ಸ್ಯಾಂಡಲ್ವುಡ್ ನಲ್ಲಿ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ಯುವ ನಟ

ಸ್ಯಾಂಡಲ್ ವುಡ್ ಬಜಾ಼ರ್ ನಲ್ಲಿ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ಧನ್ವೀರ್, ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದ ಬಜಾ಼ರ್ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಧನ್ವೀರ್ ತಮ್ಮ ಖಡಕ್ ಲುಕ್, ಆಕರ್ಷಕ ನಗು, ಆರಡಿ ಎತ್ತರ ದೇಹದ ಜೊತೆಗೆ ತಮ್ಮನಟನೆಯ ಮೂಲಕ ಮೊದಲ ಚಿತ್ರದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಟ ಧನ್ವೀರ್ ಅವ ಒಂದೇ ಚಿತ್ರವಾದರೂ ಅವರಿಗೆ ಮಹಿಳಾ ಅಭಿಮಾನಿಗಳು ಕೊಂಚ ಹೆಚ್ಚಾಗಿದ್ದಾರೆ. ಮೊದಲ ಚಿತ್ರದ ಮೂಲಕವೇ ಹೆಂಗಳೆಯರ ಮನ ಗೆದ್ದು ಧನ್ವೀರ್ ಫೀಮೇಲ್ ಫ್ಯಾನ್ಸ್ ಹೊಂದಿದ್ದಾರೆ. ಬಜಾ಼ರ್ ಚಿತ್ರ ತಕ್ಕ ಮಟ್ಟಿಗೆ ಯಶಸ್ಸು ತಂದುಕೊಟ್ಟ ನಂತರ ನಟ ಧನ್ವೀರ್ ಒಪ್ಪಿಕೊಂಡಿದ್ದು ಅಲೆಮಾರಿ, ಕಾಲೇಜ್ ಕುಮಾರ ಸಿನಿಮಾ ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ಅವರ ಬೈ ಟೂ ಲವ್ ಸಿನಿಮಾವನ್ನ.

ಈ ಚಿತ್ರದ ಭಾಗಶಃ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬೈ ಟೂ ಲವ್ ಸಿನಿಮಾದಲ್ಲಿ ಕಿಸ್ ಚಿತ್ರ ಖ್ಯಾತಿಯ ನಟಿ ಶ್ರೀ ಲೀಲಾ ಧನ್ವೀರ್ ಗೆ ಜೋಡಿಯಾಗಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಈ ಚಿತ್ರ ನಿರ್ಮಾಣ ಮಾಡಿದ್ದು, ಮುಂದಿನ ಫೆಬ್ರವರಿ ತಿಂಗಳು ಚಿತ್ರ ಬಿಡುಗಡೆ ಮಾಡುವ ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ನಟ ಧನ್ವೀರ್ ತಮ್ಮ ಎರಡನೇ ಸಿನಿಮಾ ಬಿಡುಗಡೆಗೆ ಮುನ್ನವೇ ಮೂರನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಹೊಸ ಚಿತ್ರಕ್ಕೆ ಇನ್ನು ಶೀರ್ಷಿಕೆ ಅಂತಿಮವಾಗಿಲ್ಲ. ಈ ಚಿತ್ರಕ್ಕೆ ಶಂಕರ್ ರಾಮನ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರ ಶಂಕರ್ ರಾಮನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.

ಈ ಮೊದಲು ಶಂಕರ್ ರಾಮನ್ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಸ್ಕ್ರಿಪ್ಟ್ ರೇಟರ್ ಯಾಗಿ ಕೆಲಸ ಮಾಡಿದ್ದಾರೆ. ಇದೊಂದು ಪಕ್ಕ ಮಾಸ್ ಎಂಟರ್ಟೈನರ್ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ನಟ ಧನ್ವೀರ್ ಸಖತ್ ರಾ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಧನ್ವೀರ್ ಕೂಡ ತಮ್ಮ ದೇಹವನ್ನು ದಂಡಿಸುತ್ತಿದ್ದಾರಂತೆ. ಇನ್ನು ನಟ ಧನ್ವೀರ್ ಅವರ ಮೂರನೇ ಈ ಚಿತ್ರ ಇದೇ ಜನವರಿ 14 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಜನವರಿ 20 ರಿಂದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಚಿತ್ರೀಕರಣ ಮಾಡಲಿದ್ದೇವೆ ಎಂದು ನಟ ಧನ್ವೀರ್ ತಿಳಿಸಿದ್ದಾರೆ.

%d bloggers like this: