ಸಂಗೀತ ಕೊಡುವುದರಲ್ಲಿ ಅಷ್ಟೇ ಅಲ್ಲ, ಈ ವಿಷಯದಲ್ಲೂ ವಿಭಿನ್ನ ಕೆಲಸ ಮಾಡಿದ ರವಿ ಬಸ್ರುರ್

ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾಲ್ಲಿ ಒಬ್ಬರಾದ ರವಿ ಬಸ್ರೂರು ಇದೀಗ ಇಡೀ ಭಾರತಕ್ಕೆ ಪರಿಚಯ ಇರುವ ಹೆಸರಾಗಿದ್ದಾರೆ. ಹೌದು ಕೆಜಿಎಫ್ ಎಂಬ ಒಂದು ಚಿತ್ರ ಅಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದರ ಹಿನ್ನೆಲೆ ಸಂಗೀತ. ಅದನ್ನ ಅಚ್ಚು ಕಟ್ಟಾಗಿ ಕಟ್ಟಿ ಕೊಟ್ಟವರು ಇದೆ ರವಿ ಬಸ್ರೂರು. ಹೌದು ದೃಶ್ಯ ವೈಭವಕ್ಕೆ ತಕ್ಕಂತೆ ಅದ್ಬುತ ಮ್ಯೂಸಿಕ್ ನೀಡಿದ್ದ ರವಿ ಕೆಜಿಎಫ್ ಎಂಬ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಚಿತ್ರ ಆಗುವಂತೆ ಮಾಡಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಕೆಜಿಎಫ್ ಅಷ್ಟೆ ಅಲ್ಲದೆ ಲಕ್ಕಿ ಮಾಫ್ತಿ ಉಗ್ರಂ ಅಂಜನಿಪುತ್ರ ಎಂಬ ಸಾಲು ಸಾಲು ಹಿಟ್ ಚಿತ್ರಗಳಿಗೆ ಅದ್ಭುತ ಮ್ಯೂಸಿಕ್ ನೀಡಿದ್ದಾರೆ. ರವಿ ಬಸ್ರೂರು ಉತ್ತಮ ಕಲೆಗಾರ ಅಷ್ಟೆ ಅಲ್ಲ ಬದಲಾಗಿ ಒಬ್ಬ ಸೌಮ್ಯ ಸ್ವಭಾವದ ಒಳ್ಳೆಯ ವ್ಯಕ್ತಿ ಕೂಡ ಹೌದು.

ಅವರು ತಮ್ಮ ಹಳ್ಳಿಯ ಬಗ್ಗೆ ಎಷ್ಟು ಪ್ರೀತಿ ಇಟ್ಟಕೊಂಡಿದ್ದರೆ ಎಂದರೆ ನೀವು ಅದನ್ನು ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು ತಮ್ಮ ಪ್ರೀತಿಯ ಹುಟ್ಟೂರಾದ ಬಸ್ರೂರು ಬಿಟ್ಟು ಜೀವನಕ್ಕಾಗಿ ಕಲೆ ನೆಚ್ಚಿಕೊಂಡು ಸಿಟಿಗೆ ಬಂದ ರವಿ ಅವರನ್ನು ಕಲಾ ಸರಸ್ವತಿ ಕೈ ಬಿಡಲಿಲ್ಲ. ಆದರೆ ಹಾಗೆಯೇ ಇಷ್ಟೆಲ್ಲಾ ಹೆಸರು ಹಣ ಖ್ಯಾತಿ ಬಂದ ಮೇಲೆ ಕೂಡ ರವಿ ಅವರಿಗೆ ತಮ್ಮ ಹಳ್ಳಿಯ ಮೇಲಿನ ಅಭಿಮಾನ ಕಡಿಮೆ ಆಗಲಿಲ್ಲ. ಅದಕ್ಕಾಗಿಯೇ ತಮ್ಮ ಹುಟ್ಟೂರಾದ ಬಸ್ರೂರು ಗ್ರಾಮದಲ್ಲಿ ಇದೀಗ ರವಿ ಅವರು ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್ ಎಂಬ ಹೆಸರಿನ ಭವ್ಯ ಸ್ಟುಡಿಯೋ ಒಂದನ್ನು ಕಟ್ಟಿಸಿದ್ದಾರೆ. ಹೌದು ಎಲ್ಲರೂ ತಮ್ಮ ತಮ್ಮ ಸ್ವಂತ ಸ್ಟುಡಿಯೋ ಗಳನ್ನೂ ನಗರದ ಫೇಮಸ್ ಸ್ಥಳಗಳಲ್ಲಿ ಕಟ್ಟಿಸಿಸರೆ ರವಿ ಅವರು ಮಾತ್ರ ತಮ್ಮ ಹಳ್ಳಿಯಲ್ಲಿ ನಿರ್ಮಿಸಿದ್ದಾರೆ.

ಇನ್ನು ಮುಂದೆ ಎಲ್ಲಾ ಚಿತ್ರಗಳಿಗೂ ಅಲ್ಲಿಂದಲೇ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ ರವಿ ಸಿನಿಮಾ ನಿರ್ದೇಶನ ಕೂಡ ಆಗಿರುವ ರವಿ ಈಗಾಗಲೇ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು ಮುಂದಿನ ಸಿನಿಮಾಗಳ ತಯಾರಿ ಕೂಡ ತಮ್ಮ ಹಳ್ಳಿಯಲ್ಲೇ ಮಾಡಲಿದ್ದಾರೆ. ಬಹು ಬೇಡಿಕೆಯ ಮ್ಯೂಸಿಕ್ ಕಂಪೋಸರ್ ಆಗಿರುವ ರವಿ ಅವರ ಕೈಯಲ್ಲಿ ಇಡೀ ಭಾರತ ಚಿತ್ರ ರಂಗವೇ ಕಾತುರದಿಂದ ಕಾಯತ್ತಿರುವ ಕೆಜಿಎಫ್2 ಮತ್ತು ಉಪೇಂದ್ರ ನಟನೆಯ ಕಬ್ಜ ಚಿತ್ರಗಳಿದ್ದು ಅವುಗಳಿಗೆ ಮ್ಯೂಸಿಕ್ ನೀಡುವ ಕೆಲಸದಲ್ಲಿ ರವಿ ಬ್ಯುಸಿ ಆಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹೆಸರು ಹಣ ಬಂದರೂ ಸಹ ತಮ್ಮ ಹಳ್ಳಿಯನ್ನು ಮರೆಯದ ರವಿ ಅವರು ಮಾಡಿದ ಕೆಲಸ ನಿಜಕ್ಕೂ ಶ್ಲಾಘೀಯವಾದುದು.

%d bloggers like this: