ಸ್ಯಾಂಡಲ್ವುಡ್ ನಟ ಧನ್ವಿರ್ ವಿರುದ್ಧ FIR ಗೆ ಸೂಚನೆ

ಇತ್ತೀಚಿನ ದಿನಗಳಲ್ಲಿ ಯಾಕೋ ಕನ್ನಡ ಚಿತ್ರರಂಗಕ್ಕೂ ಮತ್ತು ವಿವಾದಗಳಿಗೂ ತುಂಬಾ ನಂಟು ಹೆಚ್ಚಾದಂತೆ ಕಾಣುತ್ತಿದೆ. ಹೌದು ಇದೀಗ ಸ್ಯಾಂಡಲ್ವುಡ್ನ ಉದಯೋನ್ಮುಖ ನಟ ಧನ್ವೀರ್ ಅವರ ವಿರುದ್ಧ ಪ್ರಕರಣ ಒಂದು ದಾಖಲಾಗಿದೆ. ಸಾಮಾನ್ಯವಾಗಿ ಹುಲಿ ಅಭಯಾರಣ್ಯಗಳಲ್ಲಿ ಸಂಜೆ ಐದು ಮೂವತ್ತರ ನಂತರ ಯಾವುದೇ ರೀತಿಯ ಸಫಾರಿ ಇರುವುದಿಲ್ಲ.

ಸಾರ್ವಜನಿಕರ ಪ್ರವೇಶಕ್ಕೆ ಕೂಡ ಅವಕಾಶವಿರುವುದಿಲ್ಲ. ಆದರೆ ನಟ ಧನ್ವಿರ್ ಅವರು ನಿಯಮ ಮೀರಿ ರಾತ್ರಿವೇಳೆಯಲ್ಲಿ ಬಂಡೀಪುರದ ಹುಲಿ ಅಭಯಾರಣ್ಯದಲ್ಲಿ ಪ್ರವೇಶ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ನಟ ದನ್ವೀರ್ ಅವರು ಕತ್ತಲೆಯಾಗುವವರೆಗೂ ಅಭಯಾರಣ್ಯದಲ್ಲಿ ಸುತ್ತಾಡಿದ ಲೋಪವೆಸಗಿದ್ದಾರೆ.

ಇದರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆಯೇ ಅಥವಾ ಸ್ವತಃ ದನ್ವೀರ್ ಅವರೇ ಸಿಬ್ಬಂದಿಗಳ ಕಣ್ತಪ್ಪಿಸಿ ಅಭಯಾರಣ್ಯದ ಒಳಗೆ ಪ್ರವೇಶ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಹುಲಿ ಯೋಜನೆಯ ನಿರ್ದೇಶಕರದಂತಹ ಬಾಲಚಂದ್ರ ಅವರಿಗೆ ಸೂಚಿಸಲಾಗಿದೆ ಎನ್ನಲಾಗಿದೆ. ನಿಯಮಗಳನ್ನು ಮೀರಿ ರಾತ್ರಿ ವೇಳೆ ಅಭಯಾರಣ್ಯದಲ್ಲಿ ಇರುವುದು ನನ್ನ ತಪ್ಪಾಗಿದೆ ಎಂದು ನಟ ಧನ್ವಿರ್ ಮನವಿ ಮಾಡಿಕೊಂಡಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

%d bloggers like this: