ಸಮುದ್ರ ದಡದಲ್ಲಿ ಕೇಕ್ ತಿನ್ನುತ್ತಾ ಕುಳಿತ ಯಶ್ ಅವರ ಮಗ ಯಥರ್ವ

ಯಾವುದೇ ತಂದೆ ತಾಯಿಗಳಿಗೆ ಕೊನೆಯದಾಗಿ ಅಚ್ಚುಮೆಚ್ಚು ಎಂದು ಹೇಳಬೇಕೆಂದರೆ ಅವರು ಮಕ್ಕಳು. ಹೌದು ಪ್ರತಿಯೊಂದು ಗಂಡಿಗೂ ಪ್ರತಿಯೊಂದು ಹೆಣ್ಣಿಗೂ ತಂದೆತನ ಮತ್ತು ತಾಯ್ತನ ಉತ್ಕೃಷ್ಟ ಸುಖವನ್ನು ಸಂತೋಷವನ್ನು ನೀಡುವ ವಿಷಯವಾಗಿದೆ. ಅದರಲ್ಲೂ ಸಿನಿಮಾರಂಗದ ಖ್ಯಾತ ನಟ ನಟಿಯರ ಮಕ್ಕಳೆಂದರೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಗಮನಿಸುತ್ತಿರುತ್ತಾರೆ. ಹಾಗಾಗಿ ಸಿನಿ ದಂಪತಿಗಳು ತಮ್ಮ ಮಕ್ಕಳಿಗಾಗಿ ಏನೇ ಮಾಡಿದರೂ ಅದು ವಿಶೇಷವಾಗಿ ಇದ್ದೇ ಇರುತ್ತದೆ.

ಅದರಲ್ಲೂ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಎಲ್ಲೆಡೆ ಪಸರಿಸಿದ ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಏನೇ ಮಾಡಿದರೂ ಅದು ದೊಡ್ಡ ಸುದ್ದಿಯೇ ಆಗುತ್ತದೆ. ಅದು ಈ ಸಿನಿ ದಂಪತಿಯ ಬಗೆಗೆ ಜನರಿಗೆ ಇರುವ ಪ್ರೀತಿ ಗೌರವ. ಯಶ್ ಮತ್ತು ರಾಧಿಕಾ ಅವರು ತಂದೆ ತಾಯಿ ಆದ ಮೇಲಂತೂ ಎಲ್ಲರೂ ಅವರು ಮಕ್ಕಳ ಬಗ್ಗೆ ಮಾಡುವ ಅಪ್ಡೇಟ್ ಗಳಿಗಾಗಿಯೆ ಕಾದು ಕುಳಿತಿರುತ್ತಾರೆ. ಅದರಂತೆ ಯಶ್ ರಾಧಿಕಾ ಕೂಡ ಅಭಿಮಾನಿಗಳಿಗೆ ತಮ್ಮ ಮಕ್ಕಳ ಮುದ್ದು ಮುದ್ದಾದ ವಿಡಿಯೋ ಹಾಕುವ ಮೂಲಕ ಖುಷಿ ಪಡಿಸುತ್ತಾರೆ.

ಯಶ್ ಮತ್ತು ರಾದಿಕಾ ತಮ್ಮ ಮುದ್ದಿನ ಮಗಳು ಐರಾಳ ಮೊದಲ ವರ್ಷದ ಹುಟ್ಟಿದ ಹಬ್ಬವನ್ನು ಇಡೀ ಚಿತ್ರರಂಗವನ್ನೆ ಆಹ್ವಾನಿಸಿ ಅದ್ಧೂರಿಯಾಗಿ ಮಾಡಿದ್ದರು. ಈ ಕೋರೋಣ ಮಹಾಮಾರಿ ನರ್ತನ ಸಂಪೂರ್ಣವಾಗಿ ನಿಂತಿದ್ದಾರೆ ತಮ್ಮ ಮಗ ಯಥರ್ವಣ ಮೊದಲ ಹುಟ್ಟು ಹಬ್ಬವನ್ನು ಕೂಡ ಅಷ್ಟೇ ಅದ್ಧೂರಿಯಾಗಿ ಮಾಡುತ್ತಿದ್ದರು ಯಶ್ ರಾಧಿಕಾ. ಆದರೆ ಕೋರೋಣ ಇನ್ನು ಹೆಮ್ಮಾರಿ ಆಗಿಯೇ ಕಾಡುತ್ತಿರುವ ಹಿನ್ನಲೆಯಲ್ಲಿ ಈ ಸ್ಟಾರ್ ಜೋಡಿ ತಮ್ಮ ಮುದ್ದಿನ ಮಗನ ಹುಟ್ಟಿದ ಹಬ್ಬವನ್ನು ತುಂಬಾ ವಿಶೇಷವಾಗಿ ಆಚರಿಸಿತು.

ಅದರಂತೆಯೇ ಇದೀಗ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಈ ಸ್ಟಾರ್ ಕುಟುಂಬ ಮತ್ತೊಮ್ಮೆ ಕಡಲ ತೀರದಲ್ಲಿ ಸಂಭ್ರಮದಿಂದ ಎಂಜಾಯ್ ಮಾಡುತ್ತಿದ್ದಾರೆ. ಇದರ ವಿಡಿಯೋ ತುಣುಕನ್ನು ಇತ್ತೀಚಿಗೆ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ. ಮೊದಲೇ ರಾಧಿಕಾ ಹುಟ್ಟಿ ಬೆಳೆದದ್ದು ಗೋವಾದಲ್ಲಿ. ಹಾಗಾಗಿ ಅವರಿಗೆ ಕ್ರಿಸ್ ಮಸ ಹಬ್ಬ ಎಂದರೆ ಅವರಿಗೆ ತುಸು ಹೆಚ್ಚಿಗೆ ಪ್ರೀತಿ. ರಾಧಿಕಾ ಶೇರ್ ಮಾಡಿದ ವಿಡಿಯೋದಲ್ಲಿ ಮಗ ಯಥರ್ವ ಮತ್ತು ಮಗಳು ಐರ ಮುದ್ದು ಮುದ್ದಾಗಿ ಕಡಲ ಕಿನಾರೆಯಲ್ಲಿ ಆಟ ಆಡುತ್ತಿದ್ದಾರೆ. ಈ ವಿಡಿಯೋ ನೋಡಿದ ಯಶ್ ರಾಧಿಕಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

%d bloggers like this: