ಸಂಕ್ರಾಂತಿಯ ನಂತರ ಈ ರಾಶಿಯವರಿಗೆ ಗುರುಬಲ, ವಿಭಿನ್ನವಾದ ಯೋಗವಿದೆ

ಈ 2021ರ ವರ್ಷ ಭವಿಷ್ಯದಲ್ಲಿ ಈ ರಾಶಿಯವರಿಗೆ ವಿಶೇಷವಾದ ಗುರುಬಲ ಲಭಿಸುತ್ತಿದೆ! ರಾಶಿ ಚಕ್ರಗಳಲ್ಲಿ ಸಂಕ್ರಮಣ ನಡೆದ ಕಾಲದಿಂದ ಹಲವಾರು ರೀತಿಯ ಬದಲಾವಣೆಗಳು ಕಂಡಿವೆ. ಈ ಗ್ರಹಗತಿಗಳ ಗೋಚರದಿಂದಾಗಿ ಈ ಒಂದು ರಾಶಿಯವರಿಗೆ ಇತರೆ ರಾಶಿಗಳಿಗಿಂತ ವಿಭಿನ್ನವಾದ ಯೋಗವಿದೆ. ಹೌದು ಈ ರಾಶಿಯವರಿಗೆ ಶಂಕರಾಚಾರ್ಯರ ಈ ಒಂದು ಶ್ಲೋಕ ಅವರ ಎಲ್ಲಾ ಸರ್ವ ಸಂಕಷ್ಟ ಸಮಸ್ಯೆಗಳಿಂದ ಮುಕ್ತಿಗೊಳಿಸುತ್ತದೆ. ಓಂ ಉಗ್ರಂ ವೀರಂ ಮಹಾವಿಷ್ಣುಂ, ಜ್ವಲತಂ ಸರ್ವತೋಮುಖಂ, ನರಸಿಂಹಂ ಭೀಷಣಂ ಭದ್ರಂ, ಮೃತ್ತೋಮೃತ್ಯು ನಮಾಮ್ಯಹಂ ಎಂಬ ಈ ಶ್ಲೋಕ ಪಠನೆ ಮಾಡುವುದರಿಂದ ಈ ರಾಶಿಯವರ ಸಕಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭಿಸುತ್ತದೆ.

ಹಾಗಾದರೆ ಅಷ್ಟೊಂದು ಮಹತ್ವ ಹೊಂದಿರುವ ಈ ರಾಶಿ ಯಾವುದು ಗೊತ್ತಾ? ಹೌದು ಕನ್ಯಾ ರಾಶಿ ಈ ವರ್ಷದಲ್ಲಿ ವಿಶೇಷವಾದ ಗುರುಬಲ ಪಡೆದಿದೆ. ಈ ರಾಶಿಯವರ ಸಕಲ ಇಷ್ಟಾರ್ಥ, ಆಕಾಂಕ್ಷೆಗಳು ನೆರೆವೇರುತ್ತವೆ, ಅಂದುಕೊಂಡು ಕೆಲಸ, ಕಾರ್ಯಗಳು ಸುಗಮವಾಗಿ, ಸುಲಲಿತವಾಗಿ ನಡೆಯುತ್ತವೆ. ಆದರೆ ಕುಜಗ್ರಹ ಕನ್ಯಾರಾಶಿಯ ಮನೆಯ ಸ್ಥಾನಕ್ಕೆ ಆಗಮಿಸಿದರೆ, ಶಾರೀರಿಕ ಸಮಸ್ಯೆಯಾಗಿ ಈ ಬೆನ್ನುನೋವಿನ ಭಾದೆ ಕಾಡಲಾರಂಭಿಸುತ್ತದೆ‌. ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿದೆ. ವ್ಯಾಪಾರ, ವ್ಯವಹಾರ, ಉದ್ಯೋಗಗಳಲ್ಲಿ ಧನಲಾಭ ಹೆಚ್ಚಾಗುತ್ತದೆ. ಕನ್ಯಾ ರಾಶಿಯವರಿಗೆ ಗುರುಬಲ ಪ್ರಭಾವ ಬೀರಿರುವುದರಿಂದ ಈ ವರ್ಷ ಪೂರ್ತಿಯಾಗಿ ಶುಭಫಲಗಳು ಲಭಿಸುತ್ತದೆ.

ರಾಜಕೀಯ ಕ್ಷೇತ್ರದ ವ್ಯಕ್ತಿಗಳಿಗೆ ಪದವಿ ಪಡೆಯುವ ಅವಕಾಶ ಹೆಚ್ಚಾಗಿದೆ. ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ವಿಚಾರದಲ್ಲಿ ಉನ್ನತ ಪ್ರಗತಿ ಕಂಡು ಬರುತ್ತದೆ. ಈ ಕನ್ಯಾ ರಾಶಿಯ ಜನರಲ್ಲಿ ಅಹಂಕಾರ ಗುಣವಿದ್ದರೆ ತೊರೆದುಬಿಡಿ, ಇಲ್ಲವಾದಲ್ಲಿ ಪ್ರಮುಖ ವ್ಯಕ್ತಿಗಳನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ.

ಇನ್ನು ಆಸ್ತಿಗಳ ವಿಚಾರದಲ್ಲಿ ದಾಯಾದಿಗಳ ಕಲಹ ಉಂಟಾಗುವ ಅವಕಾಶ ವಿದ್ದರು ಕೂಡ ನಿಮ್ಮ ಯೋಗದ ಪರಿಣಾಮ ನಿಮ್ಮ ಮಾತಿಗೆ ಗೌರವ ಕೊಟ್ಟು ಎಲ್ಲ ಸಮಸ್ಯೆಗಳು ಸುಗಮ ಅಂತ್ಯ ಕಾಣುತ್ತದೆ, ಭಾಗ್ಯದ ಸ್ಥಾನದಲ್ಲಿ ರಾಹುಗ್ರಹ ಪ್ರವೇಶ ಪಡೆದರೆ ಈ ರಾಶಿಯವರಿಗೆ ಪಿತೃದೋಷ ಕಾಡುತ್ತದೆ. ಆದ್ದರಿಂದ ಓಂ ಗಂ ಗಣಪತಾಯೇ ನಮಃ ಎಂಬ ಶ್ಲೋಕವನ್ನು 21 ಬಾರಿ ಪಠನೆ ಮಾಡುವುದರಿಂದ ದೋಷ ಪರಿಹಾರವಾಗುತ್ತದೆ. ಸಾಧ್ಯವಾದರೆ ಬಡ ಮಕ್ಕಳಿಗೆ ಪುಸ್ತಕಗಳನ್ನು ದಾನ ಮಾಡಿ ಒಳಿತಾಗುತ್ತದೆ. ಈ ರಾಶಿಯವರಿಗೆ ಪಚ್ಚೆ ಬಣ್ಣ ಅದೃಷ್ಟ ತರುತ್ತದೆ. ಇವರ ಶುಭ ಸಂಖ್ಯೆ2 ಮತ್ತು 5ಸಂಖ್ಯೆಯಾಗಿದೆ.

%d bloggers like this: