ಸೀಮಂತದ ದಿನವೇ ಎಲ್ಲರಿಗೂ ಮಾದರಿ ಆಗುವ ಕೆಲಸ ಮಾಡಿದ ಕನ್ನಡದ ಹಾಸ್ಯ ಕಲಾವಿದ

ಸೀಮಂತದ ದಿನವೇ ಮಾದರಿ ಕಾರ್ಯಕ್ಕೆ ಸಾಕ್ಷಿಯಾದ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಹಾಸ್ಯ ಕಲಾವಿದರಾದ ಗೋವಿಂದೇಗೌಡ ಮತ್ತು ದಿವ್ಯಾ ಶ್ರೀ. ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ಜನಪ್ರಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಅನೇಕ ಪ್ರತಿಭಾವಂತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದೆ. ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಎಲೆ ಮರೆ ಕಾಯಿಯಂತಿದ್ದ ಅನೇಕ ಪ್ರತಿಭಾವಂತ ಕಲಾವಿದರು ಬೆಳಕಿಗೆ ಬಂದು ಇಂದು ಧಾರಾವಾಹಿ, ಸಿನಿಮಾ ಮತ್ತು ಇನ್ನಿತರ ಶೋಗಳ ಮೂಲಕ ಗುರುತಿಸಿಕೊಂಡು ಜನಪ್ರಿಯ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ಅಂತಹ ಕಲಾವಿದರ ಪೈಕಿ ಹಾಸ್ಯ ನಟ ಜಿಜಿ ಉರುಫ್ ಗೋವಿಂದೇಗೌಡ ಮತ್ತು ನಟಿ ದಿವ್ಯಾ ಶ್ರೀ ಜೋಡಿ ಕೂಡ ಒಂದು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ನಟಿಸುತ್ತಿದ್ದ ಇವರಿಬ್ಬರಿಗೆ ಸಮಯ ಕಳೆಯುತ್ತಾ ಗೆಳೆತನ ಆಗುತ್ತದೆ. ಆದೇ ಗೆಳೆತನ ವರ್ಷಗಳ ಬಳಿಕ ಪ್ರೀತಿ ಕೂಡ ಆಗುತ್ತದೆ. ತದ ನಂತರ ತಮ್ಮ ಪ್ರೀತಿಯ ಬಗ್ಗೆ ತಮ್ಮ ಪೋಷಕರಿಗೆ ತಿಳಿಸುತ್ತಾರೆ. ಕುಟುಂಬದ ಒಪ್ಪಿಗೆ ಪಡೆದುಕೊಂಡ ನಂತರ ಶೃಂಗೇರಿಯಲ್ಲಿ ಅತ್ಯಂತ ಸರಳವಾಗಿ ಮದುವೆಯನ್ನ ಆಗುತ್ತಾರೆ. ಇದೀಗ ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರು ಚೊಚ್ಚಲ ಮಗುವಿನ ನಿರೀಕ್ಷೆ ಅಲ್ಲಿದ್ದಾರೆ.

ಅಂತೆಯೇ ಸೀಮಂತದ ಶುಭ ದಿನದಂದು ಈ ಜೋಡಿ ಅಗಲಿದ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರು ತಮ್ಮ ನೇತ್ರಗಳನ್ನ ದಾನ ಮಾಡಿದಂತೆ ಜಿಜಿ ಮತ್ತು ದಿವ್ಯಶ್ರೀ ಮತ್ತು ಅವರ ಕುಟುಂಬದ ಸದಸ್ಯರು ನೇತ್ರದಾನ ಮಾಡಿದ್ದಾರೆ. ಡಾ.ರಾಜ್ ಕುಮಾರ್ ಐ ಬ್ಯಾಂಕ್ ಸಂಸ್ಥೆಗೆ ಭೇಟಿ ನೀಡ ನಿರ್ವಾಹಕರಾದ ವೀರೇಶ್ ಅವರ ಸಮಕ್ಷಮದಲ್ಲಿ ತಮ್ಮ ಇಡೀ ಕುಟುಂಬ ನೇತ್ರದಾನಕ್ಕೆ ಸಹಿ ಮಾಡುತ್ತಿರುವ ಫೋಟೋವೊಂದನ್ನ ನಟ ಗೋವಿಂದೇಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಅದರ ಜೊತೆಗೆ ವಿಶೇಷವಾಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ ಈ ಜೋಡಿ. ಹೌದು ಅರಳೀಮರದ ಕೆಳಗೆ ಕೂತು ಅಪ್ಪು ಅವರ ಭಾವಚಿತ್ರ ಇರುವ ನಿಯತಕಾಲಿಕೆಯನ್ನ ಓದುತ್ತಿರುವಂತಹ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಇವರಿಬ್ಬರ ವಿಶಿಷ್ಟ ಫೋಟೋಶೂಟ್ ಗೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಮತ್ತು ಶುಭ ಹಾರೈಸಿದ್ದಾರೆ.

%d bloggers like this: