೇ ಹೆಸರಾಗಿದ್ದ ರಶ್ಮಿಕಾ ಮಂದಣ್ಣ, ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿಯೂ ನಟಿಯಾಗಿ ನಟಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು. ಕನ್ನಡದ, ತಮಿಳು, ತೆಲುಗು ಭಾಷೆಯ ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ರಶ್ಮಿಕಾ ಅವರಿಗೆ ಈ ಅದೃಷ್ಟ ದೊರಕಿದೆ. ಪುಷ್ಪಾ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿದ ರಶ್ಮಿಕಾ, ಪುಷ್ಪ2 ಚಿತ್ರದಲ್ಲೂ ಮಿಂಚಲಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲೂ ರಶ್ಮಿಕ ಅವರದೇ ಹವಾ.

ಇನ್ನೊಂದು ಮೈಲಿಗಲ್ಲು ಅನ್ನುವಂತೆ ಇವರು ಬಾಲಿವುಡ್ ನಲ್ಲೂ ಸಿನಿಮಾ ಮಾಡುತ್ತಿದ್ದು ಅಲ್ಲಿಯೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಏಕೆಂದರೆ ಇವರು ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿವೆ. ರಶ್ಮಿಕಾ ಅಭಿನಯದ ಪುಷ್ಪ1 ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಯಶಸ್ಸಿನ ನಾಗಲೋಟ ಮುಂದುವರೆಸಿದ್ದಾರೆ. ತಮ್ಮ ಸಿನಿಮಾಗಳ ಯಶಸ್ಸಿನ ನಂತರ ನಟಿ ರಶ್ಮಿಕಾ ಅವರು ತಮ್ಮ ಸಂಭಾವನೆಯನ್ನು ಕೂಡ ಹೆಚ್ಚು ಮಾಡಿದ್ದಾರೆ.

ಮೂಲಗಳ ಪ್ರಕಾರ ಮಲಯಾಳಂ ಚಿತ್ರದ ಸುಪ್ರಸಿದ್ಧ ನಟ ದುಲ್ಕರ್ ಸಲ್ಮಾನ್ ಅವರೊಟ್ಟಿಗೆ ಸಿನಿಮಾ ಶೂಟಿಂಗ್ ಗಾಗಿ ರಶ್ಮಿಕಾ ಮಂದಣ್ಣ ಅವರು ರಷ್ಯಾಗೆ ತೆರಳಿದ್ದಾರೆ. ಹೌದು ತೆಲುಗು ಸಿನಿಮಾ ಒಂದರಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಬರೋಬ್ಬರಿ 1.5 ಕೋಟಿ ಸಂಭಾವನೆ ಪಡೆದಿದ್ದಾರೆ. ಆಡವಾಳ್ಳು ಮೀಕು, ಜೋಹಾರ್ಲು, ಬಾಲಿವುಡ್ ನ ಗುಡ್ ಬೈ ಸಿನಿಮಾಗೂ ಸುಮಾರು 2 ಕೋಟಿಯವರೆಗೆ ರೆಮ್ಯೂನರೇಷನ್ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇನ್ನು ಪುಷ್ಪ ಪಾರ್ಟ್1 ಚಿತ್ರಕ್ಕೂ ಎರಡು ಕೋಟಿ ಸಂಭಾವನೆ ರಶ್ಮಿಕಾ ಅವರಿಗೆ ಲಭಿಸಿದೆ. ಟಾಲಿವುಡ್ ನಲ್ಲಿ ಮತ್ತಷ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಈ ನಟಿ ಪುಷ್ಪ2 ಸಿನಿಮಾಕ್ಕೂ ಕೋಟಿ ಕೋಟಿ ಸಂಭಾವನೆ ಕೇಳುತ್ತಿದ್ದಾರಂತೆ.

%d bloggers like this: