ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ, ಉಡುಪಿ ಮಠದ ಪೇಜಾವರ ಶ್ರೀ ಹೇಳಿಕೆ

ಶಾಲೆಗಳು ಇರುವುದು ಶಿಕ್ಷಣ ನೀಡುವುದಕ್ಕೆ ಈ ರೀತಿಯ ಮಕ್ಕಳಲ್ಲಿ ಭೇದಭಾವ ಮನೋಭಾವ ಸೃಷ್ಟಿಸಲು‌ ಅಲ್ಲ ಎಂದು ಕಿಡಿ ಕಾರಿದ ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಶ್ರೀ ಗಳಾದ ವಿಶ್ವ ಪ್ರಸನ್ನ ತೀರ್ಥರು! ಸರ್ಕಾರಿ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ರಕ್ತ ಹೀನತೆಯ ಕೊರತೆ ನೀಗಿಸಲು ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ರಾಜ್ಯ ಶಿಕ್ಷಣ ಇಲಾಖೆ ಪ್ರಧಾನ್ ಮಂತ್ರಿ ಪೋಷಣ್ ಯೋಜನೆಯಡಿಯಲ್ಲಿ ಮೊಟ್ಟೆಯನ್ನು ನೀಡಲು ಶಿಕ್ಷಣ ಇಲಾಖೆ ತಿರ್ಮಾನಿಸಿ ರಾಜ್ಯ ಸರ್ಕಾರ ಕೂಡ ಆದೇಶ ಹೊರಡಿಸಿತ್ತು. ಈಗಾಗಲೇ ರಾಜ್ಯದ ಏಳು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆಯನ್ನ ನೀಡುತ್ತಿದೆ. ಮೊಟ್ಟೆಯನ್ನ ತಿನ್ನದ ಮಕ್ಕಳಿಗೆ ಬದಲಾಗಿ ಬಾಳೇ ಹಣ್ಣನ್ನು ಕೂಡ ನೀಡುತ್ತಿದೆ. ಆದರೆ ಇದೀಗ ಶಾಲೆಯಲ್ಲಿ ಮೊಟ್ಟೆ ನೀಡುತ್ತಿರುವುದಕ್ಕೆ ಸಸ್ಯಾಹಾರಿ ಸಮುದಾಯಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರವಾಗಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಪರ ವಿರೋಧ ಚರ್ಚೆ ಆಗುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಎಡ ಬಲ ಪಂಥೀಯಗಳಂತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರ ನಡುವೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ಇದಾದ ನಂತರ ಸಸ್ಯಾಹಾರ ಸಮುದಾಯದ ಕುಟುಂಬಗಳು ಶಾಲೆಯಲ್ಲಿ ಮೊಟ್ಟೆ ನೀಡುತ್ತಿರುವುದು ನಮ್ಮ ಸಾಂಪ್ರದಾಯಿಕ ಪರಂಪರೆ ನಂಬಿಕೆಗೆ ಧಕ್ಕೆ ಉಂಟು ಮಾಡುತ್ತದೆ. ನಮ್ಮ ಮಕ್ಕಳು ಶಾಲೆಯಲ್ಲಿ ಊಟ ಪಡೆಯುವಾಗ ಯಾವುದನ್ನ ತಿನ್ನಬೇಕು ಯಾವುದನ್ನ ತಿನ್ನ ಬಾರದು ಎಂಬ ಅರಿವನ್ನು ಹೊಂದಿಲ್ಲದೆ ಸರತಿ ಸಾಲಿನಲ್ಲಿ ಕೊಟ್ಟಂತಹ ಆಹಾರವನ್ನು ತಿನ್ನುತ್ತಾರೆ‌.

ಇದು ನಂಬಿಕೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಸಸ್ಯಾಹಾರ ಪೋಷಕರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಇದೀಗ ಶಾಲೆಯಲ್ಲಿ ಮೊಟ್ಟೆ ನೀಡುವ ವಿಚಾರ ರಾಜಕೀಯ ಸ್ವರೂಪ ಪಡೆದುಕೊಳ್ಳುವುದರ ಜೊತೆಗೆ ಕೆವವು ಮಠಾಧಿಪತಿಗಳು ಕೂಡ ಈ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರೆ.ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಶ್ರೀ ಗಳಾದ ವಿಶ್ವ ಪ್ರಸನ್ನ ತೀರ್ಥರು ಶಾಲೆಯಲ್ಲಿ ಮೊಟ್ಟೆ ನೀಡುವ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮೊಟ್ಟೆ ನೀಡುವುದರಿಂದ ಮಕ್ಕಳಲ್ಲಿ ಜಾತಿ ಭೇದಭಾವ ಉಂಟಾಗಲು ಕಾರಣವಾಗುತ್ತದೆ. ಶಾಲೆಗಳಲ್ಲಿ ಎಲ್ಲಾ ಮಕ್ಕಳು ಒಂದೇ. ಅವರಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆ ಇರುವುದಿಲ್ಲ.

ಒಬ್ಬರಿಗೊಬ್ಬರು ಹಂಚಿ ತಿನ್ನುವ ಭಾವನೆ ಇರುವ ಮಕ್ಕಳಲ್ಲಿ ಇದೀಗ ಭೇದಭಾವ ಬರಲು ಈ ಮೊಟ್ಟೆ ವಿತರಣೆ ಕಾರ್ಯಕ್ರಮ ಕಾರಣವಾಗಬಹುದೇನೋ. ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು ಹೇಳುವ ಪ್ರಕಾರ ಸರ್ಕಾರ ಸಾಮೂಹಿಕವಾಗಿ ಎಲ್ಲಾ ಮಕ್ಕಳಿಗೆ ಮೊಟ್ಟೆ ನೀಡಿ ತಿಳುವಳಿಕೆ ಇಲ್ಲದ ಮಕ್ಕಳಿಗೆ ತಮ್ಮ ಆಹಾರ ಪದ್ದತಿಯನ್ನ ಬದಲಿಸುವಂತೆ ಮಾಡಬಾರದು, ಆಹಾರ ಸೇವನೆ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ಯವಿದೆ. ಶಾಲೆಗಳು ಇರುವುದು ಶಿಕ್ಷಣ ನೀಡುವುದಕ್ಕೆ ಹೊರತು ಈ ರೀತಿಯ ಸಾಮರಸ್ಯ ಒಡಕು ಮೂಡಿಸಿಲು ಅಲ್ಲ. ಆಹಾರದಲ್ಲಿ ಯಾರಿಗೆ ಯಾವುದು ಇಷ್ಟವಿದೆಯೋ ಅವರು ಅದನ್ನ ತಿನ್ನಲಿ ಸರ್ಕಾರ ಅದರ ಸಂಪೂರ್ಣ ಖರ್ಚು ವೆಚ್ಚ ನೋಡಿಕೊಳ್ಳಲಿ ಅದನ್ನ ಬಿಟ್ಟು ಸಾಮೂಹಿಕವಾಗಿ ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದು ಕೆಲವು ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂದು ಸರ್ಕಾರದ ಈ ನಿಲುವಿನ ವಿರುದ್ದ ಹರಿಹಾಯ್ದರು.

%d bloggers like this: