ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಡಿ, ಮತ್ತೋರ್ವ ಸ್ವಾಮೀಜಿ ಅವರು ವಿರೋಧ

ಇತ್ತೀಚೆಗೆ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಪೌಷ್ಠಿಕಾಂಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದಾಗಿ ಪ್ರಧಾನ್ ಮಂತ್ರಿ ಪೋಷಣ್ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನ ನೀಡುವ ಕಾರ್ಯಕ್ರಮವನ್ನು ಆರಂಭ ಮಾಡಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಪರ್ಯಾಯವಾಗಿ ಬಾಳೆ ಹಣ್ಣನ್ನು ಸಹ ನೀಡುತ್ತಿದೆ. ಆದರೆ ಇದೀಗ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಿಸುತ್ತಿರುವುದನ್ನ ಖಂಡಿಸಿ ಸಸ್ಯಾಹಾರಿ ಸಮುದಾಯಗಳು ಪ್ರತಿಭಟನೆಯ ಎಚ್ಚರಿಕೆ ನೀಡುತ್ತಿವೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಭಾರಿ ದೊಡ್ಡದಾಗಿಯೇ ನಡೆಯುತ್ತಿವೆ‌. ಅದರಂತೆ ಮೊಟ್ಟೆಯ ವಿಚಾರವಾಗಿ ಯಾವುದೇ ರಾಜಕೀಯ ಸ್ವರೂಪ ಪಡೆದುಕೊಳ್ಳದಿದ್ದರು ಕೂಡ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳ ಬೆಂಕಿ ಹೊತ್ತಿಕೊಂಡಿದೆ ಎಂದರೆ ತಪ್ಪಾಗಲಾರದು.

ಮಠಾಧಿಪತಿಗಳು ಮಾಧ್ಯಮಗೋಷ್ಟಿ ನಡೆಸಿ ಸರ್ಕಾರದ ಈ ನಡೆಗೆ ಭಾರಿ ಆಕ್ರೋಶವನ್ನೇ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತೀಚೆಗೆ ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು ಕೂಡ ಮೊಟ್ಟೆ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಇವರ ನಂತರ ಅಖಿಲ ಭಾರತ ಸಸ್ಯಾಹಾರಿ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿಗಳು ಮೊಟ್ಟೆ ವಿತರಿಸುತ್ತಿರುವ ಯೋಜನೆಗೆ ವ್ಯಾಪಕವಾಗಿ ಕೆಂಡ ಕಾರಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಯಾನಂದ ಸ್ವಾಮೀಜಿಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯನ್ನ ನೀಡುತ್ತಿರುವುದನ್ನ ನಿಲ್ಲಿಸಿ ಅದಕ್ಕಿಂತ ಉತ್ತಮವಾದ ಸಸ್ಯಾಹಾರ ಆಹಾರ ಪಧಾರ್ಥಗಳನ್ನು ನೀಡಿ.

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರಿಗೆ ಸಮಾನತೆ ಭಾವ ಮೂಡುವಂತಹ ವಾತಾವರಣ ನಿರ್ಮಾಣ ಮಾಡಿ ಅದನ್ನ ಬಿಟ್ಟು ಏಕರೂಪತೆ ಇರುವ ಶಾಲೆಗಳಲ್ಲಿ ಒಡಕು ಮೂಡಿಸಬೇಡಿ ಎಂದು ದಯಾನಂದ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಮಾಡಿದರು. ಜೆಡಿಎಸ್, ಕಾಂಗ್ರೆಸ್ ಸರ್ಕಾರವೇ ಬೇಡ ಎಂದು ಇದ್ದ ಈ ಯೋಜನೆಯನ್ನ ಬಿಜೆಪಿ ಸರ್ಕಾರ ಯಾಕೆ ಅಷ್ಟು ಮುತುವರ್ಜಿ ವಹಿಸಿ ಮಾಡುತ್ತಿದೆ. ಸಾಮರಸ್ಯ ಬಗ್ಗೆ ಸಾರಿ ಸಾರಿ ಪಾಠ ಮಾಡುವ ರಾಷ್ಟ್ರೀಯ ಸ್ವಯಂ ಸಂಘ ಈ ವಿಚಾರದಲ್ಲಿ ಮೌನ ತಾಳಿರುವುದಕ್ಕೆ ಕಾರಣ ಏನು. ಇನ್ನು ಮುಂದೆ ನಾವು ಯಾವುದೇ ಸಂಘಗಳೊಂದಿಗೆ ಚರ್ಚೆ ನಡೆಸುವುದಿಲ್ಲ. ಈ ನಿಮ್ಮ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ಮಾಡುವುದಾಗಿ ದಯಾನಂದ ಸ್ವಾಮೀಜಿಗಳು ಸೇರಿದಂತೆ ಲಿಂಗಾಯತ ಧರ್ಮದ ಪ್ರಮುಖ ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

%d bloggers like this: