ಶಾರುಖ್ ಖಾನ್ ಹಾಗು ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸುವ ಬಗ್ಗೆ ಶಾರುಖ್ ಹೇಳಿದ ಮಾತುಗಳಿವು

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಸ್ಟಾರ್ ನಟರು ಬೆಳ್ಳಿತೆರೆಯಲ್ಲಿ ಒಟ್ಟಿಗೆ ಅಭಿನಯಿಸುತ್ತಾರ ಈ ಸ್ಟಾರ್ ನಟರು! ಸ್ಟಾರ್ ಪಟ್ಟ ಬಂದಮೇಲೆ ಕೆಲವು ನಟರು ಮತ್ತೊಬ್ಬ ನಟನ ಚಿತ್ರದಲ್ಲಿ ನಟಿಸುವುದಕ್ಕೆ ಅಥವಾ ತೆರೆ ಹಂಚಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ಇದೀಗ ಬಾಲಿವುಡ್ನ ಬಾದ್ಶಾ ಶಾರುಖ್ ಖಾನ್ ಮತ್ತು ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆಯಾಗಿ ಸಿನಿಮಾ ಮಾಡ್ತಾರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಈ ಸ್ಟಾರ್ ನಟರು ಬಿಟೌನ್ ನಲ್ಲಿ ಅವರದೇ ಆದ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಅಭಿಮಾನಿಗಳ ಒತ್ತಾಸೆ ಏನೆಂದರೆ ಇವರಿಬ್ಬರೂ ಒಟ್ಟಿಗೆ ನಟಿಸಬೇಕು ಎಂಬುದು ಆದರೆ ಇವರ ಆಸೆ ಈಡೇರುತ್ತಾ ಎಂದು ಕಾದು ನೋಡಬೇಕಿದೆ. ನಟ ಅಕ್ಷಯ್ ಕುಮಾರ್ ಶಿಸ್ತಿನ ಸಿಪಾಯಿ ಅದು ಬೆಳಿಗ್ಗೆ ತಮ್ಮ ದಿನವನ್ನು ಆರಂಭಿಸುವುದರಿಂದ ಹಿಡಿದು ಸಂಜೆ ಮುಗಿಯುವವರೆಗೂ ಸಮಯ ಪಾಲನೆ, ಕೆಲಸದ ಬದ್ದತೆ ಮತ್ತು ಚಿತ್ರೀಕರಣದ ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ಅಚ್ಚುಕಟ್ಟಾಗಿ ನಿಭಾಯಿಸಿ ಶೂಟಿಂಗ್ ನಿಂದ ಹೊರ ನಡೆಯುತ್ತಾರೆ.

ಅಕ್ಷಯ್ ಕುಮಾರ್ ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡ್ತಾರೆ ಸದಾ ಚಟುವಟಿಕೆಯಿಂದ ಕೂಡಿರುವಂತಹ ವ್ಯಕ್ತಿ ಏನಾದರೊಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಇವರ ಸಿನಿಮಾದ ಕೆಲವು ಸಾಹಸ ದೃಶ್ಯಗಳನ್ನು ಇವರು ಡೂಪ್ ಇಲ್ಲದೆ ತಾವೇ ಸ್ವತಃ ಪ್ರಯತ್ನಿಸುತ್ತಾರೆ ಅಷ್ಟರ ಮಟ್ಟಿಗೆ ಅವರ ಸಿನಿಮಾ ಪ್ರೀತಿ, ಬದ್ದತೆ ಬೇರೂರಿದೆ. ಆದರೆ ಶಾರುಕ್ ಖಾನ್ ಇವರ ವ್ಯಕ್ತಿತ್ವಕ್ಕೆ ಕೊಂಚ ತದ್ವಿರುದ್ದ ಶಾರುಖ್ ಖಾನ್ ಯಾವಾಗಲೂ ಸಂಜೆಯ ವೇಳೆ, ತಡರಾತ್ರಿ ಶೂಟಿಂಗ್ ನಲ್ಲಿ ತೊಡಗಿಕೊಳ್ಳುವುದು ಇವರ ವ್ಯಕ್ತಿತ್ವ ಆಗಂತ ಇವರಿಗೇನು ಅವಕಾಶ ಕಮ್ಮಿ ಇಲ್ಲ ಇವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಸಾಲು ಸಾಲಾಗಿ ನಿಂತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಶಾರುಖ್ ಖಾನ್ ಬಣ್ಣ ಹಚ್ಚಿಲ್ಲ ಕಾರಣ ಅವರ ಸಿನಿಮಾಗಳು ಕಳೆದ ಎರಡು ವರ್ಷದಲ್ಲಿ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ.

ಆದಕಾರಣ ಅವರು ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ ಇವರ ಮುಂದಿನ ಸಿನಿಮಾದ ಕುರಿತು ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಲು ನೀವು ಸಿದ್ದರಿದ್ದೀರಾ ಎಂದು ಕೇಳಿದಾಗ ಶಾರುಖ್ ನೋ ಎಂದಿದ್ದಾರೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಇದಕ್ಕೆ ನಾನು ಏನು ಹೇಳಬೇಕೋ ನನಗೆ ತಿಳಿದಿಲ್ಲ ಅಕ್ಷಯ್ ಕುಮಾರ್ ಜೊತೆ ನಟಿಸಲು ನನಗೆ ಇಷ್ಟ ಆದರೆ, ಅವರ ಸಮಯ ಪಾಲನೆ ನನಗೆ ಕಷ್ಟ ಮುಂದೆ ಅವಕಾಶ ಸಿಕ್ಕರೆ ನೋಡುವ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು. ಇದೀಗ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಅವರು ಒಟ್ಟಿಗೆ ನಟಿಸುವ ಅವಕಾಶವೊಂದು ಇವರಿಬ್ಬರಿಗೂ ಬಂದಿದೆ ಎಂದು ಬಿಟೌನ್ ಮೂಲಗಳು ತಿಳಿಸಿವೆ. ಸದಕ್ಕೆ ಶಾರುಖ್ ಖಾನ್ ಅವರ ಕೈಯಲ್ಲಿ ಮೂರ್ನಾಲ್ಕೂ ಸಿನಿಮಾಗಳಿದ್ದು ಇತ್ತ ಅಕ್ಷಯ್ ಅವರೂ ಕೂಡ ತಮ್ಮ ಸಿನಿಮಾಗಳಲ್ಲಿ ಬಿಝಿಯಾಗಿದ್ದು ಇತ್ತೀಚೆಗೆ ಅವರ ಲಕ್ಷ್ಮಿ ಚಿತ್ರ ಓಟಿಟಿ ಫ್ಲ್ಯಾಟ್ ಫಾರ್ಮ ನಲ್ಲಿ ಬಿಡುಗಡೆ ಕಂಡು ಮಿಶ್ರ ಪ್ರತಿಕ್ರಿಯೆ ಕೇಳಿಬರುತ್ತಿದೆ. ಎಲ್ಲವೂ ಅವರು ಅಂದುಕೊಂಡಂತೆ ಆದರೆ ಮುಂದಿನ ವರ್ಷ ಇವರಿಬ್ಬರ ಜೋಡಿಯ ಸಿನಿಮಾ ಬೆಳ್ಳಿತೆರೆಯ ಮೇಲೆ ಕಾಣಬಹುದು.

%d bloggers like this: