ಸ್ಯಾಂಡಲ್ ವುಡ್ ಅರಸನನ್ನು ನೆನೆದು ಮತ್ತೆ ಪೋಸ್ಟ್ ಹಂಚಿಕೊಂಡ ನಟಿ ರಮ್ಯಾ ಅವರು

ಕನ್ನಡ ಚಿತ್ರರಂಗವನ್ನ ದಶಕಗಳ ಕಾಲ ಆಳಿದ ಯಶಸ್ವಿ ನಟಿ ರಮ್ಯಾ ಕಳೆದ ಐದಾರು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ರಾಜಕೀಯ ಕ್ಷೇತ್ರದ ಆಸಕ್ತಿಯಿಂದಾಗಿ ಚಿತ್ರರಂಗ ತೊರೆದ ನಟಿ ರಮ್ಯ ಸದ್ಯಕ್ಕೆ ರಾಜಕೀಯದಿಂದಲೂ ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಓದು,ವಿದೇಶ ಪ್ರವಾಸ ಅಂತ ವರ್ಷಗಳ ಕಾಲ ಸಾರ್ವಜನಿಕ ಜೀವನದ ಜೊತೆಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದ ರಮ್ಯಾ ವರ್ಷಗಳೀಂದಿಚಗೆ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಶೈನ್ ಆಗುತ್ತಿದ್ದಾರೆ. ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ತಿಳಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.

ನಟಿ ರಮ್ಯ 20ರ ದಶಕದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ. ಸೋಶಿಯಲ್ ಮೀಡಿಯಾಗಳಲ್ಲಿ ರಮ್ಯ ಅವರಿಗೆ ಮತ್ತೆ ನೀವು ಸಿನಿಮಾಗಳಲ್ಲಿ ನಟಿಸಬೇಕು ಎಂದು ಅವರ ಅಭಿಮಾನಿಗಳು ಹೇಳುತ್ತಲೇ ಇದ್ದರು. ಅದರಂತೆ ಅವರ ಮನದಲ್ಲಿಯೂ ಕೂಡ ತಾವು ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಡುವುದಾದರೆ ಅದು ತಮ್ಮ ಚೊಚ್ಚಲ ಚಿತ್ರದ ನೆಚ್ಚಿನ ನಟರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಮಾತ್ರ ನಿರ್ಧರಿಸಿದ್ದರು. ಅದರಂತೆ ಒಂದು ಉತ್ತಮ ಕಥೆ, ಪಾತ್ರಕ್ಕಾಗಿ ರಮ್ಯ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯಾಟ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ನಿಧನರಾದರು.

ಕನ್ನಡ ಚಿತ್ರರಂಗದ ನಕ್ಷತ್ರದಂತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಎರಡು ತಿಂಗಳುಗಳು ಸಮೀಪ ಆಗುತ್ತಿವೆ. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಕೂಡ ಮಾನಸಿಕವಾಗಿ ಅವರು ಸದಾ ಜೀವಂತರಾಗಿರುತ್ತಾರೆ. ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು, ಅವರು ಮಾಡಿದ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿರುತ್ತಾರೆ. ಇಂದಿಗೂ ಕೂಡ ಪುನೀತ್ ಅವರ ಪುಣ್ಯಭೂಮಿಗೆ ಪ್ರತಿನಿತ್ಯ ಕುಟುಂಬ ಸಮೇತ ನೂರಾರು ಅಭಿಮಾನಿಗಳು ಬಂದು ದರ್ಶನ ಪಡೆದು ಸ್ಮರಿಸುತ್ತಿದ್ದಾರೆ. ಇಂದು ಕನ್ನಡದ ಯಾವುದೇ ಸಿನಿಮಾ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿ ತದ ನಂತರ ತಮ್ಮ ಚಿತ್ರಗಳ ಕೆಲಸ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ.

ಈ ರೀತಿಯಾಗಿ ಕನ್ನಡ ಚಿತ್ರರಂಗ ಅಪ್ಪು ಅವರನ್ನ ಸ್ಮರಿಸುತ್ತಲೇ ಇದ್ದಾರೆ. ಇದೀಗ ಅದೇ ರೀತಿಯಾಗಿ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಮೂರು ಚಿತ್ರಗಳಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ್ದ ರಮ್ಯಾ ಅವರು ಆಗಾಗ ಅಪ್ಪು ಅವರನ್ನ ನೆನೆದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಅಭಿ, ಆಕಾಶ್, ಅರಸು ಹೀಗೆ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ರಮ್ಯ ಅವರು ಅರಸು ಚಿತ್ರದ ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಎಂಬ ಹಾಡಿನ ಸಾಲುಗಳನ್ನ ಬರೆದು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ರಮ್ಯ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

%d bloggers like this: