ಸ್ಯಾಂಡಲ್ವುಡ್ ಬೆಂಬಿಡದ ಕೊರೊನ, ಕನ್ನಡದ ನಟನಿಗೆ ಪಾಸಿಟಿವ್ ದೃಢ

ಜನಸಾಮಾನ್ಯರ ಜೊತೆಗೆ ಸಚಿವರುಗಳನ್ನ ಬೆನ್ನಟ್ಟಿದ ಕೊರೋನ ವೈರಸ್! ರಾಜ್ಯಾದ್ಯಂತ ಕೊರೋನ ತನ್ನ ಹಾವಳಿಯನ್ನ ದಿನಕಳೆದಂತೆ ಹೆಚ್ಚು ಮಾಡುತ್ತಲೆಯಿದೆ. ಅದರಲ್ಲೂ ಇತ್ತೀಚೆಗೆ ಕೊರೋನ ವಾರಿಯರ್ಸ್ ಗಳಾದ ವೈದ್ಯರು, ಪೊಲೀಸ್ ಸಿಬ್ಬಂದಿ ವರ್ಗದವರಿಗೂ ಕೊರೋನ ವೈರಸ್ ಪಾಸಿಟೀವ್ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಧ್ಯಂತರ ದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಚಿವರಾದ ಡಾಕೆ ಸುಧಾಕರ್ ಅವರು ಆರಂಭದಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದರು, ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ನವರು ಸಹ ಸ್ವಯಂ ನಿರ್ಬಂಧದಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಯವರಿಗೂ ಕೊರೋನ ಪಾಸಿಟೀವ್ ಬಂದು ಕ್ವಾರಂಟೈನ್ ನಲ್ಲಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪಧಾರ್ಥಗಳ ಸೆವನೆಯಿಂದ ಅದರಲ್ಲೂ ಗುರುರಾಜ್ ಕಜೆ ಅವರ ಸಲಹೆ ಮತ್ತು ಅವರ ಆಯುರ್ವೇದ ಔಷಧಿ ಮುಖೇನ ಅವರು ಸಹ ಈಗ ಗುಣಮುಖರಾಗಿದ್ದಾರೆ.

ಇದೀಗ ಮತ್ತೊಬ್ಬ ಕನ್ನಡ ನಟ ಹಾಗು ಸಚಿವರಿಗೆ ಕೊರೋನ ಪಾಸಿಟೀವ್ ಬಂದಿದೆ, ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಕೊರೋನ ಪಾಸಿಟೀವ್ ಬಂದಿದ್ದು ಅವರಷ್ಟೇ ಅಲ್ಲದೆ ಅವರ ಅಳಿಯ, ಮಡದಿ ಮತ್ತು ಅವರ ಸಿಬ್ಬಂದಿ ವರ್ಗದವರಿಗೂ ಕೊರೋನ ಪಾಸಿಟೀವ್ ಬಂದಿದೆ ಎಂದು ಸ್ವತಃ ಬಿಸಿ ಪಾಟೀಲ್ ಅವರೇ ತಮ್ಮಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗೂ ತಮ್ಮೆಲ್ಲ ಸಿಬ್ಬಂದಿ ಮತ್ತು ನನ್ನ ಕುಟುಂಬವರ್ಗದವರು ಆರೋಗ್ಯವಾಗಿ ಕ್ಷೇಮವಾಗಿರಲಿ ಎಂದು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ, ಏನೆ ಆದರೂ ಕೊರೋನ ವೈರಸ್ ಮಾತ್ರ ನನಗೆ ಯಾವುದೇ ಅಂತಸ್ತು, ಪದವಿಯ ಭೇಧವಿಲ್ಲ ಎಂಬಂತೆ ಎಲ್ಲರನ್ನೂ ಆವರಸಿಕೊಳ್ಳುತ್ತಿದ್ದು ಅದರಲ್ಲೂ ಕೊರೋನ ವಾರಿಯರ್ಸ್ ಗಳನ್ನು ಬಲಿ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಮತ್ತು ದುರದೃಷ್ಟಕರವಾಗಿದೆ.

%d bloggers like this: