ಸಂಖ್ಯಾ ಶಾಸ್ತ್ರದ ಪ್ರಕಾರ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸದ ಅವಕಾಶಗಳು ಜಾಸ್ತಿ

ಸರ್ಕಾರಿ ಉದ್ಯೋಗ ಪಡೆಯುವುದು ಇಂದಿನ ಯುವಕರ ಪ್ರಮುಖ ಉದ್ದೇಶವಾಗಿದೆ, ಜೀವನದಲ್ಲಿ ನೀವು ಏನಾಗಬೇಕು, ಏನು ಸಾಧಿಸಬೇಕು ಎಂದು ಕೇಳ ಹೊರಟರೆ ಒಬ್ಬೊಬ್ಬರು ಭಿನ್ನ ವಿಭಿನ್ನ ಉತ್ತರ ನೀಡುತ್ತಾರೆ. ಈ ಉತ್ತರಗಳಲ್ಲಿ ಸಾಮಾನ್ಯವಾಗಿ ಸರ್ಕಾರಿ ಕೆಲಸ ಪಡೆಯಬೇಕು ಎಂಬ ಧ್ವನಿಯೇ ಹೆಚ್ಚಾಗಿ ಕೇಳಿ ಬರುರುತ್ತದೆ. ಸರ್ಕಾರಿ ಕೆಲಸ ಪಡೆಯಲೇಬೇಕೆಂಬ ಮಹಾದಾಸೆ ಹೊತ್ತು ನಗರಗಳಿಗೆ ಬಂದು ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗಳಲ್ಲಿ ಹಣ ಸುರಿದು ಹಗಲು ರಾತ್ರಿ ಓದಿದರು ಕೂಡ ಸರ್ಕಾರಿ ಕೆಲಸ ದಕ್ಕುವುದಿಲ್ಲ. ಅಂತಿಮ ತಮ್ಮ ವಯಸ್ಸಿನ ಮಿತಿಯವರೆಗೂ ಪ್ರಯತ್ನ ಪಟ್ಟರು ಸಹ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಕೆಲವರಿಗೆ ಮಾತ್ರ ಸುಲಭವಾಗಿ ಸರ್ಕಾರಿ ಉದ್ಯೋಗ ಸಿಗುತ್ತದೆ ಹೀಗೆ ಏಕೆ ಕೆಲವರು ಎಲ್ಲಾ ರೀತಿಯಾಗಿ ಕಷ್ಟ ಪಟ್ಟು ಶ್ರಮ ಹಾಕಿದರೂ ದಕ್ಕದ ಈ ಸರ್ಕಾರಿ ಉದ್ಯೋಗ ಕೆಲವರಿಗೆ ಬಾಳೆಹಣ್ಣು ಸುಲಿದಂತೆ ಸಿಗುವುದಾದರೆ, ಇತರರಿಗೆ ಏಕೆ ಸಾಧ್ಯವಿಲ್ಲ ಅನ್ನೋದನ್ನು ತಿಳಿಯಬೇಕಾದರೆ ಈ ಸಂಖ್ಯಾಶಾಸ್ತ್ರದಲ್ಲಿ ಬರುವ ಅಂಕಿ ಅಂಶಗಳನ್ನು ಗಮನಿಸಲೇಬೇಕಾಗಿದೆ.

ನೀವು ಹುಟ್ಟಿದ ದಿನಾಂಕದಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ಯೋಗವಿದ್ದರೆ ಮಾತ್ರ ನಿಮಗೆ ಸರ್ಕಾರಿ ಉದ್ಯೋಗ ಸಿಗುತ್ತದೆ, ಇಲ್ಲವಾದಲ್ಲಿ ನೀವು ಎಷ್ಟೇ ಪ್ರಯತ್ನ ಪಟ್ಟರು ನಿಮಗೆ ದಕ್ಕುವುದಿಲ್ಲ. ಹಾಗದರೆ ಯಾವ ದಿನಾಂಕಗಳಲ್ಲಿ ಜನಿಸಿದವರಿಗೆ ಗೌರ್ಮೆಂಟ್ ಜಾಬ್ ಸಿಗುತ್ತದೆ. ಯಾವ ದಿನಾಂಕ ಅನ್ನುವುದಕ್ಕಿಂತ ಸಂಖ್ಯಾ ಶಾಸ್ತ್ರದಲ್ಲಿ ಅದನ್ನು ಡೆಸ್ಟನಿ ಎಂದು ಕರೆಯುತ್ತಾರೆ. ಅಂದರೆ ನೀವು ಹುಟ್ಟಿದ ದಿನ, ತಿಂಗಳು,ವರ್ಷ ಸಂಖ್ಯೆಯನ್ನು ಕೂಡಿದರೆ ಬರುವ ಸಂಖ್ಯೆ ಡೆಸ್ಟನಿ.

ಇದನ್ನು ಕೆಲವರು ಅದೃಷ್ಟ ಸಂಖ್ಯೆ, ಭಾಗ್ಯ ಸಂಖ್ಯೆ ಎಂದು ಕರೆಯುವುದುಂಟು. ಕ್ರಮವಾಗಿ 1,3,4,5,8 ಸಂಖ್ಯೆಗಳು ಬಂದರೆ ನಿಮಗೆ ಗೌರ್ಮೆಂಟ್ ಜಾಬ್ ಸಿಗುವ ಅವಕಾಶ ಹೆಚ್ಚಾಗಿರುತ್ತದೆ. ಇನ್ನು ಕೆಲವರಿಗೆ 1,3,5 ಈ ರೀತಿಯ ಸಂಖ್ಯೆಗಳು ಬಂದರೆ ಇವರಿಗೆ ತೊಂದರೆ ತಾಪತ್ರಯವಿಲ್ಲದೆ ಸುಲಭವಾಗಿ ಸರ್ಕಾರಿ ಉದ್ಯೋಗ ಲಭಿಸುತ್ತದೆ.

ಇನ್ನು ಕೆಲವರ ಸಂಖ್ಯಾಶಾಸ್ತ್ರದಲ್ಲಿ 1,3,5 ಸಂಖ್ಯೆ ಬಂದರೆ ಅವರಿಗೆ ಗೌರ್ಮೆಂಟ್ ಜಾಬ್ ಸಿಗುವುದು ತೀರಾ ಕಷ್ಟ ಸಾಧ್ಯ ಎಂದು ಹೇಳುತ್ತದೆ. ಆದರೂ ಕೂಡ ಇವರು ಸರ್ಕಾರಿ ಕೆಲಸಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ ಆದರೆ ಯಾವುದೇ ರೀತಿಯ ಫಲ ದೊರೆಯುವುದಿಲ್ಲ. ಕೆಲವರ ಹುಟ್ಟಿದ ದಿನಾಂಕಗಳಲ್ಲಿ ವ್ಯಾಪಾರ ವ್ಯವಹಾರ ಕಂಡು ಬಂದರೆ ಇತರರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ನಿರಂತರವಾಗಿ ಇರುತ್ತದೆ.

ಆದ್ದರಿಂದ ನಿಮ್ಮ ಹುಟ್ಟಿದ ದಿನಾಂಕ ಜಾತಕ ದೋಷ ಫಲಾಫಲಗಳನ್ನು ತಿಳಿದುಕೊಂಡು ನಂತರ ಈ ಸರ್ಕಾರಿ ಕೆಲಸ ಪಡೆಯುವ ಸಾಹಸಕ್ಕೆ ಮುಂದಾಗಿ ಇಲ್ಲವಾದಲ್ಲಿ ಜೀವನ ಪೂರ್ತಿ ಈ ಸ್ಪರ್ಧಾತ್ಮಕ ಪರೀಕ್ಷೆ ನೆಚ್ಚಿಕೊಂಡು ಜೀವನದಲ್ಲಿ ಆರ್ಥಿಕ ಸಮಸ್ಯೆ ಎದುರಿಸಿಕೊಂಡು ಹರಸಾಹಸ ಪಡಬೇಕಾಗುತ್ತದೆ. ಇಂದು ಸರ್ಕರಿ ಉದ್ಯೋಗದಲ್ಲಿ ಇರುವ ಎಷ್ಟೋ ಜನರು ಸಂಖ್ಯೆರ ಆಧಾರದ ಮೇಲೆಯೇ ಉದ್ಯೋಗ ಪಡೆದಿದ್ದಾರೆ ಎನ್ನುತ್ತದೆ ಸಂಖ್ಯಾಶಾಸ್ತ್ರ, ಶೇಕಡಾ 90ರಷ್ಟು ಸರ್ಕಾರಿ ಉದ್ಯೊಗಿಗಳು ಈ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ ಅದರಂತೆಯೇ ಅವರ ನಿರಂತರ ಓದು ಚಾಣಕ್ಷ್ಯತನದಿಂದ ಅವರಿಗೆ ಸರ್ಕಾರಿ ಕೆಲಸ ದೊರೆತಿದೆ.

%d bloggers like this: