ಸ್ಯಾಂಡಲ್ವುಡ್ ಅಲ್ಲಿ ಸದ್ದು ಮಾಡುತ್ತಿದೆ ಈ ವಿಶಿಷ್ಟ ಹಾಡು

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಝಲಕ್ ವೊಂದು ಭಾರಿ ಸೌಂಡ್ ಮಾಡುತ್ತಿದೆ. ಹೌದು ಸಿನಿಮಾಗಳು ಸಾಮಾನ್ಯವಾಗಿ ಟೀಸರ್, ಟ್ರೇಲರ್ ಮೂಲಕವೇ ಕುತೂಹಲ ಮೂಡಿಸುತ್ತವೆ. ಅದರಂತೆ ಇದೀಗ ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ಮಾನ್ಸುನ್ ರಾಗ ಚಿತ್ರದ ಹಾಡೊಂದು ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಾನ್ಸುನ್ ರಾಗ ಚಿತ್ರದ ಈ ಹಾಡು ನಾಯಕಿಯನ್ನ ಪರಿಚಯಿಸುವ ಹಾಡಾಗಿದೆಯಂತೆ. ರಾಗಾಸುಧಾ ಎಂಬ ಈ ಹಾಡಿನಲ್ಲಿ ಯಶಾ ಶಿವಕುಮಾರ್ ಅವರು ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ. ಮಲೆನಾಡು ಪರಿಸರ ಹೊಂದಿರುವಂತೆ ಮಳೆಯ ಇಬ್ಬನಿ ಹಾಕುತ್ತಿರುವಂತೆ ಆ ಮಳೆ ಇಬ್ಭನಿಯಲ್ಲಿ ನಾಯಕಿ ನಟಿ ಕುಣಿದು ಕುಪ್ಪಳಿಸಿ ಬರುವ ಹಾಗೇ ದೃಶ್ಯವನ್ನು ಕಟ್ಟಲಾಗಿದೆ.

ಈ ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಅಂದರೆ ಈ ಹಾಡಿನ ನೃತ್ಯ ಸಂಯೋಜನೆ ಮತ್ತು ತುಳು ಸಾಹಿತ್ಯ ಬಳಸಿಕೊಂಡು ವಿಶೇಷವಾಗಿ ವಯೋಲಿನ್ ಬಳಸಿಕೊಳ್ಳಲಾಗಿದೆ. ಹಾಗಾಗಿಯೇ ಮಾನ್ಸುನ್ ರಾಗ ಚಿತ್ರದ ಈ ಹಾಡು ಸದ್ಯಕ್ಕೆ ಟ್ರೆಂಡ್ ಸೃಷ್ಟಿ ಮಾಡಿದೆ. ಇನ್ನು ಈ ಮಾನ್ಸುನ್ ರಾಗ ಸಿನಿಮಾ ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಈಗಾಗಲೇ ಈ ಚಿತ್ರದ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಫೆಬ್ರವರಿ 14 ವ್ಯಾಲೆಂಟೆನ್ಸ್ ಡೇ ದಿನದಂದು ಮಾನ್ಸುನ್ ರಾಗ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅವರ ಅಭಿನಯದ ಈ ಚಿತ್ರದ ಪೋಸ್ಟರ್ ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆಗೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಅವರು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಮಾನ್ಸುನ್ ರಾಗ ಸಿನಿಮಾದ ಪೋಸ್ಟರ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ ಅವರ ಲುಕ್ ಗೆ ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ಎಆರ್ ವಿಖ್ಯಾತ್ ಅವರು ಈ ಮಾನ್ಸುನ್ ರಾಗ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರವೀಂದ್ರ ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆಯಾಗಿ ಮಾನ್ಸುನ್ ರಾಗ ಸಿನಿಮಾ ಡಾಲಿ ಧನಂಜಯ್ ಅವರ ವೃತ್ತಿ ಜೀವನಕ್ಕೆ ಮತ್ತೊಂದು ಸೂಪರ್ ಹಿಟ್ ಚಿತ್ರ ಆಗಲಿದೆ ಎಂಬ ಮುನ್ಸೂಚನೆ ಟ್ರೇಲರ್ ಮತ್ತು ಈ ಹಾಡಿನ ಮೂಲಕವೇ ಸಿಕ್ಕಿದೆ ಎಂದು ಹೇಳಬಹುದು. ಸದ್ಯಕ್ಕೆ ಡಾಲಿ ಧನಂಜಯ್ ಅವರು ಹೊಯ್ಸಳ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದರ ಜೊತೆಗೆ ಮಾನ್ಸುನ್ ರಾಗ ಚಿತ್ರದ ಕೆಲಸ ಕಾರ್ಯಗಳಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ.

%d bloggers like this: