ಸಮುದ್ರದ ಬೀಚ್ ಅನ್ನು ಸ್ವಚ್ಛ ಮಾಡಿದ ಕನ್ನಡದ ಸುಪ್ರಸಿದ್ದ ನಟ

ಒಂದು ಲಾರಿಯಷ್ಟು ತ್ಯಾಜ್ಯ ಸಂಗ್ರಹ, ಸ್ವಚ್ಛತಾ ಕಾರ್ಯದಲ್ಲಿ ಕನ್ನಡದ ಈ ಸ್ಟಾರ್ ನಟ. ಪ್ರಧಾನಿ ನರೇಂದ್ರಮೋದಿಯವರು ಆರಂಭಿಸಿದ ಈ ಸ್ವಚ್ಚತಾ ಅಭಿಯಾನಕ್ಕೆ ಈಗ ಆರು ವರ್ಷಗಳು ತುಂಬಿವೆ. ಈ ಆರು ವರ್ಷದ ಪ್ರಯುಕ್ತ ಕಾರವಾರದ ಕಾಳಿ ಸಂಗಮ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರವಾರದ ಸ್ಥಳೀಯ ಸಂಸ್ಥೆಗಳು ಜೊತೆಗೂಡಿ ಸ್ವಯಂ ಸೇವಕರು ಆರಂಭಿಸಿದ ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಶಾಸಕಿ ರೂಪಾಲಿ ನಾಯ್ಕ್ ಅವರು ಚಾಲನೆ ನೀಡಿದರು. ಪ್ರವಾಸ ತಾಣವಾದ ಕಾರವಾರದ ಬೀಚ್ ಗೆ ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಎಂಜಾಯ್ ಮಾಡುವುದಲ್ಲದೆ, ಬೀಚ್ ನಲ್ಲಿ ಬಿಸಾಡುವ ಪ್ಲ್ಯಾಸ್ಟಿಕ್ ವಾಟರ್ ಬಾಟಲ್, ಕವರ್ ಗಳು, ಬಿಯರ್ ಬಾಟಲ್ ಗಳನ್ನು ಬಿಸಾಡಿ ಹೋಗುವಂತದ್ದು ಸಾಮಾನ್ಯವಾಗಿರುತ್ತದೆ.

ಇದರಿಂದ ಈ ಬೀಚ್ ನಲ್ಲಿ ಕಸ, ತ್ಯಾಜ್ಯ ಹೆಚ್ಚಾಗಿ ಈ ಕಾಳಿಸಂಗಮ ಕಡಲ ತೀರದ ಸೌಂದರ್ಯ ಹಾಳಾಗಿತ್ತು, ಇದನ್ನು ಗಮನಿಸಿದ ಈ ಸ್ವಯಂ ಸೇವಕರ ತಂಡ ಈ ಬೀಚ್ ಅನ್ನು ಸ್ವಚ್ಚತೆ ಮಾಡಲು ಆಯ್ಕೆ ಮಾಡಿಕೊಂಡರು. ಈ ಸ್ವಚ್ಛತಾ ಕಾರ್ಯ ಅಭಿಯಾನದಲ್ಲಿ ಕನ್ನಡದ ಖ್ಯಾತ ನಟರಾದ ಅರುಣ್ ಸಾಗರ್ ಕೂಡ ಪಾಲ್ಗೊಂಡರು. ಬೆಳಿಗ್ಗೆ ಆರಂಭವಾದ ಈ ಸ್ವಚ್ಛತಾ ಕಾರ್ಯ ನಿರಂತರವಾಗಿ ಮೂರು ತಾಸು ನಡೆಯಿತು.

ಬರೋಬ್ಬರಿ ಒಂದು ಲಾರಿಯಷ್ಟು ತ್ಯಾಜ್ಯ ಸಂಗ್ರಹವಾಗಿದ್ದನ್ನು ನೋಡಿದ ಅರುಣ್ ಸಾಗರ್ ಪ್ರವಾಸಿಗರು ಪ್ರವಾಸಿ ತಾಣಕ್ಕೆ ಬಂದಾಗ ತ್ಯಾಜ್ಯಗಳನ್ನು ಎಸೆದು ಹೋಗಬಾರದು, ಇದರ ಬಗ್ಗೆ ನಮ್ಮ ಯುವಕರು ಎಚ್ಚೆತ್ತುಕೊಂಡು ಇತರರನ್ನು ಜಾಗೃತಿಗೊಳಿಸಬೇಕು ಎಂದು ಹೇಳಿದರು. ಜೊತೆಗೆ ಈ ಠಾಗೂರ್ ನಂತಹ ಮಹಾನ್ ವ್ಯಕ್ತಿಗಳು ನಡೆದಾಡಿದ್ದ ಈ ಕಡಲ ತೀರವನ್ನು ಸ್ವಚ್ಜಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ತಂಡಕ್ಕೆ ಧನ್ಯವಾದಗಳು ನಾನು ಇದರಲ್ಲಿ ಭಾಗವಾಗುತ್ತಿರುವುದು ಸಂತೋಷವಾಗಿದೆ ಎಂದು ಹೇಳಿದರು. ಈ ಸ್ವಚ್ಚತಾ ಕಾರ್ಯದಲ್ಲಿ ಕಾರ್ಯಕರ್ತರಿಗೆ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸ಼ರ್ ನೀಡಲಾಗಿತ್ತು.

%d bloggers like this: