ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್, ಜೋರಾಗಿ ನಡೆಯುತ್ತಿದೆ ಸುದೀಪ್ ಅವರ ಬಿಗ್ ಬಾಸ್ ಚಿತ್ರೀಕರಣ

ವಿಕ್ರಾಂತ್ ರೋಣ ಸಿನಿಮಾದ ಪ್ರಮೋಶನ್ ನಡುವೆಯೂ ಕೂಡ ಬಿಗ್ ಬಾಸ್ ಶೋ ಕಡೆ ಗಮನ ಹರಿಸಿದ ಕಿಚ್ಚ ಸುದೀಪ್. ಹೌದು ಮಿನಿ ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಫುಲ್ ಮಿಂಚುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೋಮೋ ಫೋಟೋ ಶೂಟ್ ನ ಒಂದಷ್ಟು ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇತ್ತೀಚೆಗೆ ತಾನೇ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾದ ಭರ್ಜರಿ ಪ್ರಮೋಶನ್ ಮಾಡುವ ಸಾಕಷ್ಟು ಸುದ್ದಿಯಲ್ಲಿದ್ದರು. ಇದರ ನಡುವೆ ಸುದೀಪ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಕಡೆಗೆ ಗಮನ ಹರಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಟೀಮ್ ಪ್ರೋಮೋ ಕೂಡ ರೆಡಿ ಮಾಡಿಕೊಂಡಿದೆ. ಕನ್ನಡ ಕಿರುತೆರೆ ವೀಕ್ಷಕರು ಯಾವಾಗ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ ಎಂದು ಬಹಳ ನಿರೀಕ್ಷೆಯಿಂದ ಕಾದು ಕುಳಿತಿದ್ದರು‌. ಅದೇ ರೀತಿಯಾಗಿ ಅವರ ನಿರೀಕ್ಷೆಗೆ ತಕ್ಕಂತೆ ಬಿಗ್ ಬಾಸ್ ಕಾರ್ಯಕ್ರಮ ಅರಂಭವಾಗುವ ಹೊಸ್ತಿಲಲ್ಲಿ ಬಂದು ನಿಂತಿದೆ. ಅದಕ್ಕೂ ಮುನ್ನ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಇದೇ ಜುಲೈ ತಿಂಗಳ ಅಂತ್ಯ ಅಥವಾ ಆಗಸ್ಟ್ ತಿಂಗಳಿನಲ್ಲಿ ಪ್ರಸಾರವಾಗಲಿದೆ ಎಂದು ತಿಳಿದು ಬಂದಿದೆ.

ಈ ಮಿನಿ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹೆಸರುವಾಸಿಯಾಗಿರುವ ವ್ಯಕ್ತಿಗಳನ್ನು ಸ್ಪರ್ಧಿಗಳಾಗಿ ಇಳಿಸಲಾಗಿದೆಯಂತೆ. ಈ ಮಿನಿ ಬಿಗ್ ಬಾಸ್ ನಲ್ಲಿ ಚೆನ್ನಾಗಿ ಸ್ಪರ್ಧಿಸಿ, ಅತ್ಯುತ್ತಮ ಮನರಂಜನೆ ನೀಡಿ ಗೆದ್ದಂತಹ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರಂತೆ. ಇನ್ನು ಈ ಮಿನಿ ಬಿಗ್ ಬಾಸ್ ಇದು ಓಟಿಟಿ ವೂಟ್ ನಲ್ಲಿ ಪ್ರಸಾರವಾಗಲಿದೆ. ವೂಟ್ ನಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್ 42 ದಿನಗಳ ಕಾಲ ಇರಲಿದೆಯಂತೆ. ಬಿಗ್ ಬಾಸ್ ಸೀಸಸ್ 9ರ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ಬಿಗ್ ಬಾಸ್ ಒಂದು ತಂಡದಿಂದ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿರುವ ರಿಯಾಲಿಟಿ ಶೋ ಡಿಜಿಟಲ್ ಮೀಡಿಯಾದಲ್ಲಿ ಪ್ರಸಾರವಾಗಲಿದೆ. ಇದೂ ಕೂಡ ಒಂದು ರೀತಿಯ ಕುತೂಹಲ ಮೂಡಿಸಿದೆ ಎನ್ನಬಹುದು. ಒಟ್ಟಾರೆಯಾಗಿ ಈ ಮಿನಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರೋಮೋ ಶೋಟ್ ಭರ್ಜರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್ ಅವರು ವೈರೆಟಿ ಶೂಟ್ ನಲ್ಲಿ ಮಿಂಚುತ್ತಿದ್ದಾರೆ.

%d bloggers like this: